ಮಂಗಳೂರು: ಗೇಟ್ ತೆರೆಯದಿದ್ದರೆ ಸಿಲಿಂಡರ್ ಸ್ಫೋಟಿಸುವುದಾಗಿ ಬೆದರಿಕೆಯೊಡ್ಡಿದ ಖೈದಿ

ಮಂಗಳೂರು: ಜೈಲು ಅಡುಗೆಮನೆಯ ಗೇಟಿಗೆ ಬೀಗ ಹಾಕಿದ ಬಳಿಕ ಕೈದಿಯೊಬ್ಬ ಗ್ಯಾಸ್ ಸಿಲಿಂಡರ್ ಹಿಡಿದು ಗೇಟ್ ಹಾಗೂ ಬೀಗಕ್ಕೆ ಹೊಡೆದು, ಗೇಟ್ ತೆರೆಯುವಂತೆ ಬೆದರಿಕೆ ಹಾಕಿದ ಘಟನೆ ಮಂಗಳೂರು ಜೈಲಿನಲ್ಲಿ ನಡೆದಿದೆ. ಫೈಜಲ್ ಎಂಬಾತ ಗ್ಯಾಸ್ ಸಿಲಿಂಡರ್ನಿಂದ ಗೇಟ್ ಹಾಗೂ ಬೀಗಕ್ಕೆ ಹೊಡೆದು, ಗೇಟ್ ತೆರೆಯದಿದ್ದರೆ ಸಿಲಿಂಡರ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬಳಿಕ ಇತರ ಕೈದಿಗಳನ್ನು ಪ್ರಚೋದಿಸಿ, ಬೀಡಿಗಳನ್ನು ನೀಡುವವರೆಗೆ ಸೆಲ್ಗಳಿಗೆ ಹಿಂತಿರುಗದಂತೆ ಒತ್ತಾಯಿಸಿದ್ದಾನೆ ಎನ್ನಲಾಗಿದೆ. ಘಟನೆಯಿಂದ ಜೈಲಿನಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿದ್ದು, […]
Bengaluru-Crime News: ಬೆಂಗಳೂರಲ್ಲಿ ಪತ್ನಿಯ ಮೇಲೆ ಆ್ಯಸಿಡ್ ದಾಳಿ, ಜನರ ಮುಂದೆಯೇ ಮಚ್ಚಿನಿಂದಲೂ ಕೊಚ್ಚಿದ ಪಾಪಿ

ಕ್ಲಿನಿಕ್ ಬಳಿ ಬೈಕ್ನಲ್ಲಿ ಬಂದ ವೆಂಕಟೇಶ್ ಎಂಬಾತ ಹೆಂಡ್ತಿ ಮೇಲೆ ಆ್ಯಸಿಡ್ ಎರಚಿ ಬಳಿಕ ಮಚ್ಚಿನಿಂದ ಮನಸೋಇಚ್ಛೆ ಹಲ್ಲೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ. ಬೆಂಗಳೂರು (ಸೆ.17): ನೂರಾರು ಜನರು ಓಡಾಡುವ ರಸ್ತೆಯಲ್ಲೇ ಭೀಕರ ಘಟನೆ ಸಂಭವಿಸಿದ್ದು, ಬೆಂಗಳೂರಿನ (Bengaluru) ಜೆಪಿ ನಗರದ 3rd ಪೇಸ್ನ ನಾರಾಯಣ ಕ್ಲಿನಿಕ್ ಬಳಿ ಆ್ಯಸಿಡ್ ದಾಳಿ (Acid Attack) ಆಗಿದೆ. ನರ್ಸ್ ಮಧುಮಿತ ಎಂಬುವವರ ಮೇಲೆ ಆಕೆಯ ಗಂಡನೇ ಆ್ಯಸಿಡ್ ಎರಚಿದ್ದು, ಬಳಿಕ ಮುಚ್ಚಿನಿಂದ ಮನಸೋಇಚ್ಛೆ ಹಲ್ಲೆ ನಡೆಸಿದ್ದಾನೆ. ರಕ್ಷಣೆಗೆ […]
ಪಟ್ಲ ರೂರಲ್ ಎಜುಕೇಶನ್ ಸೊಸೈಟಿ: ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಅಭಿನಂದನೆ

ಪಟ್ಲ: ರೂರಲ್ ಎಜುಕೇಶನ್ ಸೊಸೈಟಿ (ರಿ.), ವಿದ್ಯಾನಗರ ಪಟ್ಲ ಇದರ ಆಡಳಿತ ಮಂಡಳಿ, ಪೋಷಕರು ಹಾಗೂ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಯು.ಎಸ್. ನಾಯಕ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶಾಂತಪ್ಪ ಮೂಲಂಗಿ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಲೋಕಮಾನ್ಯ ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ಸೀತಾರಾಮ್ ಅವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಆಗಮಿಸಿ, ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಅಭಿನಂದಿಸಿ ಶುಭ ಹಾರೈಸಿದರು. […]
ಮಲ್ಪೆ: ಮೀನುಗಾರಿಕೆ ಸಚಿವ ಸಚಿವ ಕೆ.ಎಸ್ ಬಸವಂತಪ್ಪ ಮಲ್ಪೆ ಬಂದರಿಗೆ ಭೇಟಿ- ಮೀನುಗಾರರ ಜೊತೆ ಸಮಾಲೋಚನೆ

ಉಡುಪಿ: ರಾಜ್ಯದ ನೂತನ ಮೀನುಗಾರಿಕೆ ಹಾಗೂ ಬಂದರು ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಕರಾವಳಿ ಭಾಗಕ್ಕೆ ಭೇಟಿ ನೀಡಿದ ಇಲಾಖಾ ಸಚಿವ ಕೆ.ಎಸ್ ಬಸವಂತಪ್ಪ ಇಂದು ಮಲ್ಪೆ ಬಂದರಿಗೆ ಭೇಟಿ ನೀಡಿ ವಿವಿಧ ಭಾಗಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಆಳಸಮುದ್ರದಲ್ಲಿ ಹಿಡಿದು ಬೋಟಿನಲ್ಲಿ ತಂದು ಬಂದರಿನ ಧಕ್ಕೆಯಲ್ಲಿ ಇರಿಸಿದ್ದ ವೈವಿಧ್ಯಮಯ ಮೀನುಗಳನ್ನು ನೋಡಿ ಖುಷಿ ಪಟ್ಟ ಸಚಿವರು, ಅವುಗಳನ್ನು ಕೈಯಲ್ಲಿ ಹಿಡಿದು, ಮುಟ್ಟಿ ನೋಡಿದರು. ಕಾಂಗ್ರೆಸ್ ನಾಯಕರಿಂದ ಕರಾವಳಿಯ ಮೀನುಗಾರಿಕೆ ಕುರಿತಂತೆ ಮಾಹಿತಿಗಳನ್ನು ಪಡೆದರು. […]
ನಮ್ಮ ಆರ್ಥಿಕ ಹಿತಾಸಕ್ತಿ ರಕ್ಷಣೆಗಾಗಿ ರಷ್ಯಾದಿಂದ ತೈಲ ಖರೀದಿ – ಅಮೆರಿಕಕ್ಕೆ ಭಾರತ ತಿರುಗೇಟು

ನವದೆಹಲಿ: ನಮ್ಮ ವಾಣಿಜ್ಯ, ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸಲು ನಾವು ರಷ್ಯಾದಿಂದ(Russia) ತೈಲವನ್ನು ಖರೀದಿ ಮಾಡುತ್ತಿದ್ದೇವೆ ಎಂದು ಅಮೆರಿಕಕ್ಕೆ(USA) ಭಾರತ ತಿರುಗೇಟು ನೀಡಿದೆ. ರಷ್ಯಾದಿಂದ ಇಂಧನ ಖರೀದಿಸುವ ದೇಶಗಳ ಮೇಲೆ ಶೇ.100 ರಷ್ಟು ಆಮದು ಸುಂಕ ವಿಧಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅಧಿಕಾರ ನೀಡುವ ಮಸೂದೆಯನ್ನು ಅಮೆರಿಕ ಸಂಸತ್ತು ಅಂಗೀಕರಿಸಿದ ಬೆನ್ನಲ್ಲೇ ತನ್ನ 140 ಕೋಟಿ ಜನರ ಇಂಧನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸಂಪೂರ್ಣ ಬದ್ಧವಾಗಿದೆ ಎಂದು ಭಾರತ(India) ದೃಢವಾಗಿ ಪುನರುಚ್ಚರಿಸಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ವಿದೇಶಾಂಗ […]