ಸ್ಕೇಟಿಂಗ್‌ನಲ್ಲಿ ಸಮರ್ಥ್ ಎಸ್. ಆಚಾರ್ಯ ಸಾಧನೆ; ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

ಉಡುಪಿ: ಶ್ರೀಮತಿ ಶಿಲ್ಪ ಹಾಗೂ ಶ್ರೀಕಾಂತ್ ಆಚಾರ್ಯ ಗುಡ್ಡೆಯಂಗಡಿ ದಂಪತಿಯ ಪುತ್ರ ಸಮರ್ಥ್ ಎಸ್. ಆಚಾರ್ಯ ಅವರು ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (CISCE) ವತಿಯಿಂದ ನಡೆದ ರಾಜ್ಯಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು, ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಸಮರ್ಥ್ ಅವರ ಈ ಸಾಧನೆಗೆ ಕುಟುಂಬಸ್ಥರು, ಶಿಕ್ಷಕರು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಸವಿತಾ ಸಮಾಜ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯ: ಅರ್ಜಿ ಆಹ್ವಾನ

ಉಡುಪಿ: ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮ ನಿ. ವತಿಯಿಂದ ಪ್ರಸಕ್ತ ಸಾಲಿನಲ್ಲಿ ಅನುಷ್ಠಾನಗೊಳಿಸಲಾದ ಸ್ವಯಂ ಉದ್ಯೋಗ ಸಾಲ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ ಹಾಗೂ ವಿದೇಶಿ ವಿಶ್ವ ವಿದ್ಯಾಲಯಗಳಲ್ಲಿ ಉನ್ನತ ವ್ಯಾಸಾಂಗಕ್ಕೆ ಸಾಲ ಯೋಜನೆಯ ಸೌಲಭ್ಯ ಪಡೆಯಲು ಹಿಂದುಳಿದ ವರ್ಗಗಳ ಸವಿತಾ ಮತ್ತು ಅದರ ಉಪಜಾತಿಗಳಿಗೆ ಸೇರಿದ ಅರ್ಹ ಫಲಾಪೇಕ್ಷಿಗಳಿಂದ ಸೇವಾಸಿಂಧು ಪೋರ್ಟಲ್ http://sevasindhu.karnataka.gov.inಮುಖಾಂತರ ಗ್ರಾಮ-ಒನ್, ಬೆಂಗಳೂರು-ಒನ್ ಹಾಗೂ ಕರ್ನಾಟಕ-ಒನ್ ಸೇವಾ ಕೇಂದ್ರಗಳಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 01 […]
‘ಇನ್ನು ಕಾರು ಚಾಲಕರೂ ಹೆಲ್ಮೆಟ್ ಧರಿಸಬೇಕೇ?’ ಕಾರು ಚಾಲಕ ಹೆಲ್ಮೆಟ್ ಧರಿಸಿಲ್ಲ ಎಂದು ನೊಟೀಸ್ ಕೊಟ್ಟ ಎಐ ಕ್ಯಾಮರಾ: ಕ್ಯಾಮರಾ ಎಡವಟ್ಟಿಗೆ ನೆಟ್ಟಿಗರಿಂದ ಕಾಮಿಡಿ ಟ್ರೋಲ್!

ಚಿಕ್ಕೋಡಿ: ಸಂಚಾರ ನಿಯಮ ಉಲ್ಲಂಘನೆ ಪತ್ತೆಹಚ್ಚುವ ಎಐ ಕ್ಯಾಮೆರಾ ಕಾರೊಂದಕ್ಕೆ ‘ನೋ ಹೆಲ್ಮೆಟ್’ ದಂಡ ವಿಧಿಸಿರುವ ವಿಚಿತ್ರ ಘಟನೆ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ನಡೆದಿದೆ. ಅಥಣಿ ಪಟ್ಟಣದ ನಿವಾಸಿ ಸುಭಾಷ್ ಬೋಜನೆ ಎಂಬುವರು ಅಂಬೇಡ್ಕರ್ ಸರ್ಕಲ್ ಮೂಲಕ ಕಾರಿನಲ್ಲಿ ಸಂಚರಿಸಿದ್ದರು. ಬಳಿಕ ಅವರ ವಾಟ್ಸ್‌ಆ್ಯಪ್‌ಗೆ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ನೋಟಿಸ್ ಬಂದಿದ್ದು, ಹೆಲ್ಮೆಟ್ ಧರಿಸದ ಆರೋಪದಲ್ಲಿ ₹500 ದಂಡ ವಿಧಿಸಲಾಗಿತ್ತು. ನೋಟಿಸ್‌ನಲ್ಲಿ ಕಾರಿನ ಫೋಟೊವನ್ನೂ ಲಗತ್ತಿಸಲಾಗಿತ್ತು. ಕಾರಿಗೆ ‘ನೋ ಹೆಲ್ಮೆಟ್’ ದಂಡ ವಿಧಿಸಿರುವುದನ್ನು ಕಂಡು ಕಾರು […]
AI ಅಭಿವೃದ್ಧಿಯ ವೇಗ ಕಡಿಮೆ ಮಾಡದಿದ್ದರೆ ಮನುಷ್ಯ ಕುಲಕ್ಕೇ ಅಪಾಯ: ಆಂಥ್ರೊಪಿಕ್ ಸಿಇಒ
ನ್ಯೂಯಾರ್ಕ್ (ಅಮೆರಿಕ): ಅತಿಮಾನುಷ ಬುದ್ಧಿಮತ್ತೆ ಹೊಂದಿರುವ ‘ಸೂಪರ್ ಇಂಟೆಲಿಜೆಂಟ್’ ಕಂಪ್ಯೂಟರ್ ವ್ಯವಸ್ಥೆಗಳಿಂದ ಉಂಟಾಗಬಹುದಾದ ಅಪಾಯಗಳ ಕುರಿತು ಕಳವಳ ಹೆಚ್ಚುತ್ತಿರುವ ಬೆನ್ನಲ್ಲೇ, ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಅಭಿವೃದ್ಧಿಯ ವೇಗವನ್ನು ಕಡಿಮೆ ಮಾಡಬೇಕೆಂದು ಆಂಥ್ರೊಪಿಕ್ ಸಿಇಒ ಡೇರಿಯೊ ಅಮೋಡೆ ಕರೆ ನೀಡಿದ್ದಾರೆ. ತಾವಾಗಿಯೇ ಸುಧಾರಿಸಿಕೊಳ್ಳುವ ಸಾಮರ್ಥ್ಯ ಹೊಂದಿರುವ ಎಐ ಮಾದರಿಗಳನ್ನು ಅಭಿವೃದ್ಧಿಪಡಿಸುವ ಪೈಪೋಟಿಯಲ್ಲಿ ಕಂಪನಿಗಳು ಮಾನವನ ಜೀವದೊಂದಿಗೆ ಜೂಜಾಡುತ್ತಿವೆ ಎಂಬ ಎಐ ಸಂಶೋಧಕ ಜಾಕೋಬ್ ಕಾಕ್ಸನ್ ಅವರ ಹೇಳಿಕೆಯ ಬೆನ್ನಲ್ಲೇ ಅಮೋಡೆ ಅವರ ಈ ಅಭಿಪ್ರಾಯ ಹೊರಬಿದ್ದಿದೆ. ‘ಮಧ್ಯಮ […]
ಹೆಚ್ಚು ಹೊತ್ತು ಕುಳಿತುಕೊಂಡೇ ಕೆಲಸ ಮಾಡ್ತೀರಾ? ಪ್ರತಿ 30 ನಿಮಿಷಕ್ಕೊಮ್ಮೆ ಎದ್ದು ನಿಲ್ಲುವ ಅಭ್ಯಾಸ ಮಾಡ್ಕೊಳ್ಳಿ: ಇಲ್ಲಂದ್ರೆ ಈ ಎಲ್ಲಾ ಸಮಸ್ಯೆ ಶುರುವಾಗುತ್ತೆ!

ಆಫೀಸ್ ಕೆಲಸ, ಓದು, ಮೊಬೈಲ್ ಮತ್ತು ಟಿವಿ ವೀಕ್ಷಣೆಯಿಂದಾಗಿ ಇತ್ತೀಚಿನ ದಿನಗಳಲ್ಲಿ ಬಹುತೇಕ ಮಂದಿ ದಿನದ ಹೆಚ್ಚಿನ ಸಮಯವನ್ನು ಕುಳಿತುಕೊಂಡೇ ಕಳೆಯುತ್ತಿದ್ದಾರೆ. ವ್ಯಾಯಾಮದ ಕೊರತೆಯಷ್ಟೇ ಅಲ್ಲ, ದೀರ್ಘಕಾಲ ಒಂದೇ ಕಡೆ ಕುಳಿತುಕೊಳ್ಳುವುದೂ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ದೀರ್ಘಕಾಲ ಕುಳಿತುಕೊಳ್ಳುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳು, ಮಧುಮೇಹ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳ ಅಪಾಯ ಹೆಚ್ಚಾಗಬಹುದು. ಹೀಗಾಗಿ ಕೆಲಸದ ಮಧ್ಯೆ ನಿಯಮಿತವಾಗಿ ಎದ್ದು ನಿಂತು ಸ್ವಲ್ಪ ನಡೆಯುವುದು ಅಥವಾ ವಿರಾಮ ತೆಗೆದುಕೊಳ್ಳುವುದು ಅಗತ್ಯ. ರಕ್ತದಲ್ಲಿನ ಸಕ್ಕರೆ ಮಟ್ಟದ […]