ಕರಾವಳಿ ಹೈಕೋರ್ಟ್ ಪೀಠ ಸ್ಥಾಪನೆಗೆ ತ್ರಿಸದಸ್ಯ ನ್ಯಾಯಮೂರ್ತಿಗಳ ಸಮಿತಿ ರಚನೆಗೆ ಸ್ವಾಗತ – ಪ್ರೇಮ್ ಪ್ರಸಾದ್ ಶೆಟ್ಟಿ

ಉಡುಪಿ, ಸೆಪ್ಟೆಂಬರ್ 30:ಕರಾವಳಿ ಭಾಗದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಸಂಚಾರಿ / ಶಾಶ್ವತ ಪೀಠ ಸ್ಥಾಪನೆಯ ಅಧ್ಯಯನಕ್ಕಾಗಿ ಮಾನ್ಯ ಮುಖ್ಯ ನ್ಯಾಯಮೂರ್ತಿ ಶ್ರೀ ವಿಭು ಬಖ್ರು ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಮೂವರು ನ್ಯಾಯಮೂರ್ತಿಗಳ ಸಮಿತಿಯನ್ನು ರಚಿಸಿರುವುದನ್ನು ಕರಾವಳಿ ಕರ್ನಾಟಕ ಹೈಕೋರ್ಟ್ ಪೀಠ ಹೋರಾಟ ಸಮಿತಿಯ ಸಂಚಾಲಕರು ಹಾಗೂ ‘ಯು-ಆಕ್ಟ್’ (U-ACT) ಸಂಸ್ಥಾಪಕರಾದ ನ್ಯಾಯವಾದಿ ಪ್ರೇಮ್ ಪ್ರಸಾದ್ ಶೆಟ್ಟಿ ಅವರು ಹಾರ್ದಿಕವಾಗಿ ಸ್ವಾಗತಿಸಿದ್ದಾರೆ. ​ಮಾನ್ಯ ನ್ಯಾಯಮೂರ್ತಿ ಅನು ಶಿವರಾಮನ್, ಮಾನ್ಯ ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಹಾಗೂ ಮಾನ್ಯ […]

ಸರ್ವಾಂಗಾಸನದಲ್ಲಿ ನಿರಂತರ ಸಾಧನೆ: ಆಳ್ವಾಸ್‌ನ ಪಿ.ಕೆ. ವಿಕಾಸ್‌ಗೆ ಬಿಡಬ್ಲ್ಯುಆರ್ ವಿಶ್ವ ದಾಖಲೆ ಮಾನ್ಯತೆ

ಮೂಡುಬಿದಿರೆ: ಸರ್ವಾಂಗಾಸನದಲ್ಲಿ ನಿರಂತರವಾಗಿ ಆಸನ ನಿರ್ವಹಿಸಿದ ಸಾಧನೆಗಾಗಿ ಆಳ್ವಾಸ್ ಕಾಲೇಜ್ ಆಫ್ ನ್ಯಾಚುರೋಪತಿ ಅಂಡ್ ಯೋಗಿಕ್ ಸೈನ್ಸಸ್‌ನ ತೃತೀಯ ವರ್ಷದ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ವಿದ್ಯಾರ್ಥಿ ಪಿ.ಕೆ. ವಿಕಾಸ್‌ರವರು ಬುಕ್ ಆಫ್ ವರ್ಲ್ಡ ರೆಕಾರ್ಡ್ಸನಿಂದ ವಿಶ್ವ ದಾಖಲೆಯ ಮಾನ್ಯತೆ ಪಡೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮೂಲದ ವಿಕಾಸ್‌ರವರು ಐದನೇ ತರಗತಿಯಿಂದಲೇ ಯೋಗಾಭ್ಯಾಸ ಆರಂಭಿಸಿದ್ದು, ಕಳೆದ 11 ವರ್ಷಗಳಿಂದ ನಿರಂತರವಾಗಿ ಯೋಗವನ್ನು ಅಭ್ಯಾಸ ಮಾಡುತ್ತಿದ್ದಾರೆ. ಸರ್ವಾಂಗಾಸನದ ಪ್ರದರ್ಶನದಲ್ಲಿ ಸಮತೋಲನ, ದೈಹಿಕ ಸಾಮರ್ಥ್ಯ, ನಮ್ಯತೆ, ಸ್ಥಿರತೆ, […]

ಬೈಂದೂರು: ಕೊಲೆ ಯತ್ನ ಪ್ರಕರಣದ ಆರೋಪಿಗಳಿಬ್ಬರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ; ಸೌಪರ್ಣಿಕಾ ನದಿ ಸಮೀಪ ಘಟನೆ- ಕೆಲವು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ.!

ಉಡುಪಿ: ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಯತ್ನ ಪ್ರಕರಣದ ಆರೋಪಿಗಳಿಬ್ಬರ ಮೃತದೇಹಗಳು ಬೈಂದೂರು ತಾಲ್ಲೂಕಿನ ಗೋಳಿಹೊಳೆ ಗ್ರಾಮದ ಚಾರ್ಸಲ್‌ ಪ್ರದೇಶದ ಸೌಪರ್ಣಿಕಾ ನದಿ ಸಮೀಪ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ.ಮೃತರನ್ನು ವಿಟ್ಟಲ್ ನಾಯಕ್ (35) ಹಾಗೂ ಭವ್ಯಾ ಅಲಿಯಾಸ್ ನಿಶ್ಮಿತಾ (33) ಎಂದು ಗುರುತಿಸಲಾಗಿದೆ.ವಿಠ್ಠಲ್ ನಾಯ್ಕ್ ಹಾಗೂ ಭವ್ಯಾ ಜೊತೆ ಸೇರಿ ಅನಾರೋಗ್ಯದಲ್ಲಿದ್ದ ವಿಠಲ್ ನಾಯ್ಕ್ ಪತ್ನಿಗೆ ಇಂಜೆಕ್ಷನ್‌ಗಳನ್ನು ನೀಡಿ ವಿಷಪ್ರಾಶನಗೊಳಿಸಿ ಕೊಲೆ ಮಾಡಲು ಯತ್ನಿಸಿದ್ದರು ಎನ್ನಲಾಗಿದ್ದು, ಈ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ಇಬ್ಬರ ವಿರುದ್ಧ ಕೊಲೆಯತ್ನ […]

ಉಡುಪಿ: ಪೆಟ್ರೋಲ್ ಬಂಕ್ ಬಳಿ ಕಳುವಾಗಿದ್ದ ಶ್ರೀ ದುರ್ಗಾಂಬಾ ಬಸ್ ಮುದರಂಗಡಿಯಲ್ಲಿ ಪತ್ತೆ

ಉಡುಪಿ: ನಗರದ ಹನುಮಾನ್ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿ ನಿಲ್ಲಿಸಿದ್ದ ವೇಳೆ ಕಳುವಾಗಿದ್ದ ಸುಮಾರು ₹40 ಲಕ್ಷ ಮೌಲ್ಯದ ಶ್ರೀ ದುರ್ಗಾಂಬಾ ಬಸ್ನ್ನು ಪೊಲೀಸರು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ. ಬಸ್ನ್ನು ಕಳವು ಮಾಡಿದ ಆರೋಪಿಗಳು ಮುದರಂಗಡಿ ಸಮೀಪದ ಮುದ್ದಾಡಿ ಎಂಬಲ್ಲಿನ ಹಾಡಿಯಲ್ಲಿ ಬಿಟ್ಟು ಹೋಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. KA-20-AD-1931 ನೋಂದಣಿ ಸಂಖ್ಯೆಯ ಶ್ರೀ ದುರ್ಗಾಂಬಾ ಬಸ್ನ್ನು ಸೆಪ್ಟೆಂಬರ್ 28ರಂದು ರಾತ್ರಿ 9.48ರ ಸುಮಾರಿಗೆ ಹನುಮಾನ್ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿ ನಿಲ್ಲಿಸಲಾಗಿತ್ತು. ಬಳಿಕ ರಾತ್ರಿ 10 ಗಂಟೆ ಸುಮಾರಿಗೆ […]

ಉಡುಪಿ: ಯುವತಿ ನಾಪತ್ತೆ

ಉಡುಪಿ: ಹುಬ್ಬಳ್ಳಿ ಜಿಲ್ಲೆ ಉನ್ಕಲ್ ಸಾಯಿ ನಗರದ ಅಚ್ಚವ್ವನ ಕಾಲೋನಿಯ ನಿವಾಸಿ ಮೇಘಾ ಕಂಚಿ (20) ಎಂಬ ಯುವತಿಯು ಸೆಪ್ಟಂಬರ್ 7 ರಂದು ಮಧ್ಯಾಹ್ನ 3.30 ರ ಸುಮಾರಿಗೆ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಅಜ್ಜರಕಾಡುವಿನಲ್ಲಿರುವ ಸಂಬಂಧಿಕರ ಮನೆಯಿಂದ ಹೋದವರು ವಾಪಾಸು ಮನೆಗೂ ಬಾರದೇ, ಸಂಬAಧಿಕರ ಮನೆಗೂ ಹೋಗದೇ ನಾಪತ್ತೆಯಾಗಿರುತ್ತಾರೆ. 5 ಅಡಿ 1 ಇಂಚು ಎತ್ತರ, ಸಾಧಾರಣ ಶರೀರ, ಎಣ್ಣೆಕಪ್ಪು ಮೈಬಣ್ಣ ಹೊಂದಿದ್ದು, ಇನ್ನಡ, ಇಂಗ್ಲೀಷ್ ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ […]