ಕುಂದಾಪುರ ತಾಲೂಕಿನ ಬೇಳೂರು ಗ್ರಾ.ಪಂ.ಗೆ ಲೋಕಾಯುಕ್ತ ದಾಳಿ – ಕಡತಗಳ ಪರಿಶೀಲನೆ

ಉಡುಪಿ: ಕಟ್ಟಡ ಪರವಾನಗಿ ನೀಡುವಲ್ಲಿ ವಿಳಂಬ ಸೇರಿದಂತೆ ವಿವಿಧ ದೂರುಗಳ ಹಿನ್ನೆಲೆಯಲ್ಲಿ ಕುಂದಾಪುರ ತಾಲೂಕಿನ ಬೇಳೂರು ಗ್ರಾಮ ಪಂಚಾಯಿತಿ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿತು. ಲೋಕಾಯುಕ್ತ ಡಿವೈಎಸ್‌ಪಿ ಹಾಲಮೂರ್ತಿ ರಾವ್ ಹಾಗೂ ಇನ್ಸ್‌ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ ಮಾಹಿತಿ ಕಲೆಹಾಕಿತು. ಸರ್ಕಾರಿ ಸೌಲಭ್ಯ ಒದಗಿಸುವುದಾಗಿ ಪಿಡಿಒ ಅವರು ಸುಮಾರು 400 ಅರ್ಜಿಗಳನ್ನು ಪಡೆದಿದ್ದಾರೆ ಎಂಬ ಆರೋಪವೂ ಕೇಳಿಬಂದಿದ್ದು, ಈ […]

ಸೆ.19ರಂದು ಗುರು ರಾಧಾಕೃಷ್ಣ ತಂತ್ರಿಯವರ 91ನೇ ಜನ್ಮದಿನ ಸ್ಮರಣೆ: ‘ನೃತ್ಯಾಭಿಷೇಕಂ’ ಮೂಲಕ ಗುರುನಮನ

ಉಡುಪಿ: ರಾಧಾಕೃಷ್ಣ ನೃತ್ಯ ನಿಕೇತನದ ಸಂಸ್ಥಾಪಕ, ನೃತ್ಯ ಕಲಾಸಿಂಧು ಕೀರ್ತಿಶೇಷ ರಾಧಾಕೃಷ್ಣ ತಂತ್ರಿ ಅವರ 91ನೇ ಜನ್ಮದಿನದ ಸ್ಮರಣಾರ್ಥವಾಗಿ ಸೆ.19ರಂದು ‘ನೃತ್ಯಾಭಿಷೇಕಂ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಸ್ಥೆಯ ನೃತ್ಯ ನಿರ್ದೇಶಕಿ, ನೃತ್ಯ ವಿದುಷಿ ವೀಣಾ ಮುರಳೀಧರ ಸಾಮಗ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ‌ ಮಾಹಿತಿ ನೀಡಿದ ಅವರು, ಅಂದು ಸಂಜೆ 5.30ಕ್ಕೆ ಉಡುಪಿಯ ಐವೈಸಿ ಯಕ್ಷಗಾನ ಕಲಾರಂಗದಲ್ಲಿ ಕಾರ್ಯಕ್ರಮ ನಡೆಯಲಿದ್ದು, ರಾಧಾಕೃಷ್ಣ ತಂತ್ರಿಗಳ ಶಿಷ್ಯವರ್ಗದವರು ನೃತ್ಯದ ಮೂಲಕ ಗುರುನಮನ ಸಲ್ಲಿಸಲಿದ್ದಾರೆ ಎಂದರು. ಸುರತ್ಕಲ್ ನಾಟ್ಯಾಂಜಲಿ ಕಲಾ ಅಕಾಡೆಮಿ […]

ಈ ಬೆಕ್ಕಣ್ಣ ಈಗ ಮುಂಬೈ ಮೆಟ್ರೋದ ‘ಅಧಿಕಾರಿ..! ಜನಗಳ ಪ್ರೀತಿಯಿಂದಲೇ ಉನ್ನತ ಹುದ್ದೆ ಗಿಟ್ಟಿಸಿಕೊಂಡ ಮುದ್ದು ಬೆಕ್ಕು!

ಮುಂಬೈ: ಮೆಟ್ರೋ ನಿಲ್ದಾಣ ಎಂದರೆ ಪ್ರಯಾಣಿಕರ ಓಡಾಟ, ಸಿಬ್ಬಂದಿಯ ಕರ್ತವ್ಯ ಹಾಗೂ ರೈಲುಗಳ ಸಂಚಾರ. ಆದರೆ, ಮುಂಬೈನ ಗುಂಡವಲಿ ಮೆಟ್ರೋ ನಿಲ್ದಾಣದಲ್ಲಿ ಇವೆಲ್ಲದರ ನಡುವೆ ಪ್ರತಿದಿನ ಕಾಣಿಸಿಕೊಳ್ಳುವ ಮುದ್ದು ಬೆಕ್ಕೊಂದು ಇದೀಗ ಭಾರಿ ಸುದ್ದಿಯಾಗಿದೆ! ನಿಲ್ದಾಣದ ಪ್ರವೇಶದ್ವಾರದ ಬಳಿ ಆರಾಮವಾಗಿ ಕುಳಿತುಕೊಳ್ಳುವ ಈ ಬೆಕ್ಕು ಪ್ರಯಾಣಿಕರಿಗೂ ಚಿರಪರಿಚಿತ. ಕೆಲವೊಮ್ಮೆ ಅಲ್ಲೇ ನಿದ್ರಿಸುತ್ತಾ, ಕೆಲವೊಮ್ಮೆ ಪ್ರಯಾಣಿಕರತ್ತ ನೋಡುತ್ತಾ ‘ಕರ್ತವ್ಯ’ ನಿರ್ವಹಿಸುವಂತೆ ಕಾಣಿಸಿಕೊಳ್ಳುತ್ತದೆ. ಈ ಬೆಕ್ಕಿನ ಫೋಟೋವನ್ನು ಸಂದೇಶ್ ಸಾಮಂತ್ ಎಂಬ ಪ್ರಯಾಣಿಕ ‘ಎಕ್ಸ್‌’ನಲ್ಲಿ ಹಂಚಿಕೊಂಡು, “ಸಂಬಳವಿಲ್ಲದೆ ಉಚಿತ ಸೇವೆ […]

ಮಂಗಳೂರು: ಗೇಟ್ ತೆರೆಯದಿದ್ದರೆ ಸಿಲಿಂಡರ್ ಸ್ಫೋಟಿಸುವುದಾಗಿ ಬೆದರಿಕೆಯೊಡ್ಡಿದ ಖೈದಿ

ಮಂಗಳೂರು: ಜೈಲು ಅಡುಗೆಮನೆಯ ಗೇಟಿಗೆ ಬೀಗ ಹಾಕಿದ ಬಳಿಕ ಕೈದಿಯೊಬ್ಬ ಗ್ಯಾಸ್ ಸಿಲಿಂಡರ್ ಹಿಡಿದು ಗೇಟ್ ಹಾಗೂ ಬೀಗಕ್ಕೆ ಹೊಡೆದು, ಗೇಟ್ ತೆರೆಯುವಂತೆ ಬೆದರಿಕೆ ಹಾಕಿದ ಘಟನೆ ಮಂಗಳೂರು ಜೈಲಿನಲ್ಲಿ ನಡೆದಿದೆ. ಫೈಜಲ್ ಎಂಬಾತ ಗ್ಯಾಸ್ ಸಿಲಿಂಡರ್‌ನಿಂದ ಗೇಟ್ ಹಾಗೂ ಬೀಗಕ್ಕೆ ಹೊಡೆದು, ಗೇಟ್ ತೆರೆಯದಿದ್ದರೆ ಸಿಲಿಂಡರ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬಳಿಕ ಇತರ ಕೈದಿಗಳನ್ನು ಪ್ರಚೋದಿಸಿ, ಬೀಡಿಗಳನ್ನು ನೀಡುವವರೆಗೆ ಸೆಲ್‌ಗಳಿಗೆ ಹಿಂತಿರುಗದಂತೆ ಒತ್ತಾಯಿಸಿದ್ದಾನೆ ಎನ್ನಲಾಗಿದೆ. ಘಟನೆಯಿಂದ ಜೈಲಿನಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿದ್ದು, […]

Bengaluru-Crime News: ಬೆಂಗಳೂರಲ್ಲಿ ಪತ್ನಿಯ ಮೇಲೆ ಆ್ಯಸಿಡ್ ದಾಳಿ, ಜನರ ಮುಂದೆಯೇ ಮಚ್ಚಿನಿಂದಲೂ ಕೊಚ್ಚಿದ ಪಾಪಿ

ಕ್ಲಿನಿಕ್ ಬಳಿ ಬೈಕ್​ನಲ್ಲಿ ಬಂದ ವೆಂಕಟೇಶ್ ಎಂಬಾತ ಹೆಂಡ್ತಿ ಮೇಲೆ ಆ್ಯಸಿಡ್ ಎರಚಿ ಬಳಿಕ ಮಚ್ಚಿನಿಂದ ಮನಸೋಇಚ್ಛೆ ಹಲ್ಲೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.  ಬೆಂಗಳೂರು (ಸೆ.17): ನೂರಾರು ಜನರು ಓಡಾಡುವ ರಸ್ತೆಯಲ್ಲೇ ಭೀಕರ ಘಟನೆ ಸಂಭವಿಸಿದ್ದು, ಬೆಂಗಳೂರಿನ (Bengaluru) ಜೆಪಿ ನಗರದ 3rd ಪೇಸ್​ನ ನಾರಾಯಣ ಕ್ಲಿನಿಕ್ ಬಳಿ ಆ್ಯಸಿಡ್​ ದಾಳಿ (Acid Attack) ಆಗಿದೆ. ನರ್ಸ್ ಮಧುಮಿತ ಎಂಬುವವರ ಮೇಲೆ ಆಕೆಯ ಗಂಡನೇ ಆ್ಯಸಿಡ್​ ಎರಚಿದ್ದು, ಬಳಿಕ ಮುಚ್ಚಿನಿಂದ ಮನಸೋಇಚ್ಛೆ ಹಲ್ಲೆ ನಡೆಸಿದ್ದಾನೆ. ರಕ್ಷಣೆಗೆ […]