ಶಿಶು ಆಹಾರದಲ್ಲೂ ‘ಮಿಸ್ ಬ್ರ್ಯಾಂಡಿಂಗ್’! ಈ ಆಹಾರ ಮಕ್ಕಳಿಗೆ ಕೊಡುವ ಮೊದಲು ಎಚ್ಚರ, ಬೆಂಗಳೂರಿನ ಬ್ರಿಟೀಷ್ ಲೈಫ್‌ಸೈನ್ಸ್‌ಗೆ FSSAI ಶಾಕ್

ಬೆಂಗಳೂರು: ಆಹಾರ ಪದಾರ್ಥಗಳ ಗುಣಮಟ್ಟ ಹಾಗೂ ಸುರಕ್ಷತೆ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI), ಇದೀಗ ಶಿಶು ಆಹಾರ ಉತ್ಪನ್ನಗಳ ಮೇಲೂ ನಿಗಾ ವಹಿಸಿದೆ. ಬೆಂಗಳೂರಿನ M/s British Lifesciences Pvt. Ltd. ಸಂಸ್ಥೆಯಲ್ಲಿ ನಡೆದ ತಪಾಸಣೆ ವೇಳೆ ಮಿಸ್‌ಬ್ರಾಂಡೆಡ್ (Misbranded) ಶಿಶು ಆಹಾರ ಉತ್ಪನ್ನಗಳು ಪತ್ತೆಯಾಗಿದ್ದು, ಅವುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಶಿಶು ಆಹಾರ ವಶಕ್ಕೆ ಶಿಶು ಆಹಾರ ಉತ್ಪನ್ನಗಳ ಸುರಕ್ಷತೆ ಹಾಗೂ ಲೇಬಲಿಂಗ್ ನಿಯಮಗಳ ಪಾಲನೆ […]
ಎಂಟು ಸ್ಪರ್ಧೆ, ಎಂಟೂ ಪ್ರಶಸ್ತಿ; ಅಂತಾರಾಷ್ಟ್ರೀಯ ಕಿರೀಟ ಗೆದ್ದ ಉಡುಪಿಯ ಸಚಿತ!

ಉಡುಪಿ: ಥೈಲ್ಯಾಂಡ್‌ನಲ್ಲಿ ನಡೆದ ‘ಜೂನಿಯರ್ ಮಾಡೆಲ್ ಇಂಟರ್‌ನ್ಯಾಷನಲ್–2026’ ಅಂತಾರಾಷ್ಟ್ರೀಯ ಮಟ್ಟದ ಫ್ಯಾಷನ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಉಡುಪಿಯ ಬಾಲಪ್ರತಿಭೆ ಸಚಿತ ರಾವ್ ಪ್ರಥಮ ಪ್ರಶಸ್ತಿ ಹಾಗೂ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಉಡುಪಿ ಪುತ್ತೂರು ನಿವಾಸಿಗಳಾದ ಸಚಿನ್ ರಾವ್ ಹಾಗೂ ಅಶ್ವಿನಿ ರಾವ್ ದಂಪತಿ ಪುತ್ರಿಯಾಗಿರುವ ಸಚಿತ ರಾವ್, ಪ್ರಸ್ತುತ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆಗಸ್ಟ್ 19ರಿಂದ 22ರವರೆಗೆ ಥೈಲ್ಯಾಂಡ್‌ನಲ್ಲಿ ನಡೆದ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ವಿವಿಧ ದೇಶಗಳ ಸ್ಪರ್ಧಿಗಳು ಭಾಗವಹಿಸಿದ್ದರು. ತೀವ್ರ ಪೈಪೋಟಿಯ ನಡುವೆಯೂ ಉತ್ತಮ ಪ್ರದರ್ಶನ […]
ಉಡುಪಿ: ಪಡಿತರ ಅಕ್ಕಿ ಚೀಲ ದಾಸ್ತಾನು ವಿಚಾರದಲ್ಲಿ ಬೆದರಿಕೆ: ಕಾಂಗ್ರೆಸ್ ಮುಖಂಡ ನಾಗೇಂದ್ರ ಪುತ್ರನ್ ಸಹಿತ ಮೂವರ ಬಂಧನ

ಉಡುಪಿ: ಪಡಿತರ ಅಕ್ಕಿ ಚೀಲಗಳನ್ನು ಮನೆಯ ಅಂಗಳದಲ್ಲಿ ದಾಸ್ತಾನು ಮಾಡಿರುವುದಾಗಿ ಆರೋಪಿಸಿ ವ್ಯಕ್ತಿಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಗೂ ಸುಲಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಕೋಟ ಪೊಲೀಸರು ಮೈಸೂರು ನಗರದಲ್ಲಿ ಬಂಧಿಸಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಪ್ರಕರಣದ ಆರೋಪಿಗಳಾದ ನಾಗೇಂದ್ರ ಪುತ್ರನ್ ಅಲಿಯಾಸ್ ನಾಗೇಂದ್ರ ಕೆ.ಕೆ. (37) ಹಾಗೂ ಪಿ. ಸುಮಂತ್ ಕುಂದರ್ (40) ಅವರನ್ನು ಸೆ.2ರಂದು ಮೈಸೂರು ಅರಮನೆ ಎದುರಿನ ವಸ್ತು ಪ್ರದರ್ಶನ ಮೈದಾನದ ಬಳಿ ಬಂಧಿಸಲಾಗಿದೆ. […]
Indigo Flight: ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲೇ ಪೈಲಟ್ ಅಸ್ವಸ್ಥ ಫ್ಲೈಟ್ ತುರ್ತು ಭೂಸ್ಪರ್ಶ

ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿ ಕೆಲ ದೂರ ಕ್ರಮಿಸಿದ ಬಳಿ ಪೈಲಟ್-ಇನ್-ಕಮಾಂಡ್ ಅಸ್ವಸ್ಥರಾಗಿದ್ದರು. ಓಮನ್ (ಸೆ.03): ದೋಹಾದಿಂದ ಬೆಂಗಳೂರಿಗೆ (Bengaluru) ಬರುತ್ತಿದ್ದ ಇಂಡಿಗೋ 6E 1302 ವಿಮಾನ ಹಾರಾಟ ಮಾಡುತ್ತಿರುವಾಗಲೇ ಪೈಲಟ್‌ಗೆ ಅನಾರೋಗ್ಯ ಕಾಣಿಸಿಕೊಂಡಿದೆ. ಪೈಲಟ್ ದಿಢೀರ್ ಅಸ್ವಸ್ಥಗೊಂಡಿದ್ದು, ಎಚ್ಚತ್ತೆ ಟೀಮ್ ಕೂಡಲೇ ವಿಮಾನವನ್ನು ಮಸ್ಕತ್‌ಗೆ ತಿರುಗಿಸಿ (Muscat) ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ವರದಿಯಾಗಿದೆ. ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿ ಕೆಲ ದೂರ ಕ್ರಮಿಸಿದ ಬಳಿ ಪೈಲಟ್-ಇನ್-ಕಮಾಂಡ್ ಅಸ್ವಸ್ಥರಾಗಿದ್ದರು. ಅವರಿಗೆ ತಕ್ಷಣ […]
Darshan: ದರ್ಶನ್ಗೆ ಡಬಲ್ ಶಾಕ್! ದಾಸನಿಂದ ದೂರ ದೂರ ಅಂತಿರೋ ಡಿಗ್ಯಾಂಗ್, ಚಿತ್ರದುರ್ಗ ಜೈಲಿಗೆ ಶಿಫ್ಟ್

ದಾಸನ ಬಿಡುತ್ತಿಲ್ಲ ಸಂಕಷ್ಟ! ಮಾಫಿ ಸಾಕ್ಷಿ ಶಾಕ್ ನಂತರ ದರ್ಶನ್ಗೆ ಈಗ ಡಬಲ್ ಶಾಕ್, ಅಷ್ಟಕ್ಕೂ ಆಗಿದ್ದೇನು ಈಗಾಗಲೇ ಮಾಫಿ ಸಾಕ್ಷಿ (Approver) ಶಾಕ್ನಲ್ಲಿರುವ ದರ್ಶನ್ಗೆ ಇನ್ನೊಂದು ಶಾಕ್ ಸಿಕ್ಕಿದೆ. ಚಿತ್ರದುರ್ಗದ (Chitradurga) ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Case) ಸಂಬಂಧಿಸಿದಂತೆ ಈಗಾಗಲೇ ಸಮಸ್ಯೆಯಲ್ಲಿರುವ ದರ್ಶನ್ಗೆ ಪ್ರದೋಷ್ನ (Pradosh) ಮಾಫಿ ಸಾಕ್ಷಿ ಟ್ವಿಸ್ಟ್ ದೊಡ್ಡ ತಲೆನೋವಾಗಿದೆ. ಇನ್ನೇನು ಹೇಳಿಕೆ ದಾಖಲಿಸಬೇಕು ಎನ್ನುವಷ್ಟರಲ್ಲಿ ಹೇಗೋ ಹೈಕೋರ್ಟ್ ಮೊರೆ ಹೋಗಿ ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ದಾಖಲು ಸದ್ಯ ಮುಂದೂಡಲಾಗಿದೆ. […]