ಲಯನ್ಸ್ ಕ್ಲಬ್ ಉಡುಪಿ ಪ್ರಕೃತಿ ಹಾಗೂ ಲಯನಿಸ್ಟ್ ಕ್ಲಬ್ ವತಿಯಿಂದ ಪ್ರಮೋದ್ ಕುಮಾರ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ MGM ಉಪನ್ಯಾಸಕರಾದ ವಿಕಾಸ್ ವಿ ಶೆಟ್ಟಿ ಹಾವಂಜೆ ಇವರನ್ನು ಗೌರವಿಸಲಾಯಿತು.
ವಲಯಧ್ಯಕ್ಷರಾದ ಶೇಖರ್ ಡಿ ಶೆಟ್ಟಿ, ಪ್ರಾಂತ್ಯಕಾರ್ಯದರ್ಶಿಗಳಾದ ನ್ಯಾಯವಾದಿ ಗಿರೀಶ್ ಐತಾಳ್, ಕಾರ್ಯದರ್ಶಿಯಾದ ಪ್ರಶಾಂತ್ ಶೀರೂರು, ಖಜಾಂಜಿಯಾದ ಸದಾಶಿವ ಶೆಟ್ಟಿ, ಭಾಸ್ಕರ್ ಶೆಟ್ಟಿಗಾರ್, ಬೆಳ್ಳೆ ಗೋಪಾಲ ಶೆಟ್ಟಿ, ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.















