ಉಡುಪಿಯ ಹೈಟೆಕ್ ಮೆಡಿಕೇರ್ ಆಸ್ಪತ್ರೆಯಲ್ಲಿ ಯಕೃತ್ತು ಕಸಿ ತಜ್ಞ ವೈದ್ಯರು ಸೆ.11ರಂದು ಸಮಾಲೋಚನೆಗೆ ಲಭ್ಯ

ಉಡುಪಿ: ಪ್ರಸಿದ್ಧ ಯಕೃತ್ತು ಕಸಿ ಹಾಗೂ ಹೆಪಟೋಬಿಲಿಯರಿ-ಪ್ಯಾಂಕ್ರಿಯಾಟಿಕ್ ಶಸ್ತ್ರಚಿಕಿತ್ಸಾ ತಜ್ಞ ಡಾ. ನಿಖಿಲ್ ಸುರೇಶ್ ಅವರು ಸೆಪ್ಟೆಂಬರ್‌ 11ರಂದು ಉಡುಪಿಯಲ್ಲಿ ರೋಗಿಗಳ ಸಮಾಲೋಚನೆಗೆ ಲಭ್ಯವಿರಲಿದ್ದಾರೆ. 10ಕ್ಕೂ ಹೆಚ್ಚು ವರ್ಷಗಳ ವೈದ್ಯಕೀಯ ಅನುಭವ ಹೊಂದಿರುವ ಡಾ. ನಿಖಿಲ್ ಸುರೇಶ್ ಅವರು Consultant – Hepatobiliary, Pancreatic & Liver Transplant Surgery ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು MBBS (Hons), MRCS (Edinburgh), MS (General Surgery), MCh (Surgical Oncology), FEBS (Liver Transplant) ಹಾಗೂ FRCS […]

ಈ ಸಲ ಪರಿಸರಸ್ನೇಹಿ ಗಣೇಶೋತ್ಸವ ಆಚರಿಸಿ: ಹಸಿರು ಸಂಕಲ್ಪದೊಂದಿಗೆ ಪರಿಸರ ಸಂರಕ್ಷಣೆಗೆ ಕೈಜೋಡಿಸೋಣ

-ಸಂಯೋಜಕ ಹಸಿರು ಸಂವಾದ ಅಭಿಯಾನ ಮಂಗಳೂರು ಭಕ್ತಿ, ಭಾವ ಹಾಗೂ ಸಡಗರದ ಸಂಕೇತವಾಗಿರುವ ಗಣೇಶ ಚತುರ್ಥಿ ಹಬ್ಬವು ಹತ್ತಿರವಾಗುತ್ತಿದೆ. ಆದರೆ ಹಬ್ಬದ ಆಚರಣೆಯ ನೆಪದಲ್ಲಿ ಬಳಸುವ ರಾಸಾಯನಿಕಗಳು ಮತ್ತು ಪ್ಲಾಸ್ಟಿಕ್ ವಸ್ತುಗಳು ನಮ್ಮ ಪರಿಸರವನ್ನು ದಿನೇ ದಿನೇ ಕಲುಷಿತಗೊಳಿಸುತ್ತಿವೆ. ಈ ಹಿನ್ನೆಲೆಯಲ್ಲಿ, ಪ್ರಕೃತಿಯನ್ನು ರಕ್ಷಿಸುತ್ತಾ ಹಬ್ಬವನ್ನು ಸೌಹಾರ್ದಯುತವಾಗಿ ಆಚರಿಸಲು “ಹಸಿರು ಗಣೇಶೋತ್ಸವ” ಆಂದೋಲನವು ಇಂದಿನ ತುರ್ತು ಅಗತ್ಯವಾಗಿದೆ. ಭಕ್ತಿಯೊಂದಿಗೆ ಪರಿಸರವನ್ನೂ ಉಳಿಸುವ ದೃಢ ಸಂಕಲ್ಪವನ್ನು ಪ್ರತಿಯೊಬ್ಬ ನಾಗರಿಕನೂ ಮಾಡಬೇಕಾಗಿದೆ. ಹಸಿರು ಗಣೇಶೋತ್ಸವದ ಯಶಸ್ಸಿಗೆ ನಾವು ನಮ್ಮ ದೈನಂದಿನ […]

ಮತ್ತೆ ತಾನೇ ಅಧಿಕಾರಕ್ಕೆ ಬಂದರೆ ಅಮೆರಿಕ ಪ್ರತಿ ಪ್ರಜೆಗೆ ಭರ್ಜರಿ ₹4.75 ಲಕ್ಷ: ಬಂಪರ್ ಆಫರ್ ಘೋಷಿಸಿದ ಟ್ರಂಪ್!

ವಾಷಿಂಗ್ಟನ್‌: ಭಾರತದಲ್ಲಿ ಚುನಾವಣೆ ಸಂದರ್ಭದಲ್ಲಿ ಉಚಿತ ಯೋಜನೆಗಳು ಹಾಗೂ ಹಣ ನೀಡುವ ಭರವಸೆಗಳು ಸಾಮಾನ್ಯವಾಗಿರುವ ಬೆನ್ನಲ್ಲೇ, ಇದೀಗ ಅಮೆರಿಕದಲ್ಲೂ ಇಂತಹದ್ದೊಂದು ರಾಜಕೀಯ ಘೋಷಣೆ ಸದ್ದು ಮಾಡಿದೆ. ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷ ಮತ್ತೆ ಅಧಿಕಾರ ಉಳಿಸಿಕೊಂಡರೆ ದೇಶದ ಪ್ರತಿಯೊಬ್ಬ ವಯಸ್ಕ ನಾಗರಿಕನಿಗೂ 5,000 ಡಾಲರ್‌ (ಸುಮಾರು ₹4.75 ಲಕ್ಷ) ‘ಡಿವಿಡೆಂಡ್‌’ ನೀಡುವುದಾಗಿ ಘೋಷಿಸಿದ್ದಾರೆ. ನವೆಂಬರ್‌ನಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷವು ಹೌಸ್‌ ಆಫ್‌ ರೆಪ್ರೆಸೆಂಟೇಟಿವ್ಸ್‌ ಮತ್ತು ಸೆನೆಟ್‌ ಎರಡರಲ್ಲೂ ಬಹುಮತವನ್ನು ಉಳಿಸಿಕೊಂಡರೆ […]

ಪರಿಚಯಸ್ಥ ಮಹಿಳೆಗೆ ಲೈಂಗಿಕ ಕಿರುಕುಳ: ಆಟೋ ಚಾಲಕ ವಶಕ್ಕೆ

ಮಂಗಳೂರು: ಕೆಲಸದ ನಿಮಿತ್ತ ಪುತ್ತೂರು ಪೇಟೆಗೆ ತೆರಳಲು ಪರಿಚಯಸ್ಥ ಆಟೋ ಚಾಲಕನ ರಿಕ್ಷಾ ಹತ್ತಿದ್ದ ಮಹಿಳೆಯೊಬ್ಬರಿಗೆ ಮಾರ್ಗ ಬದಲಿಸಿ ನಿರ್ಜನ ಪ್ರದೇಶದಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಈ ಸಂಬಂಧ ಆಟೋ ಚಾಲಕನನ್ನು ಪುತ್ತೂರು ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಶಕ್ಕೆ ಪಡೆದ ಆರೋಪಿಯನ್ನು ಆಟೋ ಚಾಲಕ ಬಾಲಕೃಷ್ಣ ಎಂದು ಗುರುತಿಸಲಾಗಿದೆ. ದೂರಿನಲ್ಲಿ ಏನಿದೆ? ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ನಿವಾಸಿಯಾಗಿರುವ ಸಂತ್ರಸ್ತ ಮಹಿಳೆ […]

ಇಂದು ಯಶವಂತಪುರ–ಮಂಗಳೂರು ಮತ್ತೊಂದು ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ಶುರು!

ಸುಬ್ರಹ್ಮಣ್ಯ : ಯಶವಂತಪುರ–ಮಂಗಳೂರು ನಡುವೆ 16 ಕೋಚ್‌ಗಳ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಮತ್ತೊಂದು ಹಂತದ ಪ್ರಾಯೋಗಿಕ ಸಂಚಾರ ಗುರುವಾರ ನಡೆಯಲಿದೆ. ಈ ವೇಳೆ ಸುಬ್ರಹ್ಮಣ್ಯ ರೋಡ್‌ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ರೈಲಿನ ಸಂಚಾರ ಸಮಯ, ನಿಲುಗಡೆ ಹಾಗೂ ಕಾರ್ಯಾಚರಣಾ ಅಂಶಗಳನ್ನು ಪರಿಶೀಲಿಸಲಾಗುತ್ತದೆ. ರೈಲ್ವೆ ಮಂಡಳಿಯ ಸೂಚನೆಯಂತೆ ದಕ್ಷಿಣ-ಪಶ್ಚಿಮ ರೈಲ್ವೆ ಈ ಸಂಬಂಧ ಅಧಿಕೃತ ಆದೇಶ ಹೊರಡಿಸಿದೆ. ಖಾಲಿ ಬೋಗಿಗಳೊಂದಿಗೆ ವಂದೇ ಭಾರತ್‌ ರೈಲಿನ ಪ್ರಾಯೋಗಿಕ ಸಂಚಾರ ನಡೆಸಲಾಗುತ್ತಿದ್ದು, IC2015 ಸಂಖ್ಯೆಯ 16 ಕೋಚ್‌ಗಳ ರೈಲು ಪರೀಕ್ಷೆಗೆ […]