ಮಣಿಪಾಲ: ಈಶ್ವರ ನಗರದಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ

ಉಡುಪಿ: ಉಡುಪಿ ನಗರಸಭೆಯ ಆಶ್ರಯದಲ್ಲಿ ಹಾಗೂ ಈಶ್ವರ ನಗರ ರೆಸಿಡೆನ್ಸ್ ವೆಲ್ಫೇರ್ ಅಸೋಸಿಯೇಷನ್, ರಾಷ್ಟ್ರೀಯ ಸ್ವಯಂಸೇವಕ ಸಂಘ ಈಶ್ವರ ನಗರ, ವಾರ್ಡ್ ಸಮಿತಿ ಈಶ್ವರ ನಗರ, ಉಡುಪಿ ನಗರಸಭೆಯ ಸಮುದಾಯ ಸಂಘಟನೆ ಇವರ ಸಹಭಾಗಿತ್ವದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸೇವಾ ಸಂಕಲ್ಪ ಅಭಿಯಾನದಡಿಯಲ್ಲಿ ನಿಕಟ ಪೂರ್ವ ನಗರಸಭಾ ಸದಸ್ಯ ಮಂಜುನಾಥ ಮಣಿಪಾಲರವರ ಸಂಯೋಜನೆಯಲ್ಲಿ ಈಶ್ವರ ನಗರದಲ್ಲಿ ಬೃಹತ್ ಸ್ವಚ್ಛತಾ ಅಭಿಯಾನವನ್ನು ಆಯೋಜಿಸಲಾಯಿತು. ಮಣಿಪಾಲ ಬಬ್ಬುಸ್ವಾಮಿ ದೈವಸ್ಥಾನದ ಆಡಳಿತ ಮೊಕ್ತೆಸರ ಶ್ರೀನಿವಾಸ್ ಪೂಜಾರಿ, ಸಂಘಟನೆಗಳ ಪ್ರಮುಖರಾದ […]
ಆಳ್ವಾಸ್ ಆನಂದಮಯ ಆರೋಗ್ಯಧಾಮದಲ್ಲಿ ತ್ರಯಾ ಓ3 ಓಝೋನ್ ಥೆರಪಿ’ ಘಟಕ ಆರಂಭ

ಮೂಡುಬಿದಿರೆ: ಮಿಜಾರಿನ ಶೋಭಾವನ ಆವರಣದಲ್ಲಿರುವ ಆಳ್ವಾಸ್ ಆನಂದಮಯ ಆರೋಗ್ಯಧಾಮದಲ್ಲಿ ‘ತ್ರಯಾ ಓ3 ಓಝೋನ್ ಥೆರಪಿ’ ನೂತನ ಘಟಕವನ್ನು ಬುಧವಾರ ಉದ್ಘಾಟಿಸಲಾಯಿತು. ಇದರೊಂದಿಗೆ ಆರೋಗ್ಯಧಾಮದ ಸಮಗ್ರ ಆರೋಗ್ಯ ಹಾಗೂ ಪ್ರಕೃತಿ ಚಿಕಿತ್ಸಾ ಸೇವೆಗಳ ವ್ಯಾಪ್ತಿಗೆ ಮತ್ತೊಂದು ಚಿಕಿತ್ಸಾ ವಿಧಾನ ಸೇರ್ಪಡೆಯಾಗಿದೆ.ನೂತನ ಘಟಕದಲ್ಲಿ ರೋಗಿಯ ಆರೋಗ್ಯ ಸ್ಥಿತಿ ಹಾಗೂ ಚಿಕಿತ್ಸೆಯ ಅಗತ್ಯಕ್ಕೆ ಅನುಗುಣವಾಗಿ ಓಝೋನೇಟೆಡ್ ನೀರು, ಓಝೋನ್ ಬ್ಯಾಗಿಂಗ್, ಸ್ಕಾಲ್ಪ್ ಬ್ಯಾಗಿಂಗ್, ಸಂಪೂರ್ಣ ದೇಹ ಬ್ಯಾಗಿಂಗ್, ಓಝೋನ್ ಫನಲಿಂಗ್, ಓಝೋನ್ ಎನಿಮಾ, ಕಿವಿ ಮತ್ತು ರೆಕ್ಟಲ್ ಇನ್‌ಸಫ್ಲೇಷನ್, ಯೋನಿ ಇನ್‌ಸಫ್ಲೇಷನ್, […]
ಖ್ಯಾತ ಬಹುಭಾಷಾ ನಟ ನಾನಾ ಪಾಟೇಕರ್ ಇನ್ನಿಲ್ಲ!

ಪಣಜಿ: ಭಾರತೀಯ ಚಿತ್ರರಂಗದ ಖ್ಯಾತ ಹಿರಿಯ ನಟ ನಾನಾ ಪಾಟೇಕರ್ (75) ಅವರು ಗುರುವಾರ ಬೆಳಗ್ಗೆ ಗೋವಾದ ತಮ್ಮ ನಿವಾಸದಲ್ಲಿ ತೀವ್ರ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. ಬೆಳಗ್ಗೆ 5.20ರ ಸುಮಾರಿಗೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರು ಸುಮಾರು 45 ನಿಮಿಷಗಳ ಕಾಲ ಸಿಪಿಆರ್ ನಡೆಸಿದರೂ ಯಾವುದೇ ಸ್ಪಂದನೆ ದೊರೆಯಲಿಲ್ಲ ಎಂದು ಮಣಿಪಾಲ್ ಆಸ್ಪತ್ರೆ ಮೂಲಗಳು ತಿಳಿಸಿವೆ. ಈ ಘಟನೆಗೆ ಸಂಬಂಧಿಸಿದಂತೆ ಮೆಡಿಕೋ-ಲೀಗಲ್ ಪ್ರಕರಣ (MLC) ದಾಖಲಿಸಲಾಗಿದ್ದು, ಸಾವಿನ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು […]