ಉಡುಪಿ: ಮಾತೆ ಮೇರಿಯ ಜನ್ಮೋತ್ಸವದ ಸಂಭ್ರಮ; ತೆನೆ ಪೂಜೆಯೊಂದಿಗೆ ಕರಾವಳಿಯಲ್ಲಿ ಮೊಂತಿ ಹಬ್ಬ

ಉಡುಪಿ: ಮಾತೆ ಮೇರಿಯ ಜನ್ಮದಿನ ಹಾಗೂ ತೆನೆ ಹಬ್ಬವನ್ನು ಉಡುಪಿ ಜಿಲ್ಲೆಯ ಕ್ರೈಸ್ತ ಬಾಂಧವರು ಮಂಗಳವಾರ ಭಕ್ತಿ, ಶ್ರದ್ಧೆ ಮತ್ತು ಸಂಭ್ರಮದಿಂದ ಆಚರಿಸಿದರು. ಜಿಲ್ಲೆಯಾದ್ಯಂತ ಚರ್ಚ್‌ಗಳಲ್ಲಿ ಹೊಸ ತೆನೆಗಳಿಗೆ ಪೂಜೆ, ವಿಶೇಷ ಬಲಿಪೂಜೆ ಹಾಗೂ ಪ್ರಾರ್ಥನೆಗಳು ನಡೆದರೆ, ಮನೆ ಮನೆಗಳಲ್ಲಿ ಹೊಸ ಅಕ್ಕಿಯ ಹಾಲು ಪಾಯಸ ಮತ್ತು ಸಸ್ಯಾಹಾರಿ ಭೋಜನದೊಂದಿಗೆ ಮೊಂತಿ ಹಬ್ಬದ ಸಂಭ್ರಮ ಮನೆಮಾಡಿತ್ತು. ಕಳೆದ ಒಂಬತ್ತು ದಿನಗಳಿಂದ ಮಾತೆ ಮೇರಿಯ ಬಾಲರೂಪಿ ಪ್ರತಿಮೆಗೆ ಮಕ್ಕಳು ಸಲ್ಲಿಸುತ್ತಿದ್ದ ಪುಷ್ಪಾರ್ಚನೆಯ ವೈಭವ ಮಂಗಳವಾರ ಉತ್ತುಂಗಕ್ಕೇರಿತು. ಚರ್ಚ್‌ಗಳ ಗ್ರೊಟ್ಟೊ […]
ಪ.ಪಂಗಡದ ಅಭ್ಯರ್ಥಿಗಳಿಗೆ ಜಾನಪದ ಕಲಾ ಪ್ರಕಾರ ತರಬೇತಿ: ಅರ್ಜಿ ಆಹ್ವಾನ

ಉಡುಪಿ: ಜಾನಪದ ಕಲಾವಿದರು, ವಿದ್ವಾಂಸರು, ವಾದ್ಯಗಾರರು, ಬುಡಕಟ್ಟು ಜನರನ್ನೊಳಗೊಂಡಂತೆ “ಜಾನಪದ ಸಂಗಮ” ಹೆಸರಿನ ಕಾರ್ಯಕ್ರಮವನ್ನು ಗಿರಿಜನ ಉಪಯೋಜನೆಯಡಿ ಹೊಸ ಯೋಜನೆಯಾಗಿ ಸರ್ಕಾರವು ಘೋಷಿಸಿದ್ದು, ಈ ಯೋಜನೆಯಡಿ ರಾಜ್ಯದ 4 ವಿಭಾಗಗಳಲ್ಲಿ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಜಾನಪದ ಕಲಾಪ್ರಕಾರದ ತರಬೇತಿ ನೀಡಲು ಅಕಾಡೆಮಿಯ ವೆಬ್‌ಸೈಟ್ https://janapada.karnataka.gov.in/ ನಲ್ಲಿ ಆಸಕ್ತಿಯುಳ್ಳ 16 ರಿಂದ 40 ವರ್ಷದೊಳಗಿನ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಭರ್ತಿ ಮಾಡಿದ ಅರ್ಜಿಯನ್ನು ಸೆಪ್ಟಂಬರ್ 16 ರ ಒಳಗಾಗಿ ರಿಜಿಸ್ಟ್ರಾರ್, ಕರ್ನಾಟಕ ಜಾನಪದ ಅಕಾಡೆಮಿ, 2ನೇ […]
ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ: ಸಾಲ – ಸಹಾಯಧನ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಉಡುಪಿ: ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಪಂಚವೃತ್ತಿ ಅಭಿವೃದ್ಧಿಗಾಗಿ ಆರ್ಥಿಕ ನೆರವು, ಸ್ವಯಂ ಉದ್ಯೋಗ ನೇರಸಾಲ ಯೋಜನೆ, ಹೊಸದು ಹಾಗೂ ನವೀಕರಣ ಅರಿವು – ಶೈಕ್ಷಣಿಕ ನೇರ ಸಾಲ ಯೋಜನೆ, ಗಂಗಾ ಕಲ್ಯಾಣ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ, ವಿದೇಶಿ ವ್ಯಾಸಾಂಗ ಯೋಜನೆ, ಸ್ವಾತಂತ್ರ್ಯಅಮೃತ ಮುನ್ನಡೆ ಯೋಜನೆ ಹಾಗೂ ಹೊಲಿಗೆ ಯಂತ್ರ / ಝೀಗ್ ಝ್ಯಾಗ್ ಯೋಜನೆಯಡಿ ಸಹಾಯಧನ ಹಾಗೂ ಸಾಲ ಸೌಲಭ್ಯ ಪಡೆಯಲು ಅರ್ಹ ಫಲಾನುಭವಿಗಳಿಂದ ಗ್ರಾಮ ಒನ್, […]
ಕಳತ್ತೂರು ನಿತ್ಯ ಸಹಾಯ ಮಾತಾ ಇಗರ್ಜಿಯ ತೆನೆ ಹಬ್ಬ

ಕಳತ್ತೂರು ನಿತ್ಯ ಸಹಾಯ ಮಾತಾ ಇಗರ್ಜಿಯ ವತಿಯಿಂದ ಕಳತ್ತೂರು ಪಂಚಲಕಾಡುವಿನಿಂದ ಮರಿಯಮ್ಮ ಜನ್ಮದಿನದ ಪ್ರಯುಕ್ತ ತೆನೆ ಹಬ್ಬದ ಮೆರವಣಿಗೆಯು ಕಳತ್ತೂರು ಗ್ರಾಮದ ಕ್ರೈಸ್ತ ಭಾಂದವರು ನಿತ್ಯ ಸಹಾಯ ಮಾತಾ ಇಗರ್ಜಿಯ ಧರ್ಮ ಗುರು ರೆ| ಫಾ| ಜೇರೋಮೆ ಮೆಂತೆರೊ ಅವರ ಧಾರ್ಮಿಕ ವಿಧಿ ವಿಧಾನ ದೊಂದಿಗೆ ತೆನೆ ಹಬ್ಬದ ಮೆರವಣಿಗೆ ಇಗರ್ಜಿಯ ತನಕ ಬಾರಿ ವಿಜೃಂಭಣೆಯಿಂದ ನಡೆಯಿತು.
ಲಯನ್ಸ್ ಕ್ಲಬ್ ಉಡುಪಿ ಪ್ರಕೃತಿಯಿಂದ ಶಿಕ್ಷಕರ ದಿನಾಚರಣೆ

ಲಯನ್ಸ್ ಕ್ಲಬ್ ಉಡುಪಿ ಪ್ರಕೃತಿ ಹಾಗೂ ಲಯನಿಸ್ಟ್ ಕ್ಲಬ್ ವತಿಯಿಂದ ಪ್ರಮೋದ್ ಕುಮಾರ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ MGM ಉಪನ್ಯಾಸಕರಾದ ವಿಕಾಸ್ ವಿ ಶೆಟ್ಟಿ ಹಾವಂಜೆ ಇವರನ್ನು ಗೌರವಿಸಲಾಯಿತು.ವಲಯಧ್ಯಕ್ಷರಾದ ಶೇಖರ್ ಡಿ ಶೆಟ್ಟಿ, ಪ್ರಾಂತ್ಯಕಾರ್ಯದರ್ಶಿಗಳಾದ ನ್ಯಾಯವಾದಿ ಗಿರೀಶ್ ಐತಾಳ್, ಕಾರ್ಯದರ್ಶಿಯಾದ ಪ್ರಶಾಂತ್ ಶೀರೂರು, ಖಜಾಂಜಿಯಾದ ಸದಾಶಿವ ಶೆಟ್ಟಿ, ಭಾಸ್ಕರ್ ಶೆಟ್ಟಿಗಾರ್, ಬೆಳ್ಳೆ ಗೋಪಾಲ ಶೆಟ್ಟಿ, ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.