ಗುಟ್ಕಾ ನಿಷೇಧ ಆದೇಶ ವಾಪಸ್? ಒತ್ತಡಕ್ಕೆ ಮಣಿದ ಸರಕಾರ?

ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗುಟ್ಕಾ ನಿಷೇಧ ಆದೇಶವನ್ನು ವಾಪಸ್ ಪಡೆಯುವ ಸಾಧ್ಯತೆ ಇದೆ. ಸತತ ಒತ್ತಡ ಮತ್ತು ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದ ಆದೇಶವನ್ನು ಮರುಪರಿಶೀಲಿಸುವಂತೆ ಆಡಳಿತ ಮತ್ತು ವಿರೋಧಪಕ್ಷದ ಶಾಸಕರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ. ಗುಟ್ಕಾ ನಿಷೇಧದಿಂದ ರಾಜ್ಯದ ಏಳೆಂಟು ಜಿಲ್ಲೆಗಳ ಅಡಿಕೆ ಬೆಳೆಗಾರರ ಮೇಲೆ ಪರಿಣಾಮ ಬೀರಲಿದೆ ಎಂದು ಶಾಸಕರು ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ ನಿಷೇಧಕ್ಕೆ ಸಂಬಂಧಿಸಿದ ಆದೇಶವನ್ನು ಹಿಂಪಡೆಯುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ. ಶಾಸಕರ ಮನವಿಯನ್ನು ಪರಿಗಣಿಸಿರುವ ಮುಖ್ಯಮಂತ್ರಿ […]
ಪಾರ್ಶ್ವವಾಯು ಪೀಡಿತನಿಗೆ ಜಿಲ್ಲಾಡಳಿತದ ಸ್ಪಂದನೆ ಇಲ್ಲ; ಐತಾಳ್ ದಂಪತಿಯಿಂದ ಮಾನವೀಯ ನೆರವು

ಉಡುಪಿ: ಕಳೆದ ಮೂರು ತಿಂಗಳಿನಿಂದ ಆಶ್ರಯವಿಲ್ಲದೆ ಅಸಹಾಯಕ ಸ್ಥಿತಿಯಲ್ಲಿರುವ ಪಾರ್ಶ್ವವಾಯು ಪೀಡಿತ ಕೇರಳ ಮೂಲದ ವ್ಯಕ್ತಿಗೆ ಜಿಲ್ಲಾಡಳಿತ ಸೂಕ್ತ ಸ್ಪಂದನೆ ನೀಡಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇರಳದ ಮೂವಾಟ್ಟುಪುಳ ನಿವಾಸಿ ರಾಯಲ್ ಪೌಲ್ (48) ಪಾರ್ಶ್ವವಾಯುವಿನಿಂದ ಬಳಲುತ್ತಿದ್ದು, ಆಶ್ರಯ ಹಾಗೂ ಚಿಕಿತ್ಸೆಗಾಗಿ ಪರದಾಡುತ್ತಿದ್ದರು. ಈ ಕುರಿತು ಮೂರು ತಿಂಗಳ ಹಿಂದೆ ಅವರನ್ನು ಆಂಬುಲೆನ್ಸ್‌ನಲ್ಲಿ ಕರೆತಂದು ಸುದ್ದಿಗೋಷ್ಠಿ ನಡೆಸಿ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದರು. […]
ಕುದುರೆಮುಖ, ಆಫ್ ರೋಡಿಂಗ್ ಚಟುವಟಿಕೆ ವಿರುದ್ಧ ತೀವ್ರ ಆಕ್ರೋಶ, ಪರಿಸರ ಮತ್ತು ಗ್ರಾಮೀಣ ಭಾಗಕ್ಕೆ ಕಂಟಕವಾದ ಆಫ್ ರೋಡಿಂಗ್ ನ್ನು ತಕ್ಷಣ ನಿಲ್ಲಿಸುವಂತೆ ಆಗ್ರಹ

ಕಳಸ : ಕುದುರೆಮುಖ–ಸಂಸೆ ವ್ಯಾಪ್ತಿಯಲ್ಲಿ ಆಗಸ್ಟ್ 15 ಮತ್ತು 16ರಂದು ‘Bangalore Adventures’ ವತಿಯಿಂದ ಆಯೋಜಿಸಲಾಗಿದೆ ಎನ್ನಲಾದ ‘Kudremukh Off-road Adventure’ ಜೀಪ್ ಆಫ್‌ರೋಡಿಂಗ್ ಚಟುವಟಿಕೆಯನ್ನು ತಕ್ಷಣ ತಡೆಹಿಡಿಯುವಂತೆ ಆಗ್ರಹಿಸಿ ಕೂವೆ ನಿವಾಸಿ ನಾಗರಾಜ ಕೂವೆ ಅವರು ಸಂಸೆ ಗ್ರಾಮ ಪಂಚಾಯಿತಿ, ಕುದುರೆಮುಖ ವನ್ಯಜೀವಿ ವಿಭಾಗ, ಕಳಸ ಪ್ರಾದೇಶಿಕ ಅರಣ್ಯ ವಿಭಾಗ ಹಾಗೂ ಕುದುರೆಮುಖ ಮತ್ತು ಕಳಸ ಪೊಲೀಸ್ ಠಾಣೆಗಳಿಗೆ ದೂರು ಸಲ್ಲಿಸಿದ್ದಾರೆ. ಬೆಂಗಳೂರಿನ ನೆಲಮಂಗಲದಿಂದ ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖದವರೆಗೆ ಜೀಪ್‌ಗಳಲ್ಲಿ ಪ್ರಯಾಣ ನಡೆಸಲಾಗುತ್ತಿದ್ದು, ಆಫ್‌ರೋಡ್ ಸೆಷನ್‌ನಲ್ಲಿ […]
ಸ್ವಾತಂತ್ರ್ಯ ದಿನಾಚರಣೆ ಅನ್ನೋ ಹೊಸ ಹುರುಪು: ಝೆನ್ ಜೀ ಪೀಳಿಗೆಯ ದೃಷ್ಟಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಸ್ವಾತಂತ್ರ್ಯ… ಈ ಪದ ಕೇಳಿದ ತಕ್ಷಣ ನಮ್ಮ ಮನಸ್ಸಿನಲ್ಲಿ ಮೂಡುವ ಚಿತ್ರಗಳು ಹಲವಾರು. ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದ ಜನರು, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಜೈಲು ಸೇರಿದ್ದ ನಾಯಕರು, ದೇಶಕ್ಕಾಗಿ ಪ್ರಾಣ ಅರ್ಪಿಸಿದ ವೀರರು… 1947ರ ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ದೊರೆತಾಗ, ಅದು ಕೇವಲ ಒಂದು ದಿನಾಂಕವಾಗಿರಲಿಲ್ಲ. ಕೋಟ್ಯಂತರ ಭಾರತೀಯರ ಕನಸು ನನಸಾದ ದಿನವಾಗಿತ್ತು. ಆದರೆ ಇಂದು, ಸುಮಾರು ಎಂಟು ದಶಕಗಳ ನಂತರ, ಅದೇ ಸ್ವಾತಂತ್ರ್ಯವನ್ನು ಜೆನ್ ಜೀ ಪೀಳಿಗೆ ಹೇಗೆ ನೋಡುತ್ತದೆ? ಇಂದಿನ ಯುವಜನತೆಗೆ […]
ಎಲ್ಲಾ ಪೈಲಟ್‌ಗಳಿಗೆ ಮಾದಕ ದ್ರವ್ಯ ಸೇವನೆ ಪರೀಕ್ಷೆ ನಡೆಸಲು ಏರ್ ಇಂಡಿಯಾ ನಿರ್ಧಾರ

ನವದೆಹಲಿ: ಟರ್ಬುಲೆನ್ಸ್‌ಗೆ ಸಿಲುಕಿ ವಿಮಾನ ತೀವ್ರವಾಗಿ ಕೆಳಕ್ಕೆ ಕುಸಿದಿದ್ದ ಘಟನೆ ಬೆನ್ನಲ್ಲೇ ಏರ್ ಇಂಡಿಯಾ ಮಹತ್ವದ ನಿರ್ಧಾರ ಕೈಗೊಂಡಿದೆ. ಸಂಸ್ಥೆಯ ಎಲ್ಲಾ ಪೈಲಟ್‌ಗಳಿಗೆ ಮಾದಕ ದ್ರವ್ಯ ಸೇವನೆ ಪರೀಕ್ಷೆ ನಡೆಸಲು ಏರ್ ಇಂಡಿಯಾ ನಿರ್ಧರಿಸಿದೆ. ಪ್ರಯಾಣಿಕರ ಸುರಕ್ಷತೆ ಹಾಗೂ ವೈಮಾನಿಕ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ. ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಗಳು ತಮ್ಮ ಪೈಲಟ್‌ಗಳಿಗೆ ಆಂತರಿಕ ಸಂದೇಶ ರವಾನಿಸಿದ್ದು, ವಿಮಾನಯಾನ ನಿಯಮಗಳ ಅಡಿಯಲ್ಲಿ ಅನುಮತಿಸದ ಯಾವುದೇ ಮಾದಕ ವಸ್ತು ಅಥವಾ ಔಷಧಗಳ […]