ಗಿಟಾರ್‌ಗೆ ಹೆಲ್ಮೆಟ್ ಹಾಕಿಲ್ಲವೆಂದು ದಂಡ! ಬೈಕ್ ಸವಾರನಿಗೆ ಚಲನ್ ಕಳುಹಿಸಿದ ಎಐ ಕ್ಯಾಮೆರಾ; ಫೋಟೋ ನೋಡಿ ಸವಾರ ಶಾಕ್

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪತ್ತೆಹಚ್ಚಲು ಅಳವಡಿಸಿರುವ ಎಐ ಆಧಾರಿತ ಕ್ಯಾಮೆರಾ ಇದೀಗ ವಿಚಿತ್ರ ಕಾರಣಕ್ಕೆ ದಂಡ ವಿಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸ್ಕೂಟರ್‌ನಲ್ಲಿ ಗಿಟಾರ್ ಕೊಂಡೊಯ್ಯುತ್ತಿದ್ದ ವ್ಯಕ್ತಿಗೆ, ಗಿಟಾರ್ ಅನ್ನು ವ್ಯಕ್ತಿಯೆಂದು ಭಾವಿಸಿ ಹೆಲ್ಮೆಟ್ ಧರಿಸಿಲ್ಲ ಎಂದು ಚಲನ್ ಜಾರಿ ಮಾಡಲಾಗಿದೆ. ಸೌವಿಕ್ ದತ್ತ ಎಂಬುವವರು ಹೆಬ್ಬಾಳದಿಂದ ಟಿನ್ ಫ್ಯಾಕ್ಟರಿ ಕಡೆಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಅವರು ಗಿಟಾರ್ ಅನ್ನು ಬೆನ್ನಿಗೆ ಹಾಕಿಕೊಂಡಿದ್ದರು. ಮಾರ್ಗಮಧ್ಯೆ ಅಳವಡಿಸಲಾಗಿದ್ದ ಎಐ ಕ್ಯಾಮೆರಾ, ಬೆನ್ನಿನ ಮೇಲಿದ್ದ ಗಿಟಾರ್ ಅನ್ನು […]
ಸಾಮಾಜಿಕ ಜಾಲತಾಣದ ವಿಡಿಯೋ ನಂಬಿ ಮನೆಯಲ್ಲೇ e-KYC ಮಾಡಿಕೊಳ್ಳುತ್ತಿರುವವರಿಗೆ ಆಹಾರ ಇಲಾಖೆ ಮಹತ್ವದ ಎಚ್ಚರಿಕೆ

ಬೆಂಗಳೂರು: ರೇಷನ್ ಕಾರ್ಡ್‌ನ e-KYC ಪ್ರಕ್ರಿಯೆಯನ್ನು ಮನೆಯಲ್ಲೇ ಕುಳಿತು ಪೂರ್ಣಗೊಳಿಸಬಹುದು ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬೆನ್ನಲ್ಲೇ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಾರ್ವಜನಿಕರಿಗೆ ಮಹತ್ವದ ಎಚ್ಚರಿಕೆ ನೀಡಿದೆ. ಕೇಂದ್ರ ಸರ್ಕಾರದ Mera Ration ಅಥವಾ Mera eKYC ಮೊಬೈಲ್ ಆ್ಯಪ್‌ಗಳ ಮೂಲಕ ಮುಖ ಗುರುತಿಸುವಿಕೆ (Face Authentication) ಬಳಸಿ ಮಾಡಲಾಗುವ e-KYC ಕರ್ನಾಟಕದ ಪಡಿತರ ಚೀಟಿ ದಾಖಲೆಗಳಲ್ಲಿ ಸ್ವಯಂಚಾಲಿತವಾಗಿ ನವೀಕರಣವಾಗುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಗೊಂದಲಕ್ಕೆ ಕಾರಣವೇನು? ರಾಜ್ಯದಲ್ಲಿ ರೇಷನ್ ಕಾರ್ಡ್ e-KYC […]
ಉಡುಪಿಯ ಪ್ರಸಿದ್ಧ ಹೋಟೆಲಿಗೆ ಜನ ಬೇಕಾಗಿದ್ದಾರೆ.

ಉಡುಪಿಯ ಹೋಟೆಲ್ ಒಂದರಲ್ಲಿ ಜ್ಯೂಸ್ ಮೇಕರ್ ಕ್ಯಾಪ್ಟನ್ ಚಾಟ್ಸ್ ಮೇಕರ್ ಬೇಕಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9449104708
ಅನುಷಾ ಅವರಿಗೆ ಪಿ.ಎಚ್.ಡಿ. ಪದವಿ

ಕಾರ್ಕಳ: ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ (ಎನ್.ಎಂ.ಎಂ.ಐ.ಟಿ.) ಗಣಿತಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ಅನುಷಾ ಅವರು ಡಾಕ್ಟರ್ ಆಫ್ ಫಿಲಾಸಫಿ (ಪಿ.ಎಚ್.ಡಿ.) ಪದವಿಗೆ ಭಾಜನರಾಗಿದ್ದಾರೆ. ಅವರು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ. ಕುಮುದಾಕ್ಷೀ ಅವರ ಮಾರ್ಗದರ್ಶನದಲ್ಲಿ ನಡೆಸಿದ ಸಂಶೋಧನೆ ಹಾಗೂ ಮಂಡಿಸಿದ “ಲೇಬ್ಲಿಂಗ್ಸ್ ಆಫ್ ಡೈರೆಕ್ಟೆಡ್ ಗ್ರಾಫ್ಸ್ ಅಂಡ್ ದೆಯರ್ ಅಪ್ಲಿಕೇಷನ್ಸ್” ಎಂಬ ಮಹಾಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ, […]
ಹಾಲಿನ ದರ ಏರಿಕೆಗೆ ಇಂದು ಮುಹೂರ್ತ ಫಿಕ್ಸ್

ಬೆಂಗಳೂರು: ಹಾಲಿನ ದರ ಏರಿಕೆ (Milk Price) ಸಂಬಂಧ ಹಾಲು ಒಕ್ಕೂಟಗಳು ಸಿಎಂ ಡಿಕೆ ಶಿವಕುಮಾರ್ (DK Shivakumar) ಅವರನ್ನು ಭೇಟಿ ಮಾಡಲಿದ್ದು, ಇಂದೇ (ಸೆ.26) ಮುಹೂರ್ತ ಫಿಕ್ಸ್ ಆಗುವ ಸಾಧ್ಯತೆಯಿದೆ. ಬಮುಲ್ ಅಧ್ಯಕ್ಷ ಡಿಕೆ ಸುರೇಶ್ (DK Suresh) ಹಾಗೂ ಕೆಎಂಎಫ್ ಮಾಜಿ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ (Balachandra Jarkiholi) ನೇತೃತ್ವದ ನಿಯೋಗ ಇಂದು ಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಲಿದೆ. ಈ ವೇಳೆ ಪ್ರತಿ ಲೀಟರ್ ಹಾಲಿನ ಮೇಲೆ 10 ರೂ. ಹೆಚ್ಚಳ […]