ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರೀಯ ಮಟ್ಟದ ಮೂರು ದಿನಗಳ ಅಧ್ಯಾಪಕರ ಅಭಿವೃದ್ಧಿ ಕಾರ್ಯಾಗಾರ

ಉಡುಪಿ: ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗವು ಐಇಇಇ ಎಲೆಕ್ಟ್ರಾನಿಕ್ ವಿನ್ಯಾಸ ಸ್ವಯಂಚಾಲನ ಮಂಡಳಿ,
ಬೆಂಗಳೂರು ಚಾಪ್ಟರ್ ಇದರ ಸಹಯೋಗದೊಂದಿಗೆ ದಿನಾಂಕ 6 ರಿಂದ 8 ಆಗಸ್ಟ್ 2026 ರವರೆಗೆ ಕೃತಕ ಬುದ್ಧಿಮತ್ತೆ ಆಧಾರಿತ ಎಲೆಕ್ಟ್ರಾನಿಕ್ ಡಿಸೈನ್ ಆಟೋಮೇಷನ್ ಮತ್ತು ವಿಎಲ್‍ಎಸ್‍ಐ ಸಿಸ್ಟಮ್ ವಿನ್ಯಾಸ: ಸಿದ್ಧಾಂತದಿಂದ ಪ್ರಾಯೋಗಿಕ ಅನುಷ್ಠಾನ” ಎಂಬ ವಿಷಯದ ಕುರಿತು ರಾಷ್ಟ್ರೀಯ ಮಟ್ಟದ ಅಧ್ಯಾಪಕರ ಅಭಿವೃದ್ಧಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.

ಅದ್ಯಾಪಕರು, ಸಂಶೋಧಕರು, ಸ್ನಾತಕೋತರ ವಿದ್ಯಾರ್ಥಿಗಳು ಹಾಗೂ ಕೈಗಾರಿಕಾ ವೃತ್ತಿಪರರಿಗೆ ಆಧುನಿಕ ಎಲೆಕ್ಟ್ರಾನಿಕ್ ಡಿಸೈನ್ ಆಟೋಮೇಷನ್, ವಿಎಲ್‍ಎಸ್‍ಐ ಸಿಸ್ಟಂ ವಿನ್ಯಾಸ, ಕೃತಕ ಬುದ್ಧಿಮತ್ತೆ ಆಧಾರಿತ ಚಿಪ್ ವಿನ್ಯಾಸ, ತಂತ್ರಜ್ಞಾನಗಳು ಹಾಗೂ ಹಾರ್ಡ್‍ವೇರ್ ಭದ್ರತೆ ಕುರಿತು ಜ್ಞಾನವನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ.
ಕಾರ್ಯಕ್ರಮದಲ್ಲಿ ಶೈಕ್ಷಣಿಕ ಹಾಗೂ ಕೈಗಾರಿಕಾ ಕ್ಷೇತ್ರದ ಖ್ಯಾತ ತಜ್ಞರು, ಐಇಇಇ ಎಲೆಕ್ಟ್ರಾನಿಕ್ ವಿನ್ಯಾಸ ಸ್ವಯಂಚಾಲನ ಮಂಡಳಿ ಇಲ್ಲಿನ ಹಿರಿಯ ಪ್ರತಿನಿಧಿಗಳು ಹಾಗೂ ಟೆಕ್ಸಾಸ್ ಇನ್‍ಸ್ಟ್ರುಮೆಂಟ್ಸ್‍ನ ಮಾಜಿ ತಜ್ಞರು ಪಾಲ್ಗೊಂಡು ವಿಶೇಷ ತರಬೇತಿ ನೀಡಲಿದ್ದಾರೆ. ಇದರೊಂದಿಗೆ ಸೆಮಿಕಂಡಕ್ಟರ್ ಹಾಗೂ ಇಂಟಿಗ್ರೇಟೆಡ್ ಸಕ್ರ್ಯೂಟ್ ವಿನ್ಯಾಸ ಕ್ಷೇತ್ರದಲ್ಲಿ ಬೆಳೆಯುತ್ತಿರುವ ನೂತನ ತಂತ್ರಜ್ಞಾನಗಳ ಕುರಿತು ಪ್ರಾಯೋಗಿಕ ಅನುಭವ ದೊರೆಯಲಿದೆ.
ಈ ಕಾರ್ಯಾಗಾರದ ನೊಂದಣಿಗೆ 4 ಆಗಸ್ಟ್ 2926 ಕೊನೆಯ ದಿನವಾಗಿದ್ದು ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಕಾರ್ಯಕ್ರಮದ ಸಂಯೋಜಕರಾದ ಡಾ. ನಾಗರಾಜ್ ರಾವ್ ಅವರನ್ನು 9945357819 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು