ಭಾರತಕ್ಕೆ ಬಂದ ರಷ್ಯಾ ಅಧ್ಯಕ್ಷ ಪುಟಿನ್, ಚೀನಾ ಅಧ್ಯಕ್ಷ ಜಿನ್ ಪಿಂಗ್: ಚಲಿಸುವ ಭದ್ರಕೋಟೆಯಂತಿದೆ ಇವರ ಕಾರುಗಳು!

ನವದೆಹಲಿ: ಬ್ರಿಕ್ಸ್ ಶೃಂಗಸಭೆ ಹಿನ್ನೆಲೆಯಲ್ಲಿ ಭಾರತಕ್ಕೆ ಆಗಮಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಅವರ ಭದ್ರತೆ ಮಾತ್ರವಲ್ಲದೆ, ಅವರ ಅಧಿಕೃತ ವಾಹನಗಳೂ ಗಮನ ಸೆಳೆದಿವೆ. ಇಬ್ಬರೂ ತಮ್ಮದೇ ದೇಶಗಳಲ್ಲಿ ಅಭಿವೃದ್ಧಿಪಡಿಸಲಾದ ವಿಶೇಷ ಆರ್ಮರ್ಡ್ ಕಾರುಗಳಲ್ಲಿ ಸಂಚರಿಸುತ್ತಿದ್ದು, ಭದ್ರತಾ ದೃಷ್ಟಿಯಿಂದ ಈ ವಾಹನಗಳನ್ನು ‘ಚಲಿಸುವ ಭದ್ರಕೋಟೆ’ಗಳೆಂದು ಕರೆಯಲಾಗುತ್ತದೆ. ಪುಟಿನ್ ಅವರ ಔರಸ್ ಸೆನೆಟ್ ಪುಟಿನ್ ಅವರ ಅಧಿಕೃತ ವಾಹನ ಔರಸ್ ಸೆನೆಟ್. ರಷ್ಯಾದ ಔರಸ್ ಸಂಸ್ಥೆ ಹಾಗೂ ಸರ್ಕಾರಿ ಸಂಸ್ಥೆಗಳ ಸಹಯೋಗದಲ್ಲಿ […]

ಒಕ್ಕಲಿಗ ಸಮುದಾಯದ ವಿವಿಧ ಯೋಜನೆಗಳಿಗೆ ಸಾಲ – ಸಹಾಯಧನ ಸೌಲಭ್ಯ: ಅರ್ಜಿ ಆಹ್ವಾನ

ಉಡುಪಿ: ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ ನಿ. ವತಿಯಿಂದ ಪ್ರಸಕ್ತ ಸಾಲಿನಲ್ಲಿ ಅನುಷ್ಠಾನಗೊಳಿಸಲಾದ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಗಂಗಾಕಲ್ಯಾಣ ನೀರಾವರಿ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ, ಬ್ಯಾಂಕುಗಳ ಸಹಯೋಗದೊಂದಿಗೆ ಸ್ವಯಂ ಉದ್ಯೋಗ ಸಾಲ ಯೋಜನೆ, ಶೈಕ್ಷಣಿಕ ಸಾಲ ಯೋಜನೆ ಹಾಗೂ ವಿದೇಶ ವಿಶ್ವ ವಿದ್ಯಾಲಯಗಳಲ್ಲಿ ಉನ್ನತ ವ್ಯಾಸಾಂಗ ಸಾಲ ಯೋಜನೆಯ ಸೌಲಭ್ಯ ಪಡೆಯಲು ಗ್ರಾಮ-ಒನ್, ಬೆಂಗಳೂರು-ಒನ್ ಹಾಗೂ ಕರ್ನಾಟಕ-ಒನ್ ಕೇಂದ್ರಗಳಲ್ಲಿ ಸೇವಾ ಸಿಂಧು ಪೋರ್ಟಲ್ ಮೂಲಕ ಹಾಗೂ ಸ್ವಾತಂತ್ರ್ಯಮಹೋತ್ಸವದ ಅಮೃತ ಮುನ್ನಡೆ ಯೋಜನೆಯ […]

‘ವಾರದಲ್ಲಿ 5 ದಿನ ಬ್ಯಾಂಕಿಂಗ್ ವ್ಯವಸ್ಥೆ ಜಾರಿ ಮಾಡಿ’

ಉಡುಪಿ: ವಾರದಲ್ಲಿ ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆಯನ್ನು ತಕ್ಷಣ ಜಾರಿಗೊಳಿಸಬೇಕು ಹಾಗೂ ಏಕಪಕ್ಷೀಯ ಮತ್ತು ತಾರತಮ್ಯದಿಂದ ಕೂಡಿದ ಪಿಎಲ್‌ಐ (ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಧನ) ವ್ಯವಸ್ಥೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಯುಎಫ್‌ಬಿಯು (UFBU) ಕರೆ ನೀಡಿದ್ದ ಅಖಿಲ ಭಾರತ ಮುಷ್ಕರದ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಶುಕ್ರವಾರ ಬ್ಯಾಂಕ್ ನೌಕರರು ಬೃಹತ್ ಪ್ರತಿಭಟನೆ ನಡೆಸಿದರು. ನಗರದ ಕೋರ್ಟ್‌ ರೋಡ್‌ನ ಕೆನರಾ ಬ್ಯಾಂಕ್ ಶಾಖೆಯ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಬ್ಯಾಂಕ್ ನೌಕರರು ಹಾಗೂ ಅಧಿಕಾರಿಗಳು ಭಾಗವಹಿಸಿ, ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ […]

ಐದು ವರ್ಷವಾದರೂ ತೆರವಾಗದ ಟಗ್; ಪಡುಬಿದ್ರಿ ಕಡಲತೀರದಲ್ಲಿ ಆತಂಕ!

ಉಡುಪಿ: ಐದು ವರ್ಷಗಳ ಹಿಂದೆ ತೌಕ್ತೆ ಚಂಡಮಾರುತದ ವೇಳೆ ಪಡುಬಿದ್ರಿ ಕಡಿಪಟ್ಣ ಕಡಲತೀರಕ್ಕೆ ಬಂದು ಸಿಲುಕಿದ್ದ ‘ಅಲಯನ್ಸ್’ ಟಗ್‌ ಇಂದಿಗೂ ಸಂಪೂರ್ಣವಾಗಿ ತೆರವಾಗದೆ ಉಳಿದಿರುವುದು ಸ್ಥಳೀಯರು ಹಾಗೂ ಮೀನುಗಾರರ ಆತಂಕಕ್ಕೆ ಕಾರಣವಾಗಿದೆ. 2021ರ ಮೇ 15ರಂದು ತೌಕ್ತೆ ಚಂಡಮಾರುತದ ವೇಳೆ ಮಂಗಳೂರು ಸಮುದ್ರ ಭಾಗದಲ್ಲಿ ಅಪಘಾತಕ್ಕೀಡಾದ ಟಗ್‌, ಬಳಿಕ ಅಲೆಗಳ ಅಬ್ಬರಕ್ಕೆ ಪಡುಬಿದ್ರಿ ಕಡಲತೀರಕ್ಕೆ ಬಂದು ಸಿಲುಕಿತ್ತು. ಟಗ್‌ನಲ್ಲಿ ಎಂಟು ಮಂದಿ ಸಿಬ್ಬಂದಿಯಿದ್ದು, ಘಟನೆಯಲ್ಲಿ ಮೂವರು ಮೃತಪಟ್ಟಿದ್ದರು. ಮೂವರು ಬದುಕುಳಿದರೆ, ಇಬ್ಬರು ನಾಪತ್ತೆಯಾಗಿದ್ದರು. ತೆರವು ಕಾರ್ಯಕ್ಕೆ ಇನ್ನೂ […]

ಲಿಂಬೆ ಹಣ್ಣಿನಲ್ಲಿದೆ ಮಹಾನ್ ಶಕ್ತಿ: ಒಂದು ಗ್ಲಾಸ್ ನಿಂಬೆ ನೀರು ಕುಡಿದರೆ ನಿಮ್ಮ ದೇಹಕ್ಕೆ ಈ ಎಲ್ಲಾ ಪ್ರಯೋಜನ ಗ್ಯಾರಂಟಿ!

ಅನೇಕ ಮಂದಿ ದಿನವನ್ನು ಒಂದು ಲೋಟ ನಿಂಬೆ ನೀರು ಕುಡಿಯುವ ಮೂಲಕ ಆರಂಭಿಸುತ್ತಾರೆ. ನಿಂಬೆಹಣ್ಣು ವಿಟಮಿನ್‌ ಸಿ ಸೇರಿದಂತೆ ಕೆಲವು ಪೋಷಕಾಂಶಗಳನ್ನು ಹೊಂದಿದ್ದು, ನೀರು ದೇಹವನ್ನು ಹೈಡ್ರೇಟ್ ಆಗಿರಿಸಲು ಸಹಾಯ ಮಾಡುತ್ತದೆ. ಹೀಗಾಗಿ, ಮಿತ ಪ್ರಮಾಣದಲ್ಲಿ ನಿಂಬೆ ನೀರನ್ನು ಸೇವಿಸುವುದು ಸಮತೋಲಿತ ಆಹಾರದ ಭಾಗವಾಗಬಹುದು. ಆದರೆ ನಿಂಬೆ ನೀರನ್ನು ಯಾವುದೇ ಕಾಯಿಲೆಗೆ ಚಿಕಿತ್ಸೆಯಾಗಿ ಅಥವಾ ತೂಕ ಇಳಿಸುವ ಖಚಿತ ಪರಿಹಾರವಾಗಿ ಪರಿಗಣಿಸುವುದು ಸರಿಯಲ್ಲ. ಇದರ ಪ್ರಯೋಜನಗಳು ವ್ಯಕ್ತಿಯ ಒಟ್ಟಾರೆ ಆಹಾರ ಪದ್ಧತಿ ಮತ್ತು ಜೀವನಶೈಲಿಯನ್ನು ಅವಲಂಬಿಸಿರುತ್ತವೆ. ದೇಹವನ್ನು […]