ಶಿವಣ್ಣನ ‘ಬೇಲ್’ ಟೀಸರ್‌ಗೆ ಫುಲ್ ಮಾರ್ಕ್ಸ್! ‘ವಿಜಿ’ ಅವತಾರ ಕಂಡು ಥ್ರಿಲ್ ಆದ ಫ್ಯಾನ್ಸ್

ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ ಬಹುನಿರೀಕ್ಷಿತ ‘ಬೇಲ್’ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಸಿನಿಮಾ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಪವನ್ ಒಡೆಯರ್ ನಿರ್ದೇಶನದ ಈ ಚಿತ್ರ ಆಕ್ಷನ್ ಜೊತೆಗೆ ನ್ಯಾಯ, ಅಧಿಕಾರ ಮತ್ತು ಸಂಘರ್ಷದ ಕಥೆಯನ್ನು ಹೇಳುವ ಸುಳಿವು ನೀಡಿದೆ. ಟೀಸರ್‌ಗೆ ‘The First Hearing’ ಎಂಬ ಶೀರ್ಷಿಕೆ ನೀಡಲಾಗಿದ್ದು, “Justice will be served” ಎಂಬ ಥೀಮ್ ಚಿತ್ರದ ಮೂಲ ಸಂಘರ್ಷದ ಬಗ್ಗೆ ಕುತೂಹಲ ಮೂಡಿಸುತ್ತದೆ. ಶಿವಣ್ಣನ ‘ವಿಜಿ’ ಪಾತ್ರವೇ ಹೈಲೈಟ್ ಟೀಸರ್‌ನ […]
ಎಚ್ಚರ, ರಾಜ್ಯದಲ್ಲಿ ಜಾಸ್ತಿಯಾಗಿದೆ ಸೈಬರ್ ವಂಚನೆ ಪ್ರಕರಣ, ಸೈಬರ್ ವಂಚಕರಿಗೆ ಬೆಂಗಳೂರೇ ಟಾರ್ಗೆಟ್,7 ತಿಂಗಳಲ್ಲಿ ₹558 ಕೋಟಿ ಕಳೆದುಕೊಂಡ ಜನರು,

ಬೆಂಗಳೂರು: ಒಂದು ಸಣ್ಣ ಕ್ಲಿಕ್, ಅಪರಿಚಿತ ಕರೆ ಅಥವಾ ದುಪ್ಪಟ್ಟು ಲಾಭದ ಆಮಿಷ… ಇಷ್ಟೇ ಸಾಕು, ಕಷ್ಟಪಟ್ಟು ಸಂಪಾದಿಸಿದ ಹಣ ಕ್ಷಣಮಾತ್ರದಲ್ಲಿ ಬ್ಯಾಂಕ್ ಖಾತೆಯಿಂದ ಮಾಯವಾಗಲು. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೈಬರ್ ವಂಚಕರ ಹಾವಳಿ ಮುಂದುವರಿದಿದ್ದು, 2026ರ ಜುಲೈ ಅಂತ್ಯದವರೆಗೆ ಕೇವಲ ಏಳು ತಿಂಗಳಲ್ಲಿ 4,712 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿವೆ. ಈ ಅವಧಿಯಲ್ಲಿ ಸಾರ್ವಜನಿಕರು ಬರೋಬ್ಬರಿ ₹558 ಕೋಟಿಗೂ ಅಧಿಕ ಹಣ ಕಳೆದುಕೊಂಡಿದ್ದಾರೆ. ಗೃಹ ಇಲಾಖೆಯ ಅಧಿಕೃತ ಅಂಕಿಅಂಶಗಳ ಪ್ರಕಾರ, ನಗರದಲ್ಲಿ ಪ್ರತಿದಿನ ಸರಾಸರಿ 22 […]
ಮೂರನೇ ದಿನಕ್ಕೆ ₹200 ಕೋಟಿ ಬಾಚಿದ ‘ಟಾಕ್ಸಿಕ್’ ಕನ್ನಡಕ್ಕಿಂತ ಹಿಂದಿಯಲ್ಲಿಯೇ ಜಾಸ್ತಿ ಗಳಿಕೆ!

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಮೂರನೇ ದಿನಕ್ಕೆ ಭಾರತದಲ್ಲಿ ₹200 ಕೋಟಿಯ ಸಮೀಪ ತಲುಪಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರ ಮೂರನೇ ದಿನ ದೇಶಾದ್ಯಂತ 19,390 ಪ್ರದರ್ಶನಗಳಿಂದ ₹27.20 ಕೋಟಿ ಗಳಿಕೆ ಕಂಡಿದೆ. ಶುಕ್ರವಾರ ಚಿತ್ರದ ಒಟ್ಟಾರೆ ಆಕ್ಯುಪೆನ್ಸಿ ಶೇ.25.5ರಷ್ಟಿತ್ತು. ಭಾಷಾವಾರು ಗಳಿಕೆಯಲ್ಲಿ ಹಿಂದಿ ಆವೃತ್ತಿ ಅಗ್ರಸ್ಥಾನದಲ್ಲಿದ್ದು, ₹19.15 ಕೋಟಿ ಗಳಿಸಿದೆ. ಕನ್ನಡ ಆವೃತ್ತಿ ₹5 ಕೋಟಿ, ತೆಲುಗು ₹1.50 ಕೋಟಿ, ತಮಿಳು ₹0.75 ಕೋಟಿ […]
ಬಪ್ಪನಾಡು ದ್ವಾರ ಸ್ಥಳಾಂತರ ಕಾಮಗಾರಿ ವೀಕ್ಷಿಸಿದ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು

ಮಂಗಳೂರು:ರಾಷ್ಟ್ರೀಯ ಹೆದ್ದಾರಿ-66ರ ವಿಸ್ತರಣೆಯ ಹಿನ್ನೆಲೆಯಲ್ಲಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರವೇಶ ದ್ವಾರವನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಮಹತ್ವದ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಂಗಳೂರು ಇದರ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಸುಮಾರು 15 ಮಂದಿ ಅಂತಿಮ ವರ್ಷದ ವಿದ್ಯಾರ್ಥಿಗಳು ಇಂದು ತಾಂತ್ರಿಕ ಭೇಟಿ ನೀಡಿದರು. ವಿದ್ಯಾರ್ಥಿಗಳೊಂದಿಗೆ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಶ್ರೀ ವಿನೋದ್ ಟಿ. ಡಿಸೋಜಾ ಹಾಗೂ ಅಸಿಸ್ಟೆಂಟ್ ಪ್ರೊಫೆಸರ್ ಶ್ರೀಮತಿ ದೀಕ್ಷಾ ಆನಂದ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಯೋಜನೆಯ […]
LPG Cylinder: ಮತ್ತೆ ಗೃಹ ಬಳಕೆ LPG ಸಿಲಿಂಡರ್ ಸಂಕಷ್ಟ, ಅರ್ಜಿ ಹಾಕಿ 6 ತಿಂಗಳಿಂದ್ರೂ ಸಿಗ್ತಿಲ್ಲ ಈ ಗ್ಯಾಸ್

ಇರಾನ್-ಅಮೆರಿಕಾ ಯುದ್ಧದ ತೀವ್ರತೆ ಕಡಿಮೆ ಆದ್ರೂ LPG ಗ್ಯಾಸ್ ಸಿಲಿಂಡರ್ ಸಂಕಷ್ಟ ಮಾತ್ರ ತಪ್ಪಿಲ್ಲ. 6 ತಿಂಗಳಿಂದ ಸರಿಯಾಗಿ ಹೊಸ ಎಲ್ಪಿಜಿ ಸಿಲಿಂಡರ್ ಸಿಗ್ತಿಲ್ಲ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಸ್ಯೆ ಉಂಟಾಗಲಿದ್ಯಾ ಕಳೆದ 6 ತಿಂಗಳಿಂದ ಹೊಸ LPG ಸಂಪರ್ಕಗಳು ಸ್ಥಗಿತಗೊಂಡಿದ್ದು, ಗ್ರಾಹಕರು ತೀವ್ರ ಪರದಾಟ ನಡೆಸಿದ್ದಾರೆ. ಹೊಸ ಸಿಲಿಂಡರ್ ಗೆ ಭಾರೀ ಬೇಡಿಕೆಯಿದ್ರೂ, ಕೇಂದ್ರ ಸರ್ಕಾರದಿಂದ ಇನ್ನೂ ಅನುಮೋದನೆ ದೊರೆತಿಲ್ಲ. ಮಾರ್ಚ್ ನಿಂದ ಹೊಸ ಎಲ್ಪಿಜಿ ಸಿಲಿಂಡರ್ ಸಂಪರ್ಕ ಸ್ಥಗಿತಗೊಂಡಿರುವ ಪ್ರಕ್ರಿಯೆ ಪುನರಾರಂಭಗೊಂಡಿಲ್ಲ ಇದ್ರಿಂದ ಹೊಸದಾಗಿ […]