ಅಸ್ಸಾಂನಲ್ಲಿ ಪ್ರವಾಹದ ಅಬ್ಬರ: 7 ಜಿಲ್ಲೆಗಳ 3 ಲಕ್ಷಕ್ಕೂ ಅಧಿಕ ಜನ ಸಂಕಷ್ಟದಲ್ಲಿ, ಮೃತರ ಸಂಖ್ಯೆ 78ಕ್ಕೆ ಏರಿಕೆ

ಗುವಾಹಾಟಿ: ಅಸ್ಸಾಂ ರಾಜ್ಯದಲ್ಲಿ ಭಾರೀ ಮಳೆಯಿಂದ ಉಂಟಾದ ಪ್ರವಾಹ ಪರಿಸ್ಥಿತಿ ಮತ್ತಷ್ಟು ಗಂಭೀರಗೊಂಡಿದೆ. ರಾಜ್ಯದ ಏಳು ಜಿಲ್ಲೆಗಳ 3 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹದ ಸಂಕಷ್ಟಕ್ಕೆ ಸಿಲುಕಿದ್ದು, ಈ ವರ್ಷದ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ನೂರಾರು ಗ್ರಾಮಗಳು ಜಲಾವೃತಗೊಂಡಿದ್ದು, 21,500 ಹೆಕ್ಟೇರ್‌ಗೂ ಹೆಚ್ಚು ಕೃಷಿ ಭೂಮಿ ನೀರಿನಲ್ಲಿ ಮುಳುಗಿದೆ. ಅಧಿಕೃತ ಮಾಹಿತಿಯ ಪ್ರಕಾರ ಶಿವಸಾಗರ, ಚರೈಡಿಯೊ, ಗೋಲಾಘಾಟ್, ಜೋರ್ಹತ್, ನಾಗಾಂವ್, ವಿಶ್ವನಾಥ್ ಹಾಗೂ ಕಾಮರೂಪ್ ಜಿಲ್ಲೆಗಳು ಪ್ರವಾಹದಿಂದ ತೀವ್ರವಾಗಿ ಬಾಧಿತವಾಗಿವೆ. ಒಟ್ಟು 21 ಕಂದಾಯ […]

ಸೂರ್ಯೋದಯಕ್ಕೂ ಮೊದಲೇ ರಿಲೀಸಾಗಿ ಅಬ್ಬರಿಸಿತು ‘ರಾಮಾಯಣ’ ಟ್ರೈಲರ್,ರಾವಣನಾಗಿ ಯಶ್ ಅಬ್ಬರ, ಶ್ರೀರಾಮನಾಗಿ ರಣಬೀರ್ ಕಪೂರ್ ಮಿಂಚು

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಪೌರಾಣಿಕ ಸಿನಿಮಾ ‘ರಾಮಾಯಣ’ ಚಿತ್ರದ ಮೊದಲ ಟ್ರೈಲರ್ ಇಂದು ಬ್ರಾಹ್ಮಿ ಮುಹೂರ್ತದಲ್ಲಿ ಬಿಡುಗಡೆಯಾಗಿ ಸಿನಿಪ್ರಿಯರ ಮನಗೆದ್ದಿದೆ. ರಾವಣನಾಗಿ ರಾಕಿಂಗ್ ಸ್ಟಾರ್ ಯಶ್, ಶ್ರೀರಾಮನಾಗಿ ರಣಬೀರ್ ಕಪೂರ್ ಹಾಗೂ ಸೀತೆಯಾಗಿ ಸಾಯಿ ಪಲ್ಲವಿ ಅಭಿನಯಿಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ಪಡೆಯುತ್ತಿವೆ. ಆಸ್ಕರ್ ಪ್ರಶಸ್ತಿ ವಿಜೇತರಾದ ಹಾನ್ಸ್ ಜಿಮ್ಮರ್ ಮತ್ತು ಎ.ಆರ್. ರೆಹಮಾನ್ ಅವರ ಸಂಗೀತ ಹಾಗೂ ಅದ್ಭುತ ವಿಎಫ್‌ಎಕ್ಸ್ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ. ನಿರ್ದೇಶಕ ನಿತೇಶ್ ತಿವಾರಿ ಹಾಗೂ ನಿರ್ಮಾಪಕ ನಮಿತ್ […]

ಸುಪ್ರೀಂ ಕೋರ್ಟ್‌ನಲ್ಲಿ ಇಂದು ಶೃಂಗೇರಿ ಅಂಚೆ ಮತ ಮರು ಎಣಿಕೆ ಪ್ರಕರಣ ವಿಚಾರಣೆ, ರಾಜ್ಯದ ಗಮನ ತೀರ್ಪಿನತ್ತ

ಚಿಕ್ಕಮಗಳೂರು: 2023ರ ವಿಧಾನಸಭೆ ಚುನಾವಣೆಯಿಂದ ಆರಂಭವಾಗಿ 2026ರಲ್ಲಿ ಶಾಸಕ ಸ್ಥಾನ ಬದಲಾವಣೆಗೆ ಕಾರಣವಾಗಿ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತ ಮರು ಎಣಿಕೆ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ಮಹತ್ವದ ವಿಚಾರಣೆ ನಡೆಯಲಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ 201 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ, ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅಂಚೆ ಮತಗಳ ಮರು ಎಣಿಕೆಗೆ ಆಗ್ರಹಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಸುಮಾರು […]

ಭಾರತೀಯ ಶೇರ್ ಮಾರ್ಕೆಟ್ ಬಗ್ಗೆ ಪ್ರಾಥಮಿಕ ಹಂತದ ಉಚಿತ ಮಾಹಿತಿ ಕಾರ್ಯಗಾರ

ಭಾರತೀಯ ಶೇರ್ ಮಾರ್ಕೆಟ್ ಬಗ್ಗೆ ಪ್ರಾಥಮಿಕ ಹಂತದ ಉಚಿತ ಮಾಹಿತಿ ಕಾರ್ಯಗಾರ ಇದೇ ಜುಲೈ 31 ರ ಶುಕ್ರವಾರದಂದು ಸಂಜೆ5 ರಿಂದ 6 ಗಂಟೆವರೆಗೆ ಉಡುಪಿಯ ಬುಲ್ಫೋರ್ಸ್ ಆಫೀಸ್ ನಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿ/ನೋಂದಾವಣೆಗಾಗಿ ಸಂಪರ್ಕಿಸಿ:98864321978310356533( ಮೊದಲು ನೋಂದಾಯಿಸಿದ 15 ಮಂದಿಗೆ ಮಾತ್ರ ಅವಕಾಶ)

ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರೀಯ ಮಟ್ಟದ ಮೂರು ದಿನಗಳ ಅಧ್ಯಾಪಕರ ಅಭಿವೃದ್ಧಿ ಕಾರ್ಯಾಗಾರ

ಉಡುಪಿ: ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗವು ಐಇಇಇ ಎಲೆಕ್ಟ್ರಾನಿಕ್ ವಿನ್ಯಾಸ ಸ್ವಯಂಚಾಲನ ಮಂಡಳಿ,ಬೆಂಗಳೂರು ಚಾಪ್ಟರ್ ಇದರ ಸಹಯೋಗದೊಂದಿಗೆ ದಿನಾಂಕ 6 ರಿಂದ 8 ಆಗಸ್ಟ್ 2026 ರವರೆಗೆ ಕೃತಕ ಬುದ್ಧಿಮತ್ತೆ ಆಧಾರಿತ ಎಲೆಕ್ಟ್ರಾನಿಕ್ ಡಿಸೈನ್ ಆಟೋಮೇಷನ್ ಮತ್ತು ವಿಎಲ್‍ಎಸ್‍ಐ ಸಿಸ್ಟಮ್ ವಿನ್ಯಾಸ: ಸಿದ್ಧಾಂತದಿಂದ ಪ್ರಾಯೋಗಿಕ ಅನುಷ್ಠಾನ” ಎಂಬ ವಿಷಯದ ಕುರಿತು ರಾಷ್ಟ್ರೀಯ ಮಟ್ಟದ ಅಧ್ಯಾಪಕರ ಅಭಿವೃದ್ಧಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಅದ್ಯಾಪಕರು, ಸಂಶೋಧಕರು, ಸ್ನಾತಕೋತರ ವಿದ್ಯಾರ್ಥಿಗಳು ಹಾಗೂ ಕೈಗಾರಿಕಾ ವೃತ್ತಿಪರರಿಗೆ […]