ಸತತ 3 ದಿನ ಬ್ಯಾಂಕ್‌ ಮುಷ್ಕರ – ದೇಶಾದ್ಯಂತ ಯಾವೆಲ್ಲ ಸೇವೆಗಳಲ್ಲಿ ವ್ಯತ್ಯಯ

ದೇಶಾದ್ಯಂತ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್ ಗ್ರಾಹಕರಿಗೆ ಮುಂಬರುವ ವಾರ ಭಾರಿ ಶಾಕ್ ಕಾದಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಪಟ್ಟು ಹಿಡಿದಿರುವ ಬ್ಯಾಂಕ್ ಯೂನಿಯನ್‌ಗಳು, ಮುಂದಿನ ಸೋಮವಾರದಿಂದ ಮೂರು ದಿನಗಳ ಕಾಲ ಸರಣಿ ಮುಷ್ಕರ (Bank Strike) ನಡೆಸಲು ನಿರ್ಧರಿಸಿವೆ. ಚೆಕ್ ಕ್ಲಿಯರೆನ್ಸ್‌ನಿಂದ ಹಿಡಿದು ನೇರ ನಗದು ವಹಿವಾಟಿನವರೆಗೆ ಹಲವು ಸೇವೆಗಳು ಸ್ತಬ್ಧವಾಗಲಿದ್ದು, ಗ್ರಾಹಕರು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವುದು ಅನಿವಾರ್ಯವಾಗಿದೆ.  ಸತತ ಮೂರು ದಿನಗಳ ಕಾಲ ಮುಷ್ಕರ ನಡೆಯಲಿರುವ ಹಿನ್ನೆಲೆ ಗ್ರಾಹಕರ ಅನೂಕೂಲತೆಗಾಗಿ ಕೇಂದ್ರ ಸರ್ಕಾರ […]

ಕಾರ್ಕಳ ಜ್ಞಾನಸುಧಾದದಲ್ಲಿ ಜಿಲ್ಲಾಮಟ್ಟದ ಬಾಸ್ಕೆಟ್ ಬಾಲ್ ಪಂದ್ಯಾಟ ಕಾರ್ಕಳ ಜ್ಞಾನಸುಧಾ ಬಾಲಕಿಯರ ಹಾಗೂ ನಿಟ್ಟೆ ಬಾಲಕರ ತಂಡ ಪ್ರಥಮಸ್ಥಾನ

ಕಾರ್ಕಳ: ಶಾಲಾ ಶಿಕ್ಷಣ ಇಲಾಖೆ(ಪ.ಪೂ.ಕಾಲೇಜು) ಹಾಗೂ ಗಣಿತನಗರದ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ ಬಾಲಕ-ಬಾಲಕಿಯರ ಬಾಸ್ಕೆಟ್‌ಬಾಲ್ ಪಂದ್ಯಾಟದಲ್ಲಿ ಬಾಲಕಿಯರ ವಿಭಾಗದಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜುಪ್ರಥಮ ಸ್ಥಾನವನ್ನು ಹಾಗೂ ಉಡುಪಿಯ ಎಂ.ಜಿ.ಎo ಪದವಿ ಪೂರ್ವ ಕಾಲೇಜು ದ್ವಿತೀಯ ಸ್ಥಾನವನ್ನು ಪಡೆದಿದೆ. ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ನಿಟ್ಟೆಯ ಡಾ.ಎನ್.ಎಸ್.ಎ.ಎಂ ಕಾಲೇಜು ಹಾಗೂ ದ್ವಿತೀಯ ಸ್ಥಾನವನ್ನು ಉಡುಪಿಯ ಎಂ.ಜಿ.ಎo ಪದವಿ ಪೂರ್ವ ಕಾಲೇಜು ತನ್ನದಾಗಿಸಿಕೊಂಡಿರುತ್ತದೆ. ಪಂದ್ಯಾಟದಲ್ಲಿ ಮೋಸ್ಟ್ವ್ಯಾಲ್ಯೂಬಲ್ ಆಟಗಾರ […]

ಜಿಲ್ಲಾ ಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ರಾಜ್ಯ ಮಟ್ಟಕ್ಕೆ ಆಯ್ಕೆ.

ಕುಂದಾಪುರ: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ಜ್ಞಾನ ಸುಧಾ ಕಾಲೇಜು ಮಣಿಪಾಲ ಇವರ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಹರ್ಷಿತ್ ತನ್ನ ಶ್ರೇಷ್ಠ ಆಟದ ಪ್ರದರ್ಶನದ ಮೂಲಕ ರಾಜ್ಯ ಮಟ್ಟದಲ್ಲಿ ನಡೆಯುವ ಫುಟ್ಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾನೆ.ವಿದ್ಯಾರ್ಥಿಯ ಯಶಸ್ಸಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ – ಬೋಧಕೇತರ ಸಿಬ್ಬಂದಿ ಶುಭ ಹಾರೈಸಿದರು.

ವಿಶ್ವ ಔಷಧ ತಜ್ಞರ ದಿನಾಚರಣೆ; ಆರೋಗ್ಯಕರ ಸಮಾಜಕ್ಕೆ ಫಾರ್ಮಸಿಸ್ಟ್ಗಳ ವೃತ್ತಿಪರ ಸಬಲೀಕರಣ ಅಗತ್ಯ: ಚೊಕ್ಕಾಡಿ

ಮೂಡುಬಿದಿರೆ: ವೃತ್ತಿ ನಿರತ ಔಷಧಿ ತಜ್ಞರ ಸಂಘ (ರಿ.), ಮಂಗಳೂರು ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.), ಮೂಡುಬಿದಿರೆ ಇವರ ಜಂಟಿ ಆಶ್ರಯದಲ್ಲಿ, ಆಹಾರ ಸುರಕ್ಷತೆ ಹಾಗೂ ಔಷಧ ಆಡಳಿತ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಔಷಧ ತಜ್ಞರ ದಿನಾಚರಣೆ, ಹಿರಿಯ ಔಷಧ ತಜ್ಞರಿಗೆ ಗೌರವಾರ್ಪಣೆ ಹಾಗೂ ‘ಆರೋಗ್ಯಕರ ಭವಿಷ್ಯಕ್ಕಾಗಿ ಔಷಧ ತಜ್ಞರ ಸಬಲೀಕರಣ’ ಎಂಬ ವಸ್ತು ವಿಷಯದೊಂದಿಗೆ ವಿಚಾರ ಸಂಕಿರಣ ಶುಕ್ರವಾರ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ […]