ಆಗಸ್ಟ್ 22:ಮಹಿಳೆಯರು ಮತ್ತು ಮಕ್ಕಳಿಗಾಗಿ ರಕ್ಷಾ ಬಂಧನ ಪ್ರಯುಕ್ತ ವಿಶೇಷ ರಾಖಿ ಕಾರ್ಯಾಗಾರ ಮತ್ತು ವಿಶೇಷ ಸ್ಪರ್ಧೆ

ರಕ್ಷಾ ಬಂಧನದ ಪ್ರಯುಕ್ತ ಉಡುಪಿಯ ಸಿದ್ಧಿ ಕ್ರಿಯೇಟಿವ್ ಸ್ಕಿಲ್ಸ್ ಅಕಾಡೆಮಿ ವತಿಯಿಂದ ಆಗಸ್ಟ್ 23ರಂದು ಹ್ಯಾಂಡ್‌ಮೇಡ್ ರಾಖಿ ಕ್ರಿಯೇಟಿವ್ ವರ್ಕ್‌ಶಾಪ್ ಹಾಗೂ ರಾಖಿ ತಯಾರಿಕಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ.ಕಾರ್ಯಾಗಾರದಲ್ಲಿ ಭಾಗವಹಿಸುವವರಿಗೆ ವಿವಿಧ ಮಾದರಿಯ ಸುಂದರವಾದ ರಾಖಿ ತಯಾರಿಕೆ, ಟಸೆಲ್ ಹಾಗೂ ಅಲಂಕಾರಿಕ ವಸ್ತುಗಳ ಬಳಕೆ ಮತ್ತು ಗಿಫ್ಟ್ ಪ್ಯಾಕಿಂಗ್ ಸೇರಿದಂತೆ ಹಲವು ಸೃಜನಾತ್ಮಕ ಕೌಶಲ್ಯಗಳನ್ನು ಪ್ರಾಯೋಗಿಕವಾಗಿ ಕಲಿಸಲಾಗುವುದು.ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ “Best & Most Creative Rakhi” ಎಂಬ ವಿಷಯದಡಿ ರಾಖಿ ತಯಾರಿಕಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ವಿಜೇತರಾಗುವವರಿಗೆ […]

ಜಾಗತಿಕ ವೇದಿಕೆಯಲ್ಲಿ ಫಾರ್ಮುಲಾ ಮಣಿಪಾಲ್‌ ಭರ್ಜರಿ ಸಾಧನೆ: ಸ್ವಿಟ್ಜರ್‌ಲ್ಯಾಂಡ್‌ನಲ್ಲಿ 11, ಪೋರ್ಚುಗಲ್‌ನಲ್ಲಿ 4 ನೇ ಸ್ಥಾನ ಪಡೆದು ಮಿಂಚಿದ ಫಾರ್ಮುಲಾ ಮಣಿಪಾಲ್‌

ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ವಿದ್ಯಾರ್ಥಿಗಳ ನೇತೃತ್ವದ ಎಂಜಿನಿಯರಿಂಗ್ ಯೋಜನೆಯಾದ ಫಾರ್ಮುಲಾ ಮಣಿಪಾಲ್ ಜುಲೈ 2026ರಲ್ಲಿ ನಡೆದ ಅಂತರರಾಷ್ಟ್ರೀಯ ಫಾರ್ಮುಲಾ ಸ್ಟೂಡೆಂಟ್ ಸ್ಪರ್ಧೆಗಳಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಫಾರ್ಮುಲಾ ಸ್ಟೂಡೆಂಟ್ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ 11 ನೇ ಸ್ಥಾನಹಾಗೂಫಾರ್ಮುಲಾ ಸ್ಟೂಡೆಂಟ್ ಪೋರ್ಚುಗಲ್‌ನಲ್ಲಿ 4ನೇ ಸ್ಥಾನ ಪಡೆಯುವ ಮೂಲಕ ಜಾಗತಿಕ ಮಟ್ಟದಲ್ಲಿ ತನ್ನ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಗಮನಸೆಳೆದ ಅತ್ಯುತ್ತಮ ಪ್ರದರ್ಶನ: ಜುಲೈನಲ್ಲಿ ಸ್ವಿಟ್ಜರ್‌ಲ್ಯಾಂಡ್ ಮತ್ತು ಪೋರ್ಚುಗಲ್‌ನಲ್ಲಿ ನಡೆದ ಸ್ಪರ್ಧೆಗಳಲ್ಲಿ ಫಾರ್ಮುಲಾ ಮಣಿಪಾಲ್ ತಂಡ ಭಾಗವಹಿಸಿತ್ತು. ಪೋರ್ಚುಗಲ್‌ನಲ್ಲಿ ನಡೆದ […]

ನಾಳೆ (ಆಗಸ್ಟ್ 23) ಉಡುಪಿಯಲ್ಲಿ ನೂತನ ಕಟ್ಟಡದಲ್ಲಿ ಅದ್ದೂರಿ ಶುಭಾರಂಭಗೊಳ್ಳಲಿದೆ ಆನಂದ್ ದಂತ ಚಿಕಿತ್ಸಾಲಯ:18 ವರ್ಷಗಳ ಅನುಭವಕ್ಕೆ ಈಗ ಇನ್ನಷ್ಟು ಹೊಸತನ

ಉಡುಪಿ: ಕಳೆದ 18 ವರ್ಷಗಳಿಂದ ದಂತ ಚಿಕಿತ್ಸಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಆನಂದ್ ದಂತ ಮತ್ತು ವಕ್ರದಂತ ಚಿಕಿತ್ಸಾಲಯ (ANAND DENTAL & ORTHOALIGNERS) ಉಡುಪಿಯ ಜಿಲ್ಲಾ ನ್ಯಾಯಾಲಯದ ಹಿಂಬದಿ ರಸ್ತೆಯಲ್ಲಿ ಆಗಸ್ಟ್ 23ರಂದು ಅದ್ಧೂರಿ ಶುಭಾರಂಭಗೊಳ್ಳಲಿದೆ.ಚಿಕಿತ್ಸಾಲಯದಲ್ಲಿ ಬ್ರೇಸಸ್, ಡೆಂಟಲ್ ಇಂಪ್ಲಾಂಟ್ಸ್, ಅಲೈನರ್ಸ್, ರೂಟ್ ಕೆನಾಲ್ ಚಿಕಿತ್ಸೆ, ಮಕ್ಕಳ ದಂತ ಆರೈಕೆ, ಸ್ಮೈಲ್ ಡಿಸೈನ್, ಕ್ರೌನ್ ಮತ್ತು ಬ್ರಿಡ್ಜ್, ಸರ್ಜಿಕಲ್ ಎಕ್ಸ್ಟ್ರಾಕ್ಷನ್, ವಸಡು ಚಿಕಿತ್ಸೆ ಹಾಗೂ TMJ ಡಿಸಾರ್ಡರ್ ಸೇರಿದಂತೆ ವಿವಿಧ ದಂತ ಚಿಕಿತ್ಸಾ ಸೇವೆಗಳು ಲಭ್ಯವಿರಲಿವೆ.ಕುಟುಂಬದ […]

ರಾಜ್ಯಾದ್ಯಂತ ಒಂದು ವರ್ಷ ಕೃತಕ ಪನ್ನೀರ್’ ನಿಷೇಧ

ಬೆಂಗಳೂರು: ಪನ್ನೀರ್ ಪ್ರಿಯರಿಗೆ ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ಕೃತಕ ‘ಅನಲಾಗ್ ಪನ್ನೀರ್’ ಬಳಕೆಯನ್ನು ಒಂದು ವರ್ಷದ ಅವಧಿಗೆ ರಾಜ್ಯಾದ್ಯಂತ ಸಂಪೂರ್ಣವಾಗಿ ನಿಷೇಧಿಸಿ ಅಧಿಕೃತ ಆದೇಶ ಹೊರಡಿಸಿದೆ. ಸಾಮಾನ್ಯವಾಗಿ ಅಸಲಿ ಪನ್ನೀರ್‌ನ್ನು ಹಾಲು ಹಾಗೂ ಹಾಲಿನ ಉತ್ಪನ್ನಗಳಿಂದ ತಯಾರಿಸಲಾಗುತ್ತದೆ. ಆದರೆ, ವೆಚ್ಚ ಕಡಿಮೆ ಮಾಡಿ ಹೆಚ್ಚಿನ ಲಾಭ ಗಳಿಸುವ ಉದ್ದೇಶದಿಂದ ಕೆಲ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಹಾಲಿನ ಬದಲಿಗೆ ಸಸ್ಯಜನ್ಯ ಎಣ್ಣೆ, ಪಿಷ್ಟ ಹಾಗೂ […]

ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಹಲ್ಲೆ ಪ್ರಕರಣ: ಆರೋಪಿ ವೈದ್ಯನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಎಸ್ಪಿ, ಡಿಎಚ್‌ಓಗೆ ಮನವಿ

ಉಡುಪಿ: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಹಾಗೂ ಕನ್ನಡಪ್ರಭ ಪತ್ರಿಕೆಯ ವರದಿಗಾರ ಶ್ರೀಕಾಂತ್ ಹೆಮ್ಮಾಡಿ ಅವರ ಮೇಲೆ ಏಕಾಏಕಿ ಹಲ್ಲೆ ನಡೆಸಿ, ಜೀವ ಬೆದರಿಕೆಯೊಡ್ಡಿರುವ ಕುಂದಾಪುರ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಮಹೇಂದ್ರ ಕುಮಾರ್ ಶೆಟ್ಟಿ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸುವಂತೆ ಆಗ್ರಹಿಸಿ ಸಂಘದ ನಿಯೋಗ ಶುಕ್ರವಾರ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಸೇರಿದಂತೆ ವಿವಿಧ ಚಿಕಿತ್ಸೆಗಳ […]