ಉಡುಪಿ: ಜೆ.ಸಿ.ಬಿ ಆಪರೇಟರ್ ನಾಪತ್ತೆ

ಉಡುಪಿ ಸೆಪ್ಟಂಬರ್ 03: ಕಾಪು ತಾಲೂಕು ನಡ್ಸಾಲು ಗ್ರಾಮದ ಕಂಚಿನಡ್ಕ ನಿವಾಸಿ ಶಿವರಾಮ ಪೂಜಾರಿ (41) ಎನ್ನುವ ವ್ಯಕ್ತಿಯು ಮೂಲ್ಕಿಯಲ್ಲಿ ಜೆಸಿಬಿ ಆಪರೇಟಿಂಗ್ ಕೆಲಸ ಮಾಡಿಕೊಂಡಿದ್ದು, ಆಗಸ್ಟ್ 23 ರಂದು ಬೆಳಗ್ಗೆ 8 ಗಂಟೆಯ ಸುಮಾರಿಗೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದವರು ಇದುವರೆಗೂ ವಾಪಸು ಮನೆಗೆ ಬಾರದೆ ನಾಪತ್ತೆಯಾಗಿರುತ್ತಾರೆ.5 ಅಡಿ 1 ಇಂಚು ಎತ್ತರ, ಎಣ್ಣೆ ಕಪ್ಪು ಮೈಬಣ್ಣ ಹೊಂದಿದ್ದು, ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಪಡುಬಿದ್ರಿ ಪೊಲೀಸ್ ಠಾಣೆಗೆ […]
ಮಣಿಪಾಲ MSDC-Orane International School of Beauty & Wellness ವತಿಯಿಂದ ಆರ್ಗ್ಯಾನಿಕ್ ಫೇಸ್‌ಪ್ಯಾಕ್ ಸ್ಪರ್ಧೆ: ಕಾದಿದೆ ಆಕರ್ಷಕ ಬಹುಮಾನ! ಬೇಗ ನೋಂದಣಿ ಮಾಡಿಕೊಳ್ಳಿ

ಮಣಿಪಾಲ: ಮಣಿಪಾಲ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (MSDC) ಹಾಗೂ Orane International School of Beauty & Wellness ವತಿಯಿಂದ ‘ಕೌಶಲ 2026 – ದಿ ಸ್ಕಿಲ್ ಫೆಸ್ಟ್’ ಆಯೋಜಿಸಲಾಗಿದೆ. ಇದರ ಅಂಗವಾಗಿ ‘ಆರ್ಗ್ಯಾನಿಕ್ ಫೇಸ್‌ಪ್ಯಾಕ್/ಮಾಸ್ಕ್ ಅಪ್ಲಿಕೇಶನ್ ಸ್ಪರ್ಧೆ’ ನಡೆಯಲಿದೆ. ಸೆಪ್ಟೆಂಬರ್ 19ರಂದು ನಡೆಯಲಿರುವ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಹಾಗೂ ಆಸಕ್ತರು ತಮ್ಮ ಪ್ರತಿಭೆ, ಸೃಜನಶೀಲತೆ ಮತ್ತು ವೃತ್ತಿಪರ ಕೌಶಲವನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲರಿಗೂ ಪ್ರಮಾಣಪತ್ರ ನೀಡಲಾಗುವುದು. ವಿಜೇತರಿಗೆ ಬಹುಮಾನಗಳು ಹಾಗೂ ಗಿಫ್ಟ್ ವೋಚರ್‌ಗಳನ್ನು […]
Canara Bank ಗ್ರಾಹಕರೇ ಗಮನಿಸಿ: ATM ಬಳಕೆಗೆ ಹೊಸ ರೂಲ್ಸ್; ಸೆ.1ರಿಂದಲೇ ಶುಲ್ಕ ಬದಲಾವಣೆ!

ಬೆಂಗಳೂರು: ಕೆನರಾ ಬ್ಯಾಂಕ್ ಖಾತೆ ಹೊಂದಿರುವ ಗ್ರಾಹಕರಿಗೆ ಮಹತ್ವದ ಮಾಹಿತಿ. ಸೆಪ್ಟೆಂಬರ್ 1, 2026ರಿಂದ ಎಟಿಎಂ ವಹಿವಾಟುಗಳಿಗೆ ಸಂಬಂಧಿಸಿದ ಕೆಲವು ಶುಲ್ಕ ಹಾಗೂ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ. ಉಚಿತ ಎಟಿಎಂ ವಹಿವಾಟುಗಳ ಮಿತಿ ಕಡಿತಗೊಂಡಿದ್ದು, ಮಿತಿ ಮೀರಿದರೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ. ಖಾತೆಯಲ್ಲಿ ಸಾಕಷ್ಟು ಹಣವಿಲ್ಲದೆ ಎಟಿಎಂ ವಹಿವಾಟು ವಿಫಲವಾದರೂ ಶುಲ್ಕ ವಿಧಿಸಲಾಗುತ್ತದೆ. ಸಾಮಾನ್ಯ ಗ್ರಾಹಕರಿಗೆ ಉಚಿತ ವಹಿವಾಟು 5ಕ್ಕೆ ಇಳಿಕೆ ಇದುವರೆಗೆ ಕೆನರಾ ಬ್ಯಾಂಕ್ ಎಟಿಎಂಗಳಲ್ಲಿ ಸಾಮಾನ್ಯ ಗ್ರಾಹಕರಿಗೆ ತಿಂಗಳಿಗೆ 6 ಉಚಿತ ವಹಿವಾಟುಗಳ ಅವಕಾಶವಿತ್ತು. […]
ಸೆಪ್ಟೆಂಬರ್‌ನಲ್ಲೇ ಸುಡುತ್ತಿದೆ ಕರ್ನಾಟಕ! ಹಲವು ಜಿಲ್ಲೆಗಳಲ್ಲಿ 30 ಡಿಗ್ರಿ ದಾಟಿದ ತಾಪಮಾನ

ಬೆಂಗಳೂರು: ಮಳೆಗಾಲ ಇನ್ನೂ ಪೂರ್ಣವಾಗಿ ಮುಗಿದಿಲ್ಲ. ಆದರೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಬೇಸಿಗೆಯ ಬಿಸಿಲಿನ ಅನುಭವ ಶುರುವಾಗಿದೆ. ಸಾಮಾನ್ಯವಾಗಿ ಸೆಪ್ಟೆಂಬರ್ ಅಂತ್ಯದವರೆಗೂ ಸಾಧಾರಣ ಮಳೆ ಮುಂದುವರಿಯುವುದು ವಾಡಿಕೆ. ಆದರೆ ಈ ಬಾರಿ ಸೆಪ್ಟೆಂಬರ್ ಮೊದಲ ವಾರದಲ್ಲೇ ಹಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿರುವುದು ಗಮನ ಸೆಳೆದಿದೆ. ವಾಡಿಕೆಯಷ್ಟು ಮಳೆಯಾಗದಿರುವುದರಿಂದ ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬೇಸಿಗೆಯ ವಾತಾವರಣ ಕಂಡುಬರುತ್ತಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ಬೆಂಗಳೂರಿನಲ್ಲಿ […]
ಬೆಂಗಳೂರಿಗೆ ಬರುತ್ತಿದ್ದ ವಿಮಾನ, ಹಾರಾಟದ ಮಧ್ಯೆಯೇ ಪೈಲಟ್‌ಗೆ ಅನಾರೋಗ್ಯ; ಇಂಡಿಗೋ ವಿಮಾನ ತುರ್ತು ಲ್ಯಾಂಡಿಂಗ್!

ಓಮನ್ : ದೋಹಾದಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದ ಪೈಲಟ್ ಹಾರಾಟದ ಮಧ್ಯೆಯೇ ದಿಢೀರ್ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ವಿಮಾನವನ್ನು ಮಸ್ಕತ್‌ಗೆ ತಿರುಗಿಸಿ ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಲಾಗಿದೆ. ಇಂಡಿಗೋದ 6E 1302 ವಿಮಾನ ದೋಹಾದಿಂದ ಬೆಂಗಳೂರಿಗೆ ಹಾರಾಟ ನಡೆಸುತ್ತಿತ್ತು. ಟೇಕ್‌ಆಫ್ ಆದ ಕೆಲವೇ ಸಮಯದ ಬಳಿಕ ಪೈಲಟ್-ಇನ್-ಕಮಾಂಡ್ ಅಸ್ವಸ್ಥರಾಗಿದ್ದು, ಅವರಿಗೆ ತಕ್ಷಣ ವೈದ್ಯಕೀಯ ನೆರವಿನ ಅಗತ್ಯವಿತ್ತು ಎನ್ನಲಾಗಿದೆ. ಮಸ್ಕತ್‌ನಲ್ಲಿ ತುರ್ತು ಲ್ಯಾಂಡಿಂಗ್ ಪೈಲಟ್ ಅಸ್ವಸ್ಥಗೊಂಡಿರುವುದು ತಿಳಿಯುತ್ತಿದ್ದಂತೆ ವಿಮಾನವನ್ನು ಮಸ್ಕತ್‌ಗೆ ತಿರುಗಿಸಲಾಗಿದೆ. ಬಳಿಕ ವಿಮಾನವನ್ನು ಮಸ್ಕತ್ ವಿಮಾನ ನಿಲ್ದಾಣದಲ್ಲಿ […]