Explainer ಫ್ಲೈದುಬೈ ಘಟನೆ ಬಳಿಕ ಮತ್ತೆ ಚರ್ಚೆಗೆ ಬಂದ ‘2 ಪೈಲಟ್’ ನಿಯಮ; ಕಾಕ್‌ಪಿಟ್‌ನಲ್ಲಿ ಒಬ್ಬರೇ ಉಳಿದರೆ ಏನಾಗುತ್ತೆ

ಫ್ಲೈದುಬೈ ವಿಮಾನದ ಕ್ಯಾಪ್ಟನ್ ಮೇಲೆ ಸಹ-ಪೈಲಟ್ ನಡೆಸಿದ ದಾಳಿ ವರದಿಯಾಗಿರುವ ಹಿನ್ನೆಲೆಯಲ್ಲಿ, ವಿಮಾನದ ಕಾಕ್‌ಪಿಟ್ ಭದ್ರತೆ ಮತ್ತೆ ಚರ್ಚೆಗೆ ಬಂದಿದೆ. ಸಾಮಾನ್ಯವಾಗಿ ಕಾಕ್‌ಪಿಟ್‌ಗೆ ಹೊರಗಿನಿಂದ ಯಾರಾದರೂ ನುಗ್ಗದಂತೆ ಭದ್ರತೆ ಇರುತ್ತದೆ. ಆದರೆ, ಕಾಕ್‌ಪಿಟ್‌ನೊಳಗೆ ಇರುವ ವ್ಯಕ್ತಿಯಿಂದಲೇ ಅಪಾಯ ಎದುರಾದರೆ…? ಇದೇ ಪ್ರಶ್ನೆ ಈ ಹಿಂದೆಯೂ ಹಲವು ಅಪಘಾತಗಳ ಬಳಿಕ ಎದ್ದಿತ್ತು. ಈ ಪ್ರಶ್ನೆಗೆ ಉತ್ತರ ಹುಡುಕುವಾಗ ಎರಡು ಪ್ರಮುಖ ಘಟನೆಗಳು ನೆನಪಿಗೆ ಬರುತ್ತವೆ — 1999ರ ಈಜಿಪ್ಟ್‌ ಏರ್ ಫ್ಲೈಟ್ 990 ಮತ್ತು 2015ರ ಜರ್ಮನ್‌ವಿಂಗ್ಸ್ ಫ್ಲೈಟ್ […]

ಗುಜರಾತ್‌ ಏಕರೂಪ ನಾಗರಿಕ ಸಂಹಿತೆಗೆ ಮುರ್ಮು ಸಹಿ ಬುಡಕಟ್ಟು ಸಮುದಾಯಕ್ಕೆ ವಿನಾಯಿತಿ

ಗಾಂಧಿನಗರ: ಉತ್ತರಾಖಂಡದ ಬೆನ್ನಲ್ಲೇ ದೇಶದಲ್ಲೇ ಎರಡನೇ ರಾಜ್ಯವಾಗಿ ಗುಜರಾತ್(Gujarat) ಏಕರೂಪ ನಾಗರಿಕ ಸಂಹಿತೆ(UCC) ಜಾರಿಗೆ ತರಲು ಸಜ್ಜಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು(Droupadi Murmu) ಅವರು ಗುಜರಾತ್ ಏಕರೂಪ ನಾಗರಿಕ ಸಂಹಿತೆ ಮಸೂದೆ, 2026ಕ್ಕೆ ತಮ್ಮ ಅಂಕಿತ ಹಾಕಿದ್ದಾರೆ. ರಾಜ್ಯ ಸರ್ಕಾರವು ನಿಯಮಾವಳಿಗಳ ಅಧಿಸೂಚನೆ (Notification) ಹೊರಡಿಸಿದ ನಂತರ ಈ ನೂತನ ಕಾಯ್ದೆ ಸಂಪೂರ್ಣವಾಗಿ ಜಾರಿಗೆ ಬರಲಿದೆ. ಪರಿಶಿಷ್ಟ ಪಂಗಡಗಳ (ST) ಸಮುದಾಯವನ್ನು ಈ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಗುಜರಾತ್ ವಿಧಾನಸಭೆಯಲ್ಲಿ ಸುಮಾರು ಏಳು ಮುಕ್ಕಾಲು ಗಂಟೆಗಳ ಸುದೀರ್ಘ […]

Asian Games 2026: ರಿಕರ್ವ್‌ ಅರ್ಚರಿಯಲ್ಲಿ ಭಾರತಕ್ಕೆ ಮೊದಲ ಚಿನ್ನ – ಇತಿಹಾಸ ಬರೆದ 17 ವರ್ಷದ ಕುಂಕುಮ್‌

ನಗೋಯಾ: ಜಪಾನ್‌ನ ಒಕಜಾಕಿಯಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ, ಭಾರತದ 17 ವರ್ಷದ ಬಿಲ್ಲುಗಾರ್ತಿ ಕುಂಕುಮ್ ಮೊಹೋದ್ (Kumkum Mohod) ಅವರು ಮಹಿಳೆಯರ ವೈಯಕ್ತಿಕ ರಿಕರ್ವ್ ವಿಭಾಗದಲ್ಲಿ (Recurve Individual) ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದರು. ಈ ವಿಭಾಗದಲ್ಲಿ ಭಾರತದ ಮೊದಲ ಚಾಂಪಿಯನ್ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ಐದು ಸೆಟ್‌ಗಳ ಪಂದ್ಯವು 5-5 ಸಮಬಲದಲ್ಲಿ ಅಂತ್ಯಗೊಂಡ ನಂತರ, ‘ಶೂಟ್-ಆಫ್’ನಲ್ಲಿ (ಒಂದೇ ಬಾಣದ ನಿರ್ಣಾಯಕ ಸುತ್ತು) ದಕ್ಷಿಣ ಕೊರಿಯಾದ ಯೆಜಿನ್ ಓ ಅವರನ್ನು 6-5 ಅಂತರದಿಂದ […]

ಹಿರೇಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸುತ್ತುಪೌಳಿ ಕಾಮಗಾರಿಗೆ ಶಿಲಾ ಮುಹೂರ್ತ

ಧಾರ್ಮಿಕ ವಿಧಿವಿಧಾನಗಳೊಂದಿಗೆ ಕಾಮಗಾರಿಗೆ ಚಾಲನೆ; ಜೀರ್ಣೋದ್ಧಾರದ ವಿನ್ಯಾಸ ಪರಿಚಯಿಸುವ ವಾಕ್‌ಥ್ರೂ ವೀಡಿಯೊ ಅನಾವರಣ ಹಿರೇಬೆಟ್ಟು: ಭಟ್ರಕೋಡಿ–ಹಿರೇಬೆಟ್ಟಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಕೈಗೆತ್ತಿಕೊಳ್ಳಲಾಗಿರುವ ಸುತ್ತುಪೌಳಿ ಕಾಮಗಾರಿಯ ಪ್ರಾರಂಭ ಹಾಗೂ ಶಿಲಾ ಮುಹೂರ್ತ ಕಾರ್ಯಕ್ರಮವು ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು. ಕ್ಷೇತ್ರದ ತಂತ್ರಿವರ್ಯರಾದ ಡಾ. ಸತ್ಯಕೃಷ್ಣ ಭಟ್, ಮಂಗಳೂರು ಅವರ ನೇತೃತ್ವದಲ್ಲಿ ದೇವತಾ ಪ್ರಾರ್ಥನೆ, ಪುಣ್ಯಾಹವಾಚನ, ದ್ವಾದಶ ನಾರಿಕೇಳ ಮಹಾಗಣಪತಿ ಹೋಮ ಸೇರಿದಂತೆ ವಿವಿಧ ವೈದಿಕ ವಿಧಿವಿಧಾನಗಳು ನೆರವೇರಿದವು. ಧನುರ್ ಲಗ್ನದ ಸುಮುಹೂರ್ತದಲ್ಲಿ ಸುತ್ತುಪೌಳಿ ಕಾಮಗಾರಿಗೆ ಶಿಲಾ […]

ತ್ರಿಶಾ ಪದವಿ ಪೂರ್ವ ಕಾಲೇಜಿನಲ್ಲಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆ

ಉಡುಪಿ – ಕಲ್ಯಾಣಪುರದಲ್ಲಿರುವ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಸಹಭಾಗಿತ್ವದ ತ್ರಿಶಾ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಜನ್ಮ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸಲಾಯಿತು. ಸತ್ಯ ,ತ್ಯಾಗ , ಅಹಿಂಸೆ ಸರಳತೆಗೆ ಹೆಸರಾದಂತಹ ಮಾಹನ್ ಚೇತನರ‌ ನೆನಪಿಸಿಕೊಳ್ಳಲಾಯಿತು,ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ರಾಮಕೃಷ್ಣ ಹೆಗಡೆ, ಉಪ ಪ್ರಾಂಶುಪಾಲರಾದ ಜೋಯಲ್ ಮನೋಜ್ ಫರ್ನಾಂಡೀಸ್ ಹಾಗೂ ಬೋಧಕ ಬೋಧಕೇತರ […]