ರಷ್ಯಾದಿಂದ ತೈಲ ಖರೀದಿಸುವ ದೇಶಗಳಿಗೆ ಶೇ.100 ಸುಂಕ, ಟ್ರಂಪ್ ಸಹಿ ಹಾಕಿದ ಈ ಮಸೂದೆಯಿಂದ ಭಾರತಕ್ಕೂ ತಟ್ಟಲಿದೆಯಾ ತೆರಿಗೆ ಬಿಸಿ!

ವಾಷಿಂಗ್ಟನ್: ರಷ್ಯಾ ಮತ್ತು ಇರಾನ್ ಮೇಲಿನ ನಿರ್ಬಂಧಗಳನ್ನು ಮತ್ತಷ್ಟು ಬಿಗಿಗೊಳಿಸುವ ಮಹತ್ವದ ಮಸೂದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಸೆ.18) ಸಹಿ ಹಾಕಿದ್ದಾರೆ. ‘ಲಿಂಡ್ಸೆ ಒ. ಗ್ರಹಾಂ ಸ್ಯಾಂಕ್ಷನಿಂಗ್ ರಷ್ಯಾ ಆ್ಯಂಡ್ ಇರಾನ್ ಆ್ಯಕ್ಟ್ ಆಫ್ 2026’ ಎಂದು ಕರೆಯಲಾಗುವ ಈ ಕಾನೂನು, ರಷ್ಯಾದಿಂದ ತೈಲ ಮತ್ತು ನೈಸರ್ಗಿಕ ಅನಿಲ ಖರೀದಿಸುವ ಪ್ರಮುಖ ದೇಶಗಳ ಮೇಲೆ ಗರಿಷ್ಠ ಶೇ.100ರಷ್ಟು ಸುಂಕ ವಿಧಿಸುವ ಅಧಿಕಾರವನ್ನು ಅಮೆರಿಕ ಅಧ್ಯಕ್ಷರಿಗೆ ನೀಡಿದೆ. ಈ ಕಾನೂನಿನಡಿ ಭಾರತ ಮತ್ತು ಚೀನಾ ಸೇರಿದಂತೆ […]

ಅತಿರೇಕವಾದ ಐಫೋನ್ 18 ಪ್ರೊ ಹುಚ್ಚು: ಪತ್ನಿಗಾಗಿ ಚಿನ್ನ ಮಾರಿ ಐಫೋನ್ ಖರೀದಿಸಿದ ಪತಿ, ಸೋಶಿಯಲ್ ಮೀಡಿಯಾದಲ್ಲಿ ವೈರಲ್

  ನವದೆಹಲಿ: ಐಫೋನ್  ನಿಮ್ಮ  ಬಳಿಯಿಲ್ಲದಿದ್ದರೆ ಜೀವನವೇ ವೇಸ್ಟ್, ಬೇರೆಲ್ಲಾ ಫೋನುಗಳು ಐ ಫೋನ್ ಮುಂದೆ ವೇಸ್ಟ್ ಎನ್ನುವ ಜನರ ಮನಸ್ಥಿತಿ ಇನ್ನಷ್ಟು ಅತಿರೇಕಕ್ಕೆ ಹೋಗುತ್ತಿದೆ. ಐ ಫೋನ್ ಗಾಗಿ ಏನು ಬೇಕಾದರೂ ಮಾಡ್ತೇವೆ ಎನ್ನುವವರು ಇದ್ದಾರೆ. ಇದೀಗ ಇಲ್ಲೊಬ್ಬ ಪತಿ, ಕಷ್ಟಕ್ಕೆ ಕೈಹಿಡಿಯುತ್ತಿದ್ದ ಚಿನ್ನವನ್ನೇ ಮಾರಿ ಐ ಪೋನ್ ಆಸೆಗೆ ಬಿದ್ದು ಪತ್ನಿಗಾಗಿ ಶೋಕಿಯ ಫೋನ್ ಖರೀದಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾನೆ ಹೌದು ಪತ್ನಿಗೆ ಐಫೋನ್ 18 ಪ್ರೊ ಉಡುಗೊರೆಯಾಗಿ ನೀಡಲು ಪತಿಯೊಬ್ಬರು ಚಿನ್ನವನ್ನೇ […]

ಶೀಘ್ರದಲ್ಲಿಯೇ ಇಳಿಕೆಯಾಗಲಿದೆ ಎಲ್ಲಾ ಕಂಪೆನಿಗಳ ಮೊಬೈಲ್ ರೀಚಾರ್ಜ್ ದರ? !

ನವದೆಹಲಿ: ದುಬಾರಿ ಮೊಬೈಲ್ ರೀಚಾರ್ಜ್‌ನಿಂದ ಬಳಕೆದಾರರಿಗೆ ಹೊರೆಯಾಗುತ್ತಿರುವ ಹಿನ್ನೆಲೆಯಲ್ಲಿ, ಟೆಲಿಕಾಂ ಕ್ಷೇತ್ರದ ಮೇಲಿನ ಶುಲ್ಕ ಮತ್ತು ನಿಯಂತ್ರಣ ವ್ಯವಸ್ಥೆ ಕುರಿತು ಕೇಂದ್ರ ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ ಎಂಬ ಮಾಹಿತಿ ದೊರಕಿದೆ. ಜಿಯೋ, ಏರ್‌ಟೆಲ್ ಹಾಗೂ ವೊಡಾಫೋನ್-ಐಡಿಯಾ ರೀಚಾರ್ಜ್ ದರಗಳು ಶೇ.10ರಿಂದ 15ರಷ್ಟು ಕಡಿಮೆಯಾಗಲಿದೆ ಎನ್ನುವ ಕುರಿತು ಸರಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಪ್ರಸ್ತುತ ದೂರಸಂಪರ್ಕ ಇಲಾಖೆಯ ಮಾಹಿತಿಯಂತೆ, ಟೆಲಿಕಾಂ ಸೇವೆಗಳಿಗೆ ವಾರ್ಷಿಕ ಆಥರೈಸೇಶನ್ ಶುಲ್ಕವು Adjusted Gross Revenue (AGR)ನ ಶೇ.8ರಷ್ಟಿದೆ. ಇದರಲ್ಲಿ ಡಿಜಿಟಲ್ ಭಾರತ್ ನಿಧಿಗೆ […]

ಮೀನುಗಾರಿಕಾ ಬಂದರಿಗೆ ಸಿಎಂ ದಿಢೀರ್ ಭೇಟಿ: ವ್ಯಾಪಾರ ಸ್ಥಗಿತಕ್ಕೆ ಅಧಿಕಾರಿಗಳ ವಿರುದ್ಧ ಅಸಮಾಧಾನ, ಬಗೆಬಗೆಯ ಮೀನು ಖರೀದಿಸಿದ ಡಿಕೆಶಿ

ಮಂಗಳೂರು: ಶುಕ್ರವಾರ ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶನಿವಾರ ಬೆಳಗ್ಗೆ ಮಂಗಳೂರು ಮೀನುಗಾರಿಕಾ ಬಂದರಿಗೆ ದಿಢೀರ್ ಭೇಟಿ ನೀಡಿ ಮೀನುಗಾರರ ಸಮಸ್ಯೆಗಳನ್ನು ಆಲಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರೊಂದಿಗೆ ಬಂದರಿಗೆ ಆಗಮಿಸಿದ ಮುಖ್ಯಮಂತ್ರಿ, ಧಕ್ಕೆ ಪ್ರದೇಶದಲ್ಲಿ ಕಾಲ್ನಡಿಗೆಯಲ್ಲಿ ಸಂಚರಿಸಿ ಮೀನುಗಾರಿಕಾ ಬೋಟ್‌ಗಳು, ಮೀನು ಇಳಿಸುವಿಕೆ ಹಾಗೂ ಮಾರುಕಟ್ಟೆ ಚಟುವಟಿಕೆಗಳನ್ನು ಪರಿಶೀಲಿಸಿದರು. ಮೀನುಗಾರರು, ವ್ಯಾಪಾರಿಗಳೊಂದಿಗೆ ಮಾತುಕತೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದರು. ಮುಖ್ಯಮಂತ್ರಿಗಳ ಭೇಟಿಯ ಹಿನ್ನೆಲೆಯಲ್ಲಿ […]