ಕುಂದಾಪುರದಲ್ಲಿ ಉದ್ಯಮಿ ಗುಂಡಿಕ್ಕಿ ಹತ್ಯೆ: ಹಣಕಾಸಿನ ವ್ಯವಹಾರವೇ ಕಾರಣ?

ಉಡುಪಿ: ಚರ್ಚ್ ರಸ್ತೆಯ ಹೋಲಿ ರೋಸರಿ ಚರ್ಚ್ ಎದುರು ಉದ್ಯಮಿ ಐವನ್ ರಿಚರ್ಡ್ ಮಸ್ಕರೇನಸ್ ಅವರನ್ನು ಗುಂಡಿಕ್ಕಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣಕಾಸಿನ ವ್ಯವಹಾರ ಹಾಗೂ ಇತರ ವ್ಯವಹಾರಗಳಲ್ಲಿನ ಮನಸ್ತಾಪವೇ ಪ್ರಮುಖ ಕಾರಣ ಎಂಬುದು ಪೊಲೀಸ್ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪೊಲೀಸರ ಮಾಹಿತಿ ಪ್ರಕಾರ, ಜುಲೈ 30ರಂದು ರಾತ್ರಿ ಸುಮಾರು 11.45ಕ್ಕೆ ಆರೋಪಿ ಡೆರಿಕ್ ಕ್ರಾಸ್ತಾ ಅವರು ಐವನ್ ಅವರಿಗೆ ಕರೆ ಮಾಡಿ ಹಣಕಾಸಿನ ವ್ಯವಹಾರದ ಕುರಿತು ಮಾತುಕತೆ ನಡೆಸಿದ್ದರು. ಬಾಕಿ ಹಣವನ್ನು ಮಧ್ಯಸ್ಥಿಕೆ ವಹಿಸಿ ಕೊಡಿಸುವುದಾಗಿ […]
ಪ್ರಧಾನಿ “ಚಿನ್ನ ಖರೀದಿಯ ಹೇಳಿಕೆ” ನಂತರ ಚಿನ್ನ ಖರೀದಿ ಹೆಚ್ಚಾಯಿತಾ? ಕಡಿಮೆಯಾಯಿತಾ? ಇಲ್ಲಿದೆ ಇತ್ತೀಚಿನ ವರದಿಯ ಅಚ್ಚರಿ ಮಾಹಿತಿ!

ಪ್ರಧಾನಿ ನರೇಂದ್ರ ಮೋದಿ ಅವರು ಒಂದು ವರ್ಷದ ಕಾಲ ಚಿನ್ನ ಖರೀದಿಯನ್ನು, ವಿಶೇಷವಾಗಿ ಮದುವೆ ಮತ್ತಿತರ ಸಮಾರಂಭಗಳಿಗಾಗಿ ಚಿನ್ನಾಭರಣ ಖರೀದಿಯನ್ನು ಮುಂದೂಡುವಂತೆ ಮನವಿ ಮಾಡಿದ್ದರು. ದೇಶದ ವಿದೇಶಿ ವಿನಿಮಯ ಮೀಸಲು ಮತ್ತು ಆಮದು ವೆಚ್ಚದ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶ ಇದಕ್ಕೆ ಕಾರಣವಾಗಿತ್ತು. ಹಾಗಾದರೆ ಮೋದಿ ಅವರ ಮನವಿ ಬಳಿಕ ಜನರು ನಿಜಕ್ಕೂ ಚಿನ್ನ ಖರೀದಿಸುವುದನ್ನು ಕಡಿಮೆ ಮಾಡಿದ್ದಾರಾ? ಅಥವಾ ಬೆಲೆ ಏರಿಕೆಯ ನಡುವೆಯೂ ಚಿನ್ನದ ಮೇಲಿನ ಮೋಹ ಹಾಗೆಯೇ ಉಳಿದಿದೆಯಾ? ಇತ್ತೀಚಿನ ಅಂಕಿ-ಅಂಶಗಳು ಇದಕ್ಕೆ […]
ಕಾರ್ಕಳ: ಹರ್ಕ್ಯುಲಸ್ ರೋಡಿಯೋ ಗೇರ್ ಸೈಕಲ್ ಮಾರಾಟಕ್ಕಿದೆ

ಕಾರ್ಕಳ: ಆರು ವರ್ಷ, ಓಡಿಸಿದ ಉತ್ತಮ ನಿರ್ವಹಣೆ ಇರುವ ಹರ್ಕ್ಯುಲಸ್ ಕಂಪೆನಿಯ 21 ಗೇರ್ ರೋಡಿಯೋ ಸೈಕಲ್(ರೋಡ್ ಬೈಕ್) ಮಾರಾಟಕ್ಕಿದೆ. ಹುಡುಗ, ಹುಡುಗಿ, ಮಹಿಳೆಯರು ಓಡಿಸಬಹುದಾದ ಯುನಿಸೆಕ್ಸ್ ಮಾಡೆಲ್ ಸೈಕಲ್ ಇದಾಗಿದೆ. ಬೆಲೆ- 7999- ವಿಶೇಷತೆಗಳು ಆಸಕ್ತರು ಸಂಪರ್ಕಿಸಿ – 8762055656
ಕುಂದಾಪುರದಲ್ಲಿ ಉದ್ಯಮಿಗೆ ಗುಂಡಿಕ್ಕಿ ಹತ್ಯೆ

ಉಡುಪಿ: ವ್ಯಕ್ತಿಯೊಬ್ಬರನ್ನು ಪಿಸ್ತೂಲ್‌ನಿಂದ ಗುಂಡಿಕ್ಕಿ ಬರ್ಬರವಾಗಿ ಹತ್ಯೆಗೈದ ಘಟನೆ ಶುಕ್ರವಾರ ಮುಂಜಾನೆ 3.30ರ ಸುಮಾರಿಗೆ ಕುಂದಾಪುರ ಚರ್ಚ್ ರಸ್ತೆಯಲ್ಲಿರುವ ಹೋಲಿ ರೋಸರಿ ಚರ್ಚ್ ಎದುರು ನಡೆದಿದೆ. ಬಾರ್ಕೂರು ಕಚೂರು ನಿವಾಸಿ ಐವನ್ ರಿಚರ್ಡ್ ಮಸ್ಕರೇನಸ್ (45) ಮೃತರು. ಅವರು ಹಣಕಾಸು ವ್ಯವಹಾರ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಐವನ್ ಅವರು ಶುಕ್ರವಾರ ಮುಂಜಾನೆ ಮಹಿಳೆಯೊಬ್ಬರೊಂದಿಗೆ ಕಾರಿನಲ್ಲಿ ಚರ್ಚ್ ರಸ್ತೆಗೆ ಬಂದಿದ್ದ ವೇಳೆ, ಆರೋಪಿ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ಗುಂಡೇಟಿನಿಂದ ತೀವ್ರ ರಕ್ತಸ್ರಾವಗೊಂಡ ಐವನ್ […]
ದ್ವೇಷ ಭಾಷಣ ಪ್ರಕರಣ: ಉಡುಪಿ ನಗರ ಠಾಣೆಗೆ ಹಾಜರಾದ ಶಾಸಕ ಯಶ್ ಪಾಲ್ ಸುವರ್ಣ

ಉಡುಪಿ: ರಾಹುಲ್ ಗಾಂಧಿ ವಿರುದ್ಧ ದ್ವೇಷ ಭಾಷಣ ಮಾಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಗುರುವಾರ ರಾತ್ರಿ ಉಡುಪಿ ನಗರ ಪೊಲೀಸ್ ಠಾಣೆಗೆ ಹಾಜರಾಗಿ ವಿಚಾರಣೆಗೆ ಒಳಗಾದರು.ಮಂಗಳವಾರ ಉಡುಪಿ ನಗರದಲ್ಲಿ ಜಿಲ್ಲಾ ಬಿಜೆಪಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಶಾಸಕ ಯಶ್ ಪಾಲ್ ಸುವರ್ಣ ನೀಡಿದ್ದ ಭಾಷಣದ ಕುರಿತು ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ನೀಡಿದ ದೂರಿನ ಮೇರೆಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಸಂಬಂಧ […]