“ವೈಭವ್ ಗೆ 15 ವರ್ಷವೋ,18 ವರ್ಷವೋ ಎಂಬುದು ನನಗೆ ಮುಖ್ಯವಲ್ಲ”ವೈಭವ್ ಸೂರ್ಯವಂಶಿ ಬಗ್ಗೆ ಆಸ್ಟ್ರೇಲಿಯಾದ ದಿಗ್ಗಜ ಬ್ರೆಟ್ ಲಿ ಹೀಗಂದಿದ್ಯಾಕೆ?

ತಮ್ಮ ಸ್ಫೋಟಕ ಬ್ಯಾಟಿಂಗ್ ಹಾಗೂ ಆತ್ಮವಿಶ್ವಾಸದ ಆಟದ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಗಮನ ಸೆಳೆದಿರುವ ಭಾರತದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಮೈದಾನದಲ್ಲಿ ಅನುಭವಿ ಆಟಗಾರನಂತೆ ಬ್ಯಾಟ್ ಬೀಸುತ್ತಿರುವ ಸೂರ್ಯವಂಶಿ ಅವರ ವಯಸ್ಸಿನ ಕುರಿತು ಈ ಹಿಂದೆ ಹಲವು ಚರ್ಚೆಗಳು ನಡೆದಿದ್ದವು. ಇದೀಗ ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ಕೂಡ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ರಣವೀರ್ ಅಲ್ಲಾಹಬಾಡಿಯಾ ಅವರೊಂದಿಗೆ ಮಾತನಾಡಿದ ಬ್ರೆಟ್ ಲೀ, ಸೂರ್ಯವಂಶಿ ಅವರ ವಯಸ್ಸಿನ ಬಗ್ಗೆ […]

ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್ ವಿರುದ್ಧ ಗಂಭೀರ ಆರೋಪ; ಕ್ಷಮಾದಾನ ಅರ್ಜಿಯಲ್ಲಿ ಪ್ರದೋಷ್ ಸ್ಫೋಟಕ ಹೇಳಿಕೆ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಹೊಸ ತಿರುವು ಸಿಗುತ್ತಿದ್ದು, ಪ್ರಕರಣದ 14ನೇ ಆರೋಪಿ ಪ್ರದೋಷ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಕ್ಷಮಾದಾನ ಅರ್ಜಿಯಲ್ಲಿ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾನೆ. ತಾನು ರೇಣುಕಾಸ್ವಾಮಿಗೆ ಹಲ್ಲೆ ನಡೆಸುವುದನ್ನು ತಡೆಯಲು ಪ್ರಯತ್ನಿಸಿದ್ದರೂ ದರ್ಶನ್ ಹಾಗೂ ಇತರ ಆರೋಪಿಗಳು ತನ್ನ ಮಾತು ಕೇಳಲಿಲ್ಲ ಎಂದು ಪ್ರದೋಷ್ ಅರ್ಜಿಯಲ್ಲಿ ಹೇಳಿಕೊಂಡಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಗೆ ಗೊತ್ತಿರುವ ಸಂಪೂರ್ಣ ಸತ್ಯವನ್ನು ನ್ಯಾಯಾಲಯದ ಮುಂದೆ ಹೇಳಲು ಸಿದ್ಧನಿದ್ದು, ತನ್ನನ್ನು ಕ್ಷಮಿಸಿ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾನೆ. ‘ಹೊಡೆಯುವುದು […]