LPG E-KYC ಗಡುವು ವಿಸ್ತರಣೆ: ಬರೀ ಎರಡೇ ನಿಮಿಷದಲ್ಲಿ ಮನೆಯಲ್ಲೇ LPG e-KYC ನೀವೇ ಮಾಡಬಹುದು!

ಸಬ್ಸಿಡಿ ದರದಲ್ಲಿ ಅಡುಗೆ ಅನಿಲ ಪಡೆಯುತ್ತಿರುವ LPG ಗ್ರಾಹಕರಿಗೆ ಕೇಂದ್ರ ಸರ್ಕಾರ ಮಹತ್ವದ ಮಾಹಿತಿ ನೀಡಿದೆ. LPG e-KYC ಪೂರ್ಣಗೊಳಿಸಲು ಈ ಮೊದಲು ನೀಡಲಾಗಿದ್ದ ಆಗಸ್ಟ್‌ 16ರ ಗಡುವನ್ನು ಆಗಸ್ಟ್‌ 23ರವರೆಗೆ ವಿಸ್ತರಿಸಲಾಗಿದೆ. ನೀವು ಇನ್ನೂ LPG e-KYC ಪೂರ್ಣಗೊಳಿಸದಿದ್ದರೆ ಆತಂಕಪಡುವ ಅಗತ್ಯವಿಲ್ಲ. ಇಂಡೇನ್‌, ಎಚ್‌ಪಿ ಗ್ಯಾಸ್‌ ಹಾಗೂ ಭಾರತ್‌ ಗ್ಯಾಸ್‌ ಗ್ರಾಹಕರು ತಮ್ಮ ಮೊಬೈಲ್‌ನಲ್ಲೇ e-KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. LPG e-KYC ಏಕೆ ಅಗತ್ಯ? LPG ಕಾಳಸಂತೆ ಹಾಗೂ ದುರ್ಬಳಕೆಯನ್ನು ತಡೆಯುವುದು ಮತ್ತು ಅಡುಗೆ ಅನಿಲ […]

ಅಲೋಶಿಯಸ್ ಗೊನ್ಜಾಗಾ ತೃತೀಯ ಭಾಷೆಯಾಗಿ ಕೊಂಕಣಿಯನ್ನು ಕನ್ನಡ ಲಿಪಿಯಲ್ಲೂ ಕಲಿಸಲು ಅಣಿಯಾಗಿದೆ: ಪ್ರಾಂಶುಪಾಲ ಫಾ ರೋಹನ್ ಡಿ’ಅಲ್ಮೇಡಾ ಘೋಷಣೆ.

ಕೊಂಕಣಿ ತೃತೀಯ ಭಾಷೆಯಾಗಿ ಅಲೋಶಿಯಸ್ ಗೊನ್ಜಾಗಾ ಸಿಬಿಎಸ್ಇ ಶಾಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದ ಮೊದಲಿನಿಂದ ಆರಂಭಿಸಲಾಗುವುದು, ಎಂದು ಶಾಲೆಯ ಪ್ರಾಂಶುಪಾಲ ಫಾ ರೋಹನ್ ಡಿ’ಅಲ್ಮೇಡಾ ಎಸ್ ಜೆ ನುಡಿದರು.ಅವರು ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ಇದರ ಸಹಯೋಗದೊಂದಿಗೆ ಕೊಂಕಣಿ ಸಂಘದ ಉದ್ಘಾಟನೆ ತಮ್ಮ ಶಾಲೆಯಲ್ಲಿ ದೀಪ ಬೆಳಗಿಸಿ ಮಾಡಿ ಮಾತನಾಡಿದರು. ಕೊಂಕಣಿ ಮಾತೃಭಾಷೆ ಇರುವ ಮಕ್ಕಳು ಕನ್ನಡ, ದೇವನಾಗರಿ, ರೋಮಿ,ಯಾವ ಲಿಪಿಗಳಲ್ಲಿ ಆಗುತ್ತದೆ ಅವುಗಳ ಉಪಯೋಗ ಮಾಡಿ ಕೊಂಕಣಿ ಕಲಿಯಬೇಕು. ನಾವು ಅದಕ್ಕೆ ಪ್ರೋತ್ಸಾಹ ನೀಡುತ್ತೇವೆ ಎಂದರು.ಕೊಂಕಣಿ […]

ಉಡುಪಿಯ ಈಸಿ ಲೈಫ್ ಎಂಟರ್ಪ್ರೈಸಸ್ ನಲ್ಲಿ ಉದ್ಯೋಗಾವಕಾಶ

ಈಸಿ ಲೈಫ್ ಎಂಟರ್ಪ್ರೈಸಸ್ ನಲ್ಲಿ ಕೌಂಟರ್ ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗೆ ನೇಮಕಾತಿ ನಡೆಯುತ್ತಿದೆ ಆಸಕ್ತಿಯುಳ್ಳವರು ಕೂಡಲೇ ಸಂಪರ್ಕಿಸಿ. ದೂರವಾಣಿ ಸಂಖ್ಯೆ: 9901876682

ಎಂ.ಸಿ.ಸಿ. ಬ್ಯಾಂಕಿನಲ್ಲಿ ಕೊಂಕಣಿ ಮಾನ್ಯತಾ ದಿವಸ ಆಚರಣೆ

ಎಂ.ಸಿ.ಸಿ. ಬ್ಯಾಂಕ್ ವತಿಯಿಂದ ಕೊಂಕಣಿ ಭಾಷೆಯನ್ನು ಭಾರತದ ಸಂವಿಧಾನದ ಎಂಟನೇ ಅನುಸೂಚಿಗೆ ಐತಿಹಾಸಿಕವಾಗಿಸೇರ್ಪಡೆಗೊಳಿಸಿದ ದಿನವನ್ನು ಸ್ಮರಿಸುವ ಅಂಗವಾಗಿ, ಶನಿವಾರ, 15 ಆಗಸ್ಟ್ 2026ರಂದು, ಬ್ಯಾಂಕಿನ ಆಡಳಿತ ಕಚೇರಿಯಪಿ.ಎಫ್.ಎಕ್ಸ್. ಸಾಲ್ದಾನ್ಹಾ ಸ್ಮಾರಕ ಸಭಾಂಗಣದಲ್ಲಿ ಕೊಂಕಣಿ ಮಾನ್ಯತಾ ದಿವಸವನ್ನು ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಸಿ.ಸಿ. ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ವಹಿಸಿದ್ದರು.ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಸ್ಟ್ಯಾನಿ ಅಲ್ವಾರಿಸ್ ಹಾಗೂ ರಾಕ್ಣೊ ವಾರಪತ್ರಿಕೆಯಸಂಪಾದಕರು ಮತ್ತು ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ವಂದನೀಯ ಫಾ| ರೂಪೇಶ್ಮಾಡ್ತಾ […]

ಜಾಗತಿಕ ಭಾಷಾ ಜಾತ್ರೆಯಾಗಿ ಕುಂದಾಪ್ರ ಕನ್ನಡ ಹಬ್ಬ ಆಚರಣೆ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಕುಂದಾಪ್ರ ಕನ್ನಡ ಪ್ರತಿಷ್ಠಾನ (ರಿ.) ಕಳೆದ ಎಂಟು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ‘ವಿಶ್ವ ಕುಂದಾಪ್ರ ಕನ್ನಡ ಹಬ್ಬ’ ಈ ಸಲ ಜಾಗತಿಕ ಸ್ವರೂಪ ತಳೆದಿದ್ದು, ‘ವಿಶ್ವ ಕುಂದಾಪ್ರ ಕನ್ನಡ ಸಮ್ಮೇಳನ-2027’ ಎಂಬ ಹೆಸರಿನಲ್ಲಿ ಅದು ಅದ್ಧೂರಿಯಾಗಿ ಆಚರಣೆ ಆಗಲಿದೆ. ವಿಜಯನಗರದ ಬಂಟರ ಸಂಘದಲ್ಲಿ ಶನಿವಾರ ಆಯೋಜಿಸಿದ ‘ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ’ಯಲ್ಲಿ ಹಲವು ಅತಿಥಿ ಗಣ್ಯರ ಸಮ್ಮುಖದಲ್ಲಿ ಈ ಬಗ್ಗೆ ಬೃಹತ್ ಘೋಷಣೆ ಮಾಡಲಾಯಿತು. ‘ವಿಶ್ವದ ಎಲ್ಲ ಕಡೆಯಲ್ಲಿ ನಡೆಯುತ್ತಿರುವ ಕುಂದಾಪ್ರ ಕನ್ನಡ […]