ನಾಳೆ (ಆಗಸ್ಟ್ 23) ಉಡುಪಿಯಲ್ಲಿ ನೂತನ ಕಟ್ಟಡದಲ್ಲಿ ಅದ್ದೂರಿ ಶುಭಾರಂಭಗೊಳ್ಳಲಿದೆ ಆನಂದ್ ದಂತ ಚಿಕಿತ್ಸಾಲಯ:18 ವರ್ಷಗಳ ಅನುಭವಕ್ಕೆ ಈಗ ಇನ್ನಷ್ಟು ಹೊಸತನ

ಉಡುಪಿ: ಕಳೆದ 18 ವರ್ಷಗಳಿಂದ ದಂತ ಚಿಕಿತ್ಸಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಆನಂದ್ ದಂತ ಮತ್ತು ವಕ್ರದಂತ ಚಿಕಿತ್ಸಾಲಯ (ANAND DENTAL & ORTHOALIGNERS) ಉಡುಪಿಯ ಜಿಲ್ಲಾ ನ್ಯಾಯಾಲಯದ ಹಿಂಬದಿ ರಸ್ತೆಯಲ್ಲಿ ಆಗಸ್ಟ್ 23ರಂದು ಅದ್ಧೂರಿ ಶುಭಾರಂಭಗೊಳ್ಳಲಿದೆ.
ಚಿಕಿತ್ಸಾಲಯದಲ್ಲಿ ಬ್ರೇಸಸ್, ಡೆಂಟಲ್ ಇಂಪ್ಲಾಂಟ್ಸ್, ಅಲೈನರ್ಸ್, ರೂಟ್ ಕೆನಾಲ್ ಚಿಕಿತ್ಸೆ, ಮಕ್ಕಳ ದಂತ ಆರೈಕೆ, ಸ್ಮೈಲ್ ಡಿಸೈನ್, ಕ್ರೌನ್ ಮತ್ತು ಬ್ರಿಡ್ಜ್, ಸರ್ಜಿಕಲ್ ಎಕ್ಸ್ಟ್ರಾಕ್ಷನ್, ವಸಡು ಚಿಕಿತ್ಸೆ ಹಾಗೂ TMJ ಡಿಸಾರ್ಡರ್ ಸೇರಿದಂತೆ ವಿವಿಧ ದಂತ ಚಿಕಿತ್ಸಾ ಸೇವೆಗಳು ಲಭ್ಯವಿರಲಿವೆ.
ಕುಟುಂಬದ ಎಲ್ಲ ವಯೋಮಾನದವರ ದಂತ ಆರೋಗ್ಯದ ಆರೈಕೆಗೆ ಒತ್ತು ನೀಡುವ ಉದ್ದೇಶದಿಂದ ‘Gentle Family Dental Care’ ಪರಿಕಲ್ಪನೆಯಡಿ ಚಿಕಿತ್ಸಾ ಸೇವೆಗಳನ್ನು ಒದಗಿಸಲಾಗುತ್ತದೆ.
18 ವರ್ಷಗಳ ದಂತ ಚಿಕಿತ್ಸಾ ಅನುಭವದೊಂದಿಗೆ ನೂತನ ಕಟ್ಟಡದಲ್ಲಿ ಆರಂಭವಾಗುತ್ತಿರುವ ಚಿಕಿತ್ಸಾಲಯವು ಇದೀಗ ನೂತನ ಕಟ್ಟಡದಲ್ಲಿ ಇನ್ನಷ್ಟು ಹೊಸತನದೊಂದಿಗೆ,ಆಧುನಿಕ ದಂತ ಚಿಕಿತ್ಸಾ ಸೇವೆಗಳನ್ನು ಸಾರ್ವಜನಿಕರಿಗೆ ಒದಗಿಸುವ ಗುರಿಯನ್ನು ಹೊಂದಿದೆ.