ಹಾಲಿನ ದರ ಏರಿಕೆಗೆ ಇಂದು ಮುಹೂರ್ತ ಫಿಕ್ಸ್

ಬೆಂಗಳೂರು: ಹಾಲಿನ ದರ ಏರಿಕೆ (Milk Price) ಸಂಬಂಧ ಹಾಲು ಒಕ್ಕೂಟಗಳು ಸಿಎಂ ಡಿಕೆ ಶಿವಕುಮಾರ್ (DK Shivakumar) ಅವರನ್ನು ಭೇಟಿ ಮಾಡಲಿದ್ದು, ಇಂದೇ (ಸೆ.26) ಮುಹೂರ್ತ ಫಿಕ್ಸ್ ಆಗುವ ಸಾಧ್ಯತೆಯಿದೆ.

ಬಮುಲ್ ಅಧ್ಯಕ್ಷ ಡಿಕೆ ಸುರೇಶ್ (DK Suresh) ಹಾಗೂ ಕೆಎಂಎಫ್ ಮಾಜಿ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ (Balachandra Jarkiholi) ನೇತೃತ್ವದ ನಿಯೋಗ ಇಂದು ಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಲಿದೆ.

ಈ ವೇಳೆ ಪ್ರತಿ ಲೀಟರ್ ಹಾಲಿನ ಮೇಲೆ 10 ರೂ. ಹೆಚ್ಚಳ ಮಾಡಲು ಪ್ರಸ್ತಾವನೆ ಸಲ್ಲಿಕೆ ಮಾಡಲಿದ್ದಾರೆ. ಜೊತೆಗೆ ಹಾಲಿನ ಜೊತೆಗೆ ಮೊಸರು, ಬೆಣ್ಣೆ, ತುಪ್ಪದ ಬೆಲೆ ಏರಿಕೆಗೂ ಮನವಿ ಮಾಡಲಿದ್ದಾರೆ.

ಈಗಾಗಲೇ ಹಾಲು ಒಕ್ಕೂಟಗಳೊಂದಿಗೆ ಸಭೆ ನಡೆದಿದ್ದು, ದರ ಏರಿಕೆ ಬಗ್ಗೆ ಸರ್ಕಾರ ಇಂದೇ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

ಸಂಭಾವ್ಯ ಪರಿಷ್ಕೃತ ದರಗಳ ಪಟ್ಟಿ
* ಟೋನ್ಡ್ ಹಾಲು (Toned Milk): 46 ರಿಂದ 50 ರೂ.
* ಶುಭಂ ಹಾಲು (Shubham Milk): 52 ರಿಂದ 56 ರೂ.
* ಸಮೃದ್ಧಿ ಹಾಲು (Samruddhi Milk): 55 ರಿಂದ 59 ರೂ.
* ಸ್ಪೆಷಲ್ ಹಾಲು (Special Milk): 52 ರಿಂದ 56 ರೂ.
* ಡಬಲ್ ಟೋನ್ಡ್ ಹಾಲು (Double Toned Milk): 43 ರಿಂದ 47 ರೂ.
* ಆರೆಂಜ್ ಹಾಲು (Orange Milk): 50 ರಿಂದ 54 ರೂ.
* ಗ್ರೀನ್ ಸ್ಪೆಷಲ್ (Green Special Milk): 50 ರಿಂದ 54 ರೂ.