LPG Cylinder: ಮತ್ತೆ ಗೃಹ ಬಳಕೆ LPG ಸಿಲಿಂಡರ್​​ ಸಂಕಷ್ಟ, ಅರ್ಜಿ ಹಾಕಿ 6 ತಿಂಗಳಿಂದ್ರೂ ಸಿಗ್ತಿಲ್ಲ ಈ ಗ್ಯಾಸ್

ಇರಾನ್-ಅಮೆರಿಕಾ ಯುದ್ಧದ ತೀವ್ರತೆ ಕಡಿಮೆ ಆದ್ರೂ LPG ಗ್ಯಾಸ್ ಸಿಲಿಂಡರ್ ಸಂಕಷ್ಟ ಮಾತ್ರ ತಪ್ಪಿಲ್ಲ. 6 ತಿಂಗಳಿಂದ ಸರಿಯಾಗಿ ಹೊಸ ಎಲ್ಪಿಜಿ ಸಿಲಿಂಡರ್ ಸಿಗ್ತಿಲ್ಲ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಸ್ಯೆ ಉಂಟಾಗಲಿದ್ಯಾ

ಕಳೆದ 6 ತಿಂಗಳಿಂದ ಹೊಸ LPG ಸಂಪರ್ಕಗಳು ಸ್ಥಗಿತಗೊಂಡಿದ್ದು, ಗ್ರಾಹಕರು ತೀವ್ರ ಪರದಾಟ ನಡೆಸಿದ್ದಾರೆ. ಹೊಸ ಸಿಲಿಂಡರ್‌ ಗೆ ಭಾರೀ ಬೇಡಿಕೆಯಿದ್ರೂ, ಕೇಂದ್ರ ಸರ್ಕಾರದಿಂದ ಇನ್ನೂ ಅನುಮೋದನೆ ದೊರೆತಿಲ್ಲ.

ಮಾರ್ಚ್‌ ನಿಂದ ಹೊಸ ಎಲ್ಪಿಜಿ ಸಿಲಿಂಡರ್ ಸಂಪರ್ಕ ಸ್ಥಗಿತಗೊಂಡಿರುವ ಪ್ರಕ್ರಿಯೆ ಪುನರಾರಂಭಗೊಂಡಿಲ್ಲ ಇದ್ರಿಂದ ಹೊಸದಾಗಿ ಸಲ್ಲಿಸಿದ ಸಾವಿರಾರು ಅರ್ಜಿಗಳು ಬಾಕಿ ಉಳಿದಿದ್ದು, ಜನರಿಗೆ ಸಿಲಿಂಡರ್ ತಲೆಬಿಸಿ ಹೆಚ್ಚಿದೆ..

ಇಸ್ರೇಲ್-ಇರಾನ್ ನಡುವಿನ ಯುದ್ಧದ ಪರಿಣಾಮ ದೇಶದಲ್ಲಿ ಎಲ್‌ಪಿಜಿ ಗ್ಯಾಸ್ ಅಭಾವ ಹೆಚ್ಚಿತ್ತು. ಸಾರ್ವಜನಿಕರು ಸಿಲಿಂಡರ್ ಸಿಗದೆ ಪರದಾಡುವಂತೆ ಆಗಿತ್ತು. ಸದ್ಯ ಪರಿಸ್ಥಿತಿ ಸುಧಾರಿಸಿದ್ದು, ಸಿಲಿಂಡರ್ ಕೊರತೆ ನೀಗಿದೆ. ಆದ್ರೆ ಹೊಸದಾಗಿ ಗೃಹ ಬಳಕೆಯ ಎಲ್‌ ಪಿಜಿ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಿರುವ ಗ್ರಾಹಕರಿಗೆ ಮಾತ್ರ 6 ತಿಂಗಳಾದ್ರೂ ಸಿಲಿಂಡರ್ ಸಿಗ್ತಿಲ್ಲ.

ಕಳೆದ ಆರು ತಿಂಗಳಿಂದ ಹೊಸ ಸಂಪರ್ಕಗಳ ಹಂಚಿಕೆ ಸಂಪೂರ್ಣ ಸ್ಥಗಿತಗೊಂಡಿದ್ದು, ಹೊಸ ಸಂಪರ್ಕ ಪಡೆಯಲು ಅರ್ಜಿ ಹಾಕಿದ ಜನಸಾಮಾನ್ಯರು ಗ್ಯಾಸ್ ಕಚೇರಿಗಳಿಗೆ ಅಲೆಯುವ ದುಸ್ಥಿತಿ ನಿರ್ಮಾಣವಾಗಿದೆ.

ಹೊಸ ಗೃಹಬಳಕೆಯ ಸಿಲಿಂಡರ್‌ ಗಳಿಗೆ ದಿನೇ ದಿನೆ ಬೇಡಿಕೆ ಹೆಚ್ಚುತ್ತಿದೆ. ಆದ್ರೂ ಕೇಂದ್ರ ಸರ್ಕಾರದಿಂದ ಹೊಸ ಸಂಪರ್ಕಗಳ ಹಂಚಿಕೆ ಮಾಡ್ತಿಲ್ಲ. ಕಳೆದ ಮಾರ್ಚ್ ತಿಂಗಳಿಂದ ಸ್ಥಗಿತಗೊಂಡಿರುವ ಅನುಮೋದನೆ ಪ್ರಕ್ರಿಯೆ ಈವರೆಗೂ ಪುನರಾರಂಭವಾಗಿಲ್ಲ.

ಗ್ಯಾಸ್ ಏಜೆನ್ಸಿಗಳಲ್ಲಿ 200 ರಿಂದ 300ಕ್ಕೂ ಅಧಿಕ ಅರ್ಜಿಗಳು ವಿಲೇವಾರಿಯಾಗದೆ ಧೂಳು ಹಿಡಿಯುತ್ತಿವೆ. ಹೊಸದಾಗಿ ಮದುವೆಯಾದ ಕುಟುಂಬಗಳು ಗ್ಯಾಸ್ ಸಿಲಿಂಡರ್ ಸಂಪರ್ಕ ಸಿಗದೆ ಪರದಾಡುವಂತಾಗಿದೆ.