Rain Alert: ಕರಾವಳಿ-ಮಲೆನಾಡಿಗೆ ಬಿಗ್ ಶಾಕ್ ಕರ್ನಾಟಕದ ಹವಾಮಾನದಲ್ಲಾಗಲಿದೆ ದಿಢೀರ್ ಬದಲಾವಣೆ

ರಾಜ್ಯದಲ್ಲಿ ಮಳೆ ಇಳಿಕೆ, ಪೆಸಿಫಿಕ್ ಚಂಡಮಾರುತದಿಂದ ಹಿಂದೂ ಮಹಾಸಾಗರ, ಅರಬ್ಬಿ ಸಮುದ್ರದ ಮೇಲೆ ಪ್ರಭಾವ. ಕರಾವಳಿ, ಮಲೆನಾಡು, ಒಳನಾಡಿನಲ್ಲಿ ಮಳೆ ಮುನ್ಸೂಚನೆ. ರಾಜ್ಯದಲ್ಲಿ ಮಳೆಯ ಆರ್ಭಟ ತುಸು ತಣ್ಣಗಾಗುವ ಲಕ್ಷಣಗಳು ಗೋಚರಿಸುತ್ತಿವೆ. ಪೆಸಿಫಿಕ್ ಸಾಗರದ ಜಪಾನ್‍ನ ಆಗ್ನೇಯ ಭಾಗದಲ್ಲಿ ಅತ್ಯಂತ ಪ್ರಭಲವಾದ ಚಂಡಮಾರುತವೊಂದು ರೂಪುಗೊಂಡಿದ್ದು, ಇದರ ನೇರ ಪ್ರಭಾವ ಈಗ ಭಾರತದ ಹಿಂದೂ ಮಹಾಸಾಗರ ಹಾಗೂ ಅರಬ್ಬಿ ಸಮುದ್ರದ ಮೇಲೆ ಬೀರಿದೆ. ಆಸ್ಟ್ರೇಲಿಯಾ ಕಡೆಯಿಂದ ಅರಬ್ಬಿ ಸಮುದ್ರದ ಕಡೆಗೆ ಬೀಸಬೇಕಿದ್ದ ತೇವಾಂಶಭರಿತ ಮಾರುತಗಳು ನೇರವಾಗಿ ಬಂಗಾಳಕೊಲ್ಲಿಯ ಮೂಲಕ […]

ಸರ್ಕಾರಿ ಕೆಲಸ ಎಂದರೆ ಬಂದು ಹೋಗುವುದಲ್ಲ’: LED ಬೀದಿ ದೀಪ ಯೋಜನೆ ಅನುಷ್ಠಾನದಲ್ಲಿ ವಿಳಂಬ, ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ತರಾಟೆ

ಬೆಂಗಳೂರು: ನಗರದಲ್ಲಿ ಎಲ್‌ಇಡಿ ಬೀದಿ ದೀಪಗಳ ಯೋಜನೆ ಸಂಪೂರ್ಣವಾಗಿ ಜಾರಿಯಾದರೆ ಶೇ.61.01ರಷ್ಟು ವಿದ್ಯುತ್ ಉಳಿತಾಯ ಸಾಧಿಸಲು ಸಾಧ್ಯವಾಗುತ್ತದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಮಂಗಳವಾರ ಹೇಳಿದ್ದಾರೆ. ಮಂಗಳವಾರ ನಡೆದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವಿದ್ಯುತ್ ಎಂಜಿನಿಯರ್‌ಗಳ ಸಭೆಯಲ್ಲಿ ಎಲ್‌ಇಡಿ ಬೀದಿ ದೀಪ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ಯೋಜನೆ ಅನುಷ್ಠಾನದಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಅಧಿಕಾರಿಗಳ ಕಾರ್ಯವೈಖರಿಯನ್ನು ಕಟುವಾಗಿ ತರಾಟೆಗೆ ತೆಗೆದುಕೊಂಡರು. ಸಭೆಗೆ ಬಂದ ಅಧಿಕಾರಿಗಳ ಬಳಿ […]

ರಾಮನಗರ ಕರಗ ಉತ್ಸವದಲ್ಲಿ ʻಡಿ ಬಾಸ್ʼ, ʻಡಿ ಬಾಸ್ʼ ಘೋಷಣೆ – ಗರಂ ಆದ ಸಿಎಂ

ರಾಮನಗರ: ಇಲ್ಲಿನ ಕರಗ ಮಹೋತ್ಸವದಲ್ಲಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಭಾಷಣ ಆರಂಭಿಸಲು ಮುಂದಾದ ವೇಳೆ ನಟ ದರ್ಶನ್ ಅಭಿಮಾನಿಗಳು ನಿರಂತರವಾಗಿ ʻಡಿ ಬಾಸ್, ಡಿ ಬಾಸ್ʼ ಎಂದು ಘೋಷಣೆ ಕೂಗಿದ ಘಟನೆ ನಡೆದಿದೆ. ವೇದಿಕೆಯಲ್ಲಿ ಸಿಎಂ ಮೈಕ್ ಹಿಡಿಯುತ್ತಿದ್ದಂತೆಯೇ ಅಭಿಮಾನಿಗಳ (Darshan Fans) ಘೋಷಣೆ ಜೋರಾಗಿದ್ದು, ಭಾಷಣಕ್ಕೆ ಕೆಲಕಾಲ ಅಡಚಣೆ ಉಂಟಾಯಿತು. ಘೋಷಣೆಗಳು ಮುಂದುವರಿದ ಕಾರಣ ಮುಖ್ಯಮಂತ್ರಿ ಕೆಲ ಹೊತ್ತು ಭಾಷಣ ನಿಲ್ಲಿಸಿ ಪರಿಸ್ಥಿತಿಯನ್ನ ಸಮಾಧಾನಗೊಳಿಸಲು ಪ್ರಯತ್ನಿಸಿದರು. ಕಾರ್ಯಕ್ರಮದ ವೇಳೆ ಸಿಎಂ ಡಿ.ಕೆ. ಶಿವಕುಮಾರ್ ಹಲವು […]