ಕ್ರಿಯೇಟಿವ್ ಯುವಜನರಿಗೆ ಇಲ್ಲಿದೆ ಕೆಲಸ, MSDCಯಲ್ಲಿ ಕಂಟೆಂಟ್ ಮಾರ್ಕೆಟಿಂಗ್ ಇಂಟರ್ನ್ ಹುದ್ದೆಗೆ ನೇಮಕಾತಿ!

ಮಣಿಪಾಲ: ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಲು, ಟ್ರೆಂಡಿಂಗ್ ರೀಲ್ಸ್ ಸೃಷ್ಟಿಸಲು ಹಾಗೂ ನಿಮ್ಮ ಕ್ರಿಯೇಟಿವಿಟಿಗೆ ವೃತ್ತಿಪರ ವೇದಿಕೆ ಕಲ್ಪಿಸಿಕೊಳ್ಳಲು ಬಯಸುವ ಯುವಜನರಿಗೆ ಇಲ್ಲಿದೆ ಉತ್ತಮ ಅವಕಾಶ. MSDC ಸಂಸ್ಥೆಯ ಮಾರ್ಕೆಟಿಂಗ್ ವಿಭಾಗದಲ್ಲಿ ಕಂಟೆಂಟ್ ಮಾರ್ಕೆಟಿಂಗ್ ಇಂಟರ್ನ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಇನ್‌ಸ್ಟಾಗ್ರಾಂ ಟ್ರೆಂಡ್‌ಗಳು, ಯುವಜನರ ಆಸಕ್ತಿಗಳು ಹಾಗೂ ಡಿಜಿಟಲ್ ಕಂಟೆಂಟ್ ರಚನೆಯಲ್ಲಿ ಆಸಕ್ತಿ ಹೊಂದಿರುವ ಸೃಜನಶೀಲ ಅಭ್ಯರ್ಥಿಗಳಿಗೆ ಈ ಇಂಟರ್ನ್‌ಶಿಪ್ ಉತ್ತಮ ಅನುಭವ ನೀಡಲಿದೆ. ಸಂಸ್ಥೆಯ ಅನುಭವಿ ವಿಡಿಯೊಗ್ರಫಿ ಮತ್ತು ವಿಡಿಯೊ ಎಡಿಟಿಂಗ್ ತಂಡದೊಂದಿಗೆ […]

ಬಂಟ್ವಾಳ: ಕುತ್ತಿಗೆಗೆ ಆಕಸ್ಮಿಕವಾಗಿ ಹಗ್ಗ ಸಿಲುಕಿ 9 ವರ್ಷದ ಬಾಲಕ ಸಾವು

ಬಂಟ್ವಾಳ : ಕುತ್ತಿಗೆಗೆ ಆಕಸ್ಮಿಕವಾಗಿ ಹಗ್ಗ ಸಿಲುಕಿ ಉಸಿರುಗಟ್ಟಿ 9 ವರ್ಷದ ಬಾಲಕ ಮೃತಪಟ್ಟ ದಾರುಣ ಘಟನೆ ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಮಾವಿನಕಟ್ಟೆ ಸಮೀಪದ ಕೇಂತಲೆ ಮನೆಯಲ್ಲಿ ಅ. 25ರ ರಾತ್ರಿ ನಡೆದಿದೆ. ಕೇಂತಲೆ ಮನೆ ನಿವಾಸಿ ಆನಂದ ಪೂಜಾರಿ ಅವರ ಪುತ್ರ ಅಮೃತ್ ಎ. ಪೂಜಾರಿ (9) ಮೃತಪಟ್ಟ ಬಾಲಕ. ಅ. 25ರ ರಾತ್ರಿ ಅಮೃತ್ ಮನೆಯ ಎದುರಿನ ಹಾಲ್‌ನಲ್ಲಿ ಒಬ್ಬನೇ ಆಟವಾಡುತ್ತಿದ್ದ ಎನ್ನಲಾಗಿದೆ. ಈ ವೇಳೆ ಕಿಟಕಿಗೆ ಮೊದಲೇ ಸಿಕ್ಕಿಸಲಾಗಿದ್ದ ಹಗ್ಗ ಆಕಸ್ಮಿಕವಾಗಿ ಆತನ […]

‘ಪ್ರಾಜೆಕ್ಟ್ ಪಂಚತಂತ್ರ’ ನಾಟಕ ಪ್ರದರ್ಶನ, ‘ಯುವ ರಂಗ ಸಂಗಮ’ ಪೋಸ್ಟರ್ ಬಿಡುಗಡೆ

ಉಡುಪಿ: ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ರಜತ ಸಂಭ್ರಮದ ಸರಣಿ ಕಾರ್ಯಕ್ರಮಗಳ ಪ್ರಯುಕ್ತ ಶುಕ್ರವಾರ  ಐವೈಸಿ ಆಡಿಟೋರಿಯಂನಲ್ಲಿ ಮೈಸೂರಿನ ‘ನಿರ್ದಿಗಂತ’ ಅಭಿನಯಿಸಿದ ‘ಪ್ರಾಜೆಕ್ಟ್ ಪಂಚತಂತ್ರ’ ನಾಟಕವು ಯಶಸ್ವಿಯಾಗಿ ಪ್ರದರ್ಶನಗೊಂಡಿತು. ಇದೇ ಸಂದರ್ಭದಲ್ಲಿ ಸಂಸ್ಥೆಯ ರಜತ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ‘ಯುವ ರಂಗ ಸಂಗಮ’ – ರಾಜ್ಯ ಮಟ್ಟದ ಕಾಲೇಜು ವಿದ್ಯಾರ್ಥಿಗಳ ಕನ್ನಡ ನಾಟಕ ಮತ್ತು ಜಾಥಾ ಸ್ಪರ್ಧೆಯ ಅಧಿಕೃತ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಡುಪಿ ಜಿಲ್ಲಾ ಸಹಾಯಕ ನಿರ್ದೇಶಕಿ ಪೂರ್ಣಿಮಾ, ‘ರಂಗಭೂಮಿ’ಯ […]