ಉಡುಪಿ: ಉಡುಪಿ ನಗರಸಭೆಯ ಆಶ್ರಯದಲ್ಲಿ ಹಾಗೂ ಈಶ್ವರ ನಗರ ರೆಸಿಡೆನ್ಸ್ ವೆಲ್ಫೇರ್ ಅಸೋಸಿಯೇಷನ್, ರಾಷ್ಟ್ರೀಯ ಸ್ವಯಂಸೇವಕ ಸಂಘ ಈಶ್ವರ ನಗರ, ವಾರ್ಡ್ ಸಮಿತಿ ಈಶ್ವರ ನಗರ, ಉಡುಪಿ ನಗರಸಭೆಯ ಸಮುದಾಯ ಸಂಘಟನೆ ಇವರ ಸಹಭಾಗಿತ್ವದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸೇವಾ ಸಂಕಲ್ಪ ಅಭಿಯಾನದಡಿಯಲ್ಲಿ ನಿಕಟ ಪೂರ್ವ ನಗರಸಭಾ ಸದಸ್ಯ ಮಂಜುನಾಥ ಮಣಿಪಾಲರವರ ಸಂಯೋಜನೆಯಲ್ಲಿ ಈಶ್ವರ ನಗರದಲ್ಲಿ ಬೃಹತ್ ಸ್ವಚ್ಛತಾ ಅಭಿಯಾನವನ್ನು ಆಯೋಜಿಸಲಾಯಿತು.
ಮಣಿಪಾಲ ಬಬ್ಬುಸ್ವಾಮಿ ದೈವಸ್ಥಾನದ ಆಡಳಿತ ಮೊಕ್ತೆಸರ ಶ್ರೀನಿವಾಸ್ ಪೂಜಾರಿ, ಸಂಘಟನೆಗಳ ಪ್ರಮುಖರಾದ ಹರೀಶ್ ಜಿ ಕಲ್ಮಾಡಿ, ಶ್ರೀನಾಥ್ ಮಣಿಪಾಲ, ಸುರೇಶ್ ಆಚಾರ್ಯ, ಡಾ.ಬಾಲಚಂದ್ರ, ಡಾ.ಸುರೇಶ ರಮಣಮಯ್ಯ, ಡಾ. ವಿನಾಯಕ್ ಶೆಣೈ, ಗಣಪತಿ ಕಾಮತ್, ರಾಜವರ್ಮ ಅರಿಗ, ಮಾಧವ ಶಾನಭೋಗ್, ಗಿರೀಶ್, ಕೃಷ್ಣ ನಾಯ್ಕ ನಗರಸಭೆಯ ಆರೋಗ್ಯ ಅಧಿಕಾರಿ ಪ್ರಕಾಶ್ ಪ್ರಭು, ಸ್ವಚ್ಛತಾ ಸಂಯೋಜಕರಾದ ಸುರೇಶ್ ಶೆಟ್ಟಿ, ಪ್ರಶಾಂತ್ ಸನಿಲ್ ಮತ್ತಿತರರು ಉಪಸ್ಥಿತರಿದ್ದರು.















