ಎಂ.ಸಿ.ಸಿ. ಬ್ಯಾಂಕಿನಲ್ಲಿ ಕೊಂಕಣಿ ಮಾನ್ಯತಾ ದಿವಸ ಆಚರಣೆ

ಎಂ.ಸಿ.ಸಿ. ಬ್ಯಾಂಕ್ ವತಿಯಿಂದ ಕೊಂಕಣಿ ಭಾಷೆಯನ್ನು ಭಾರತದ ಸಂವಿಧಾನದ ಎಂಟನೇ ಅನುಸೂಚಿಗೆ ಐತಿಹಾಸಿಕವಾಗಿಸೇರ್ಪಡೆಗೊಳಿಸಿದ ದಿನವನ್ನು ಸ್ಮರಿಸುವ ಅಂಗವಾಗಿ, ಶನಿವಾರ, 15 ಆಗಸ್ಟ್ 2026ರಂದು, ಬ್ಯಾಂಕಿನ ಆಡಳಿತ ಕಚೇರಿಯಪಿ.ಎಫ್.ಎಕ್ಸ್. ಸಾಲ್ದಾನ್ಹಾ ಸ್ಮಾರಕ ಸಭಾಂಗಣದಲ್ಲಿ ಕೊಂಕಣಿ ಮಾನ್ಯತಾ ದಿವಸವನ್ನು ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಸಿ.ಸಿ. ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ವಹಿಸಿದ್ದರು.ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಸ್ಟ್ಯಾನಿ ಅಲ್ವಾರಿಸ್ ಹಾಗೂ ರಾಕ್ಣೊ ವಾರಪತ್ರಿಕೆಯಸಂಪಾದಕರು ಮತ್ತು ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ವಂದನೀಯ ಫಾ| ರೂಪೇಶ್ಮಾಡ್ತಾ […]
ಜಾಗತಿಕ ಭಾಷಾ ಜಾತ್ರೆಯಾಗಿ ಕುಂದಾಪ್ರ ಕನ್ನಡ ಹಬ್ಬ ಆಚರಣೆ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಕುಂದಾಪ್ರ ಕನ್ನಡ ಪ್ರತಿಷ್ಠಾನ (ರಿ.) ಕಳೆದ ಎಂಟು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ‘ವಿಶ್ವ ಕುಂದಾಪ್ರ ಕನ್ನಡ ಹಬ್ಬ’ ಈ ಸಲ ಜಾಗತಿಕ ಸ್ವರೂಪ ತಳೆದಿದ್ದು, ‘ವಿಶ್ವ ಕುಂದಾಪ್ರ ಕನ್ನಡ ಸಮ್ಮೇಳನ-2027’ ಎಂಬ ಹೆಸರಿನಲ್ಲಿ ಅದು ಅದ್ಧೂರಿಯಾಗಿ ಆಚರಣೆ ಆಗಲಿದೆ. ವಿಜಯನಗರದ ಬಂಟರ ಸಂಘದಲ್ಲಿ ಶನಿವಾರ ಆಯೋಜಿಸಿದ ‘ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ’ಯಲ್ಲಿ ಹಲವು ಅತಿಥಿ ಗಣ್ಯರ ಸಮ್ಮುಖದಲ್ಲಿ ಈ ಬಗ್ಗೆ ಬೃಹತ್ ಘೋಷಣೆ ಮಾಡಲಾಯಿತು. ‘ವಿಶ್ವದ ಎಲ್ಲ ಕಡೆಯಲ್ಲಿ ನಡೆಯುತ್ತಿರುವ ಕುಂದಾಪ್ರ ಕನ್ನಡ […]
ಪೊಲೀಸ್ ಠಾಣೆಗೆ ಹೋಗದೇ ಎಫ್‌ಐಆರ್: ಏಜೆಂಟಿಕ್ ಎಐ ವ್ಯವಸ್ಥೆ ಜಾರಿಗೆ ಸರ್ಕಾರ ಚಿಂತನೆ

ಬೆಂಗಳೂರು: ತೊಂದರೆಗೆ ಸಿಲುಕಿರುವ ನಾಗರಿಕರು ಪೊಲೀಸ್ ಠಾಣೆಗೆ ತೆರಳುವ ಅಗತ್ಯವಿಲ್ಲದೆ ತ್ವರಿತವಾಗಿ ಮೊದಲ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲು ನೆರವಾಗುವ ಏಜೆಂಟಿಕ್ ಕೃತಕ ಬುದ್ಧಿಮತ್ತೆ (AI) ವ್ಯವಸ್ಥೆಯನ್ನು ಅಳವಡಿಸುವ ಕುರಿತು ಕರ್ನಾಟಕ ಸರ್ಕಾರ ಪರಿಶೀಲನೆ ನಡೆಸುತ್ತಿದೆ. ಪೊಲೀಸಿಂಗ್‌ನಲ್ಲಿ ಎಐ ಬಳಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಕ್ರಮಗಳನ್ನು ಪರಿಗಣಿಸುತ್ತಿದ್ದು, ಗೃಹ, ಐಟಿ ಮತ್ತು ಇ-ಆಡಳಿತ ಇಲಾಖೆ ಈಗಾಗಲೇ ಆಂಥ್ರೋಪಿಕ್ ಹಾಗೂ ಸರ್ವಂ ಸೇರಿದಂತೆ ತಂತ್ರಜ್ಞಾನ ಕಂಪನಿಗಳೊಂದಿಗೆ ಈ ಕುರಿತು ಮಾತುಕತೆ ನಡೆಸುತ್ತಿದೆ. ನಾಗರಿಕರಿಗೆ ತುರ್ತು ಸಂದರ್ಭದಲ್ಲಿ ತಕ್ಷಣ […]
ತಮಿಳುನಾಡು ಮಹಿಳಾ ಸರ್ಕಾರಿ ಉದ್ಯೋಗಿಗಳಿಗೆ ಗುಡ್‌ನ್ಯೂಸ್: 1 ವರ್ಷ ಹೆರಿಗೆ ರಜೆ ಘೋಷಣೆ

ಚನ್ನೈ: ತಮಿಳುನಾಡು ಸರ್ಕಾರವು ಮಹಿಳಾ ಸರ್ಕಾರಿ ಉದ್ಯೋಗಿಗಳಿಗೆ ಮಹತ್ವದ ಸಿಹಿಸುದ್ದಿ ನೀಡಿದೆ. ಮೂರನೇ ಮಗುವಿನ ಜನನದ ಸಂದರ್ಭದಲ್ಲಿ ನೀಡಲಾಗುವ ಹೆರಿಗೆ ರಜೆಯನ್ನು 12 ವಾರಗಳಿಂದ 365 ದಿನಗಳಿಗೆ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ. ಪ್ರಸ್ತುತ, ಎರಡು ಮಕ್ಕಳಿಗಿಂತ ಕಡಿಮೆ ಮಕ್ಕಳಿರುವ ವಿವಾಹಿತ ಮಹಿಳಾ ಸರ್ಕಾರಿ ಉದ್ಯೋಗಿಗಳಿಗೆ 365 ದಿನಗಳ ಹೆರಿಗೆ ರಜೆ ನೀಡಲಾಗುತ್ತಿದೆ. ಆದರೆ, ಈಗಾಗಲೇ ಎರಡು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳಿರುವ ಮಹಿಳಾ ಉದ್ಯೋಗಿಗಳಿಗೆ ಮೂರನೇ ಮಗುವಿನ ಸಂದರ್ಭದಲ್ಲಿ ಕೇವಲ 12 ವಾರಗಳ ಹೆರಿಗೆ ರಜೆ ನೀಡಲಾಗುತ್ತಿತ್ತು. […]