ತರಾಕರಿ ಖರೀದಿಸಲು ಮಾರುಕಟ್ಟೆಗೆ ಹೋದ ಜನರು ಬೆಲೆ ಕೇಳಿ ಶಾಕ್ ಆಗ್ತಿದ್ದಾರೆ. ನಿಂಬೆಹಣ್ಣು, ಈರುಳ್ಳಿ, ಬೆಳ್ಳುಳ್ಳಿ ಸೇರಿ ಎಲ್ಲಾ ತರಕಾರಿಗಳ ದರ ಏರಿಕೆ ಆಗಿದ್ದು, ಕ್ಯಾರೆಟ್ ಬೆಲೆ ಗಗನಕ್ಕೇರಿದರೆ ನೆಲ್ಲಿಕಾಯಿ ಬೆಲೆ ಕೇಳೋದೆ ಬೇಡ.
ಬೆಂಗಳೂರು (ನ.08): ಅಕಾಲಿಕ ಮಳೆಯಿಂದ (Rain) ಬೆಳೆ ಹಾನಿಯಾಗಿ ದೇಶಾದ್ಯಂತ ಈರುಳ್ಳಿ ದರ (Onion Rate) ಗಣನೀಯವಾಗಿ ಏರಿಕೆಯಾಗಿದೆ. ಇನ್ನು ಕೆಲ ಭಾಗಗಳಲ್ಲಿ ಸರಿಯಾಗಿ ಮಳೆ ಇಲ್ಲದೆ ಬೆಳೆ ಇಲ್ಲವಾಗಿದ್ದು, ತರಕಾರಿಗಳ ಬೆಲೆ ಕೂಡ ಗಗನಕ್ಕೇರಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ (Market) ಈರುಳ್ಳಿ ಬೆಲೆ 70 ರಿಂದ 80 ರೂಪಾಯಿ ಇದೆ. ಬೆಂಗಳೂರಲ್ಲಿ (Bengaluru) ತರಕಾರಿಗಳ ಬೆಲೆ ಒನ್ ಟು ಡಬಲ್ ಆಗ್ತಿದೆ.
ತರಾಕರಿ ಖರೀದಿಸಲು ಮಾರುಕಟ್ಟೆಗೆ ಹೋದ ಜನರು ಬೆಲೆ ಕೇಳಿ ಶಾಕ್ ಆಗ್ತಿದ್ದಾರೆ. ನಿಂಬೆಹಣ್ಣು,ಈರುಳ್ಳಿ, ಬೆಳ್ಳುಳ್ಳಿ ಸೇರಿ ಎಲ್ಲಾ ತರಕಾರಿಗಳ ದರ ಏರಿಕೆ ಆಗಿದ್ದು, ಕ್ಯಾರೆಟ್ ಬೆಲೆ ಗಗನಕ್ಕೇರಿದರೆ ನೆಲ್ಲಿಕಾಯಿ ಬೆಲೆ ಕೇಳೋದೆ ಬೇಡ. ಹಾಗಾದ್ರೆ ಎಷ್ಟೆಷ್ಟು ಬೆಲೆ ಏರಿಕೆ ಆಗಿದೆ.















