ಗ್ರಾಮೀಣ ಭಾಗದಲ್ಲಿ ತಜ್ಞ ವೈದ್ಯಕೀಯ ಸೇವೆ ಹೆಚ್ಚಿಸಲು ವೈದ್ಯಕೀಯ ಕಾಲೇಜುಗಳಿಗೆ ಆಸ್ಪತ್ರೆಗಳ ದತ್ತು, ಆರೋಗ್ಯ ಸಚಿವರು ಹೇಳಿದ್ದೇನು?

ಬೆಂಗಳೂರು: ಗ್ರಾಮೀಣ ಪ್ರದೇಶಗಳಲ್ಲಿ ತಜ್ಞ ವೈದ್ಯಕೀಯ ಸೇವೆಗಳನ್ನು ಮತ್ತಷ್ಟು ಸುಧಾರಿಸುವ ಉದ್ದೇಶದಿಂದ ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳು ತಾಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು (CHC) ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು (PHC) ದತ್ತು ಪಡೆದು ಸೇವೆ ನೀಡುವಂತೆ ಕರ್ನಾಟಕ ಸರ್ಕಾರ ನಿರ್ದೇಶಿಸಿದೆ. ಸಾರ್ವಜನಿಕ ಆರೋಗ್ಯ ಸೇವೆಯಲ್ಲಿರುವ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳು ಜಂಟಿಯಾಗಿ ಈ ಉಪಕ್ರಮವನ್ನು ಕೈಗೊಂಡಿವೆ. ಇದರಡಿ ಪ್ರತಿ ವೈದ್ಯಕೀಯ ಕಾಲೇಜು […]

ದೃಷ್ಟಿ ದೋಷ ಇರುವವರಿಗೆ ನೆರವಾಗಲಿದೆ ಗೂಗಲ್‌ನ ‘ಗೈಡೆಡ್ ವಿಷನ್’ ತಂತ್ರಜ್ಞಾನ! ಈ ಹೊಸ ತಂತ್ರಜ್ಞಾನದಲ್ಲಿ ಏನೇನಿದೆ?

ನವದೆಹಲಿ: ದೃಷ್ಟಿ ದೋಷ ಹೊಂದಿರುವವರಿಗೆ ಸುತ್ತಮುತ್ತಲಿನ ಪರಿಸರವನ್ನು ಅರ್ಥಮಾಡಿಕೊಳ್ಳಲು ನೆರವಾಗುವ ‘ಗೈಡೆಡ್ ವಿಷನ್’ (Guided Vision) ಎಂಬ ಹೊಸ ಫೀಚರ್‌ ಅನ್ನು ಗೂಗಲ್ ತನ್ನ **ಜೆಮಿನಿ ಲೈವ್ (Gemini Live)**ನಲ್ಲಿ ಪರಿಚಯಿಸಿದೆ. ಫೋನ್‌ನ ಕ್ಯಾಮೆರಾವನ್ನು ಆನ್ ಮಾಡಿ ಸುತ್ತಮುತ್ತಲಿನ ದೃಶ್ಯವನ್ನು ತೋರಿಸಿದರೆ, ಜೆಮಿನಿ ಲೈವ್ ಕೃತಕ ಬುದ್ಧಿಮತ್ತೆ (AI) ಮೂಲಕ ಅದನ್ನು ವಿಶ್ಲೇಷಿಸಿ ಧ್ವನಿ ರೂಪದಲ್ಲಿ ವಿವರಿಸುತ್ತದೆ. ಉದಾಹರಣೆಗೆ, ಮುಂದೆ ಕುರ್ಚಿ ಇದ್ದರೆ ಅಥವಾ ಎಡಭಾಗದಲ್ಲಿ ಬಾಗಿಲು ಇದ್ದರೆ ಅದನ್ನು ಬಳಕೆದಾರರಿಗೆ ತಿಳಿಸುತ್ತದೆ. ಕ್ಯಾಮೆರಾದ ಕೋನ ಸರಿಯಾಗಿಲ್ಲದಿದ್ದರೆ, […]

ಕಾಪು: ತಂದೆ, ಮಗಳು ನಾಪತ್ತೆ

ಕಾಪು: ಉಳಿಯಾರಗೋಳಿ ಗ್ರಾಮದ ಕಲ್ಯಾ ಭರತ್ ನಗರ ನಿವಾಸಿ ದಿನೇಶ್ ಶೆಟ್ಟಿಗಾರ(45) ಹಾಗೂ ತನ್ನ 5 ವರ್ಷದ ಹೆಣ್ಣು ಮಗು ವಿಸ್ಮಿತ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಕೂಲಿ ಕೆಲಸ ಮಾಡಿಕೊಂಡಿದ್ದ ಇವರು, ಸೆ.26ರ ತನ್ನ ಮಗುವಿನ ಹುಟ್ಟಿದ ಹಬ್ಬಕ್ಕಾಗಿ ಮಗಳಿಗೆ ಬಟ್ಟೆ ತೆಗೆದುಕೊಡಿಸುವುದಾಗಿ ಹೇಳಿ ಸೆ.25ರಂದು ಸಂಜೆ ಮನೆಯಿಂದ ಮಗು ಅನ್ವಿತಳನ್ನು ಕರೆದುಕೊಂಡು ಹೋದವರು ಈವರೆಗೆ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Rishabh Shetty: ಕಂಬಳ ಉದ್ಘಾಟನೆಯ ಎಕ್ಸ್‌ಕ್ಲೂಸಿವ್‌ ಮಾಹಿತಿ ಕೊಟ್ಟ ಶಾಸಕ ರೈ; ಮೈಸೂರು ಕಂಬಳಕ್ಕೆ ರಿಷಭ್‌ ಶೆಟ್ಟಿ ಸಾಥ್

ಕರಾವಳಿಯ ಕಂಬಳ ಮೈಸೂರು ದಸರಾ ವೇದಿಕೆಗೆ! ಅಕ್ಟೋಬರ್ 18 ಮತ್ತು 19ರಂದು ಸುಮಾರು 160 ಜೋಡಿ ಕೋಣಗಳ ಓಟ ನಡೆಯಲಿದೆ. ಸೀನಿಯರ್ ವಿಭಾಗದ ವಿಜೇತರಿಗೆ 16 ಗ್ರಾಂ ಚಿನ್ನ ಸೇರಿ ಬಹುಮಾನ ಸಿಗಲಿದೆ ಎಂದು ಮಾಹಿತಿ ಹೊರಬಿದ್ದಿದೆ. ಮೈಸೂರು: ಈಗ ಗದ್ದೆಗೆ ಇಳಿಯುತ್ತಿರುವ ಕೋಣಗಳು ಕಾಡುಬೆಟ್ಟು ಶಿವಣ್ಣನವರದ್ದು…! ಇದು ಮೈಸೂರು ಕಂಬಳದ ಕಾಮೆಂಟ್ರಿಯಲ್ಲಿ (Commentary) ಕೇಳಿಬಂದರೆ ಅಚ್ಚರಿ ಪಡಬೇಡಿ; ಯಾಕಂದ್ರೆ ನಮ್ಮ ಡಿವೈನ್‌ ಸ್ಟಾರ್‌ ಮೈಸೂರು ಕಂಬಳ ಉದ್ಘಾಟನೆಗೆ ಬರ್ತಾರಂತೆ ಕಣ್ರೀ! ವಿಶ್ವವಿಖ್ಯಾತ ಮೈಸೂರು ದಸರಾ (Mysuru […]

ಕ್ರೈಸ್ಟ್‍ಕಿಂಗ್: ಗಾಂಧಿ ಜಯಂತಿ ಆಚರಣೆ

ಕಾರ್ಕಳ: ಇಲ್ಲಿನ ಕ್ರೈಸ್ಟ್‍ಕಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರು ಶಾಸ್ತ್ರೀ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಂಸ್ಥೆಯ ಪದವಿಪೂರ್ವ ವಿಭಾಗದ ಪ್ರಾಚಾರ್ಯರಾದ ಲಕ್ಷ್ಮೀ ನಾರಾಯಣ ಕಾಮತ್, ಪ್ರೌಢಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ಜೋಸ್ನಾ ಸ್ನೇಹಲತಾ, ಹಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಐ.ಕ್ರಿಸ್ಟೋಫರ್ ಕೋಟ್ಯಾನ್, ಕಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಜಾಲಿ ಜೇಕಬ್ ಅತಿಥಿಗಳಾಗಿದ್ದರು. ಈ ಸಂದರ್ಭದಲ್ಲಿ ಅತಿಥಿಗಳು ಹಾಗೂ ಶಾಲಾ ಸಿಬ್ಬಂದಿಗಳು ಮಹಾತ್ಮ ಗಾಂಧೀಜಿ ಹಾಗೂ ಲಾಲ್‍ಬಹದ್ದೂರು […]