ಖಾತೆಯಿಂದ ಹಣ ಕಡಿತ: ಗ್ರಾಹಕನ ಪರ ತೀರ್ಪು, ಬ್ಯಾಂಕ್‌ಗೆ ಪರಿಹಾರ ನೀಡಲು ಆದೇಶ

ಕಾಸರಗೋಡು: ಗ್ರಾಹಕರ ಖಾತೆಯಿಂದ ಹಣ ಕಡಿತಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌತ್ ಇಂಡಿಯನ್ ಬ್ಯಾಂಕ್‌ನ ಸೀತಾಂಗೋಳಿ ಶಾಖೆ ವಿರುದ್ಧ ದಾಖಲಾಗಿದ್ದ ದೂರಿನಲ್ಲಿ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗವು ಗ್ರಾಹಕನ ಪರವಾಗಿ ತೀರ್ಪು ನೀಡಿದೆ. ಕಡಿತಗೊಳಿಸಿದ ಮೊತ್ತವನ್ನು ಮರುಪಾವತಿಸುವುದರ ಜೊತೆಗೆ, ಮಾನಸಿಕ ಯಾತನೆಗೆ ಪರಿಹಾರ ಹಾಗೂ ವ್ಯಾಜ್ಯದ ವೆಚ್ಚವನ್ನು ಪಾವತಿಸುವಂತೆ ಬ್ಯಾಂಕ್‌ಗೆ ಆಯೋಗ ಸೂಚಿಸಿದೆ. ದೂರಿನ ಪ್ರಕಾರ, ರಾಜು ಸ್ಟೀಫನ್ ಡಿ’ಸೋಜಾ ಅವರು 2022ರಲ್ಲಿ ಸೀತಾಂಗೋಳಿಯ ಸೌತ್ ಇಂಡಿಯನ್ ಬ್ಯಾಂಕ್ ಶಾಖೆಯಲ್ಲಿ ಚಾಲ್ತಿ ಖಾತೆ ತೆರೆದಿದ್ದರು. ಬ್ಯಾಂಕ್ ನಿಗದಿಪಡಿಸಿದ್ದ […]
ಹಾರಾಟದ ಮಧ್ಯದಲ್ಲೇ British Airwaysನ 3 ಪೈಲಟ್‌ಗಳು ಅಸ್ವಸ್ಥ: Food Poisoning ಶಂಕೆ, ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು ಹೇಗೆ?

ವಿಮಾನ ಹಾರಾಟಕ್ಕೂ ಮುನ್ನದ ರಾತ್ರಿ ಮೂವರು ಪೈಲಟ್‌ಗಳು ಏರ್‌ಲೈನ್ ವ್ಯವಸ್ಥೆ ಮಾಡಿದ್ದ ಹೋಟೆಲ್‌ನಲ್ಲಿ ತಂಗಿದ್ದರು. ಪ್ರಯಾಣ ಆರಂಭಿಸುವ ಮೊದಲು ಹೋಟೆಲ್ ಲೌಂಜ್‌ನಲ್ಲಿ ಉಪಾಹಾರ ಸೇವಿಸಿದ್ದರು. ಹೈದರಾಬಾದ್/ಲಂಡನ್: ಹೈದರಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಬ್ರಿಟಿಷ್ ಏರ್‌ವೇಸ್ (BA276) ವಿಮಾನದ ಮೂವರು ಪೈಲಟ್‌ಗಳು ಹಾರಾಟದ ಮಧ್ಯೆಯೇ ತೀವ್ರ ರೀತಿಯಲ್ಲಿ ಅಸ್ವಸ್ಥಗೊಂಡ ಆತಂಕಕಾರಿ ಘಟನೆ ನಡೆದಿದೆ. ಉಪಾಹಾರ ಸೇವಿಸಿದ ಬಳಿಕ ಫುಡ್ ಪಾಯಿಸನಿಂಗ್ ಆಗಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಈ ಘಟನೆ ವಿಮಾನಯಾನ ವಲಯದಲ್ಲಿ ಆತಂಕ ಮೂಡಿಸಿದೆ. ಆದಾಗ್ಯೂ, ಪ್ರಯಾಣಿಕರ ಸುರಕ್ಷತೆಗೆ ಯಾವುದೇ ಧಕ್ಕೆಯಾಗಿಲ್ಲ […]
ನೀಟ್ ಪೇಪರ್ ಲೀಕ್ ಸಾಮಾನ್ಯ ವಿಷಯವಲ್ಲ’: ಪ್ರಧಾನಿ ನರೇಂದ್ರ ಮೋದಿಯಿಂದ ಮೊದಲ ವಿಡಿಯೋ ಸಂದೇಶ -ತಪ್ಪಿತಸ್ಥರ ವಿರುದ್ಧ ಏನೆಲ್ಲಾ ಕ್ರಮಗಳು

ಪ್ರಧಾನಿ ನರೇಂದ್ರ ಮೋದಿಯವರು, ವಿಡಿಯೋ ಸಂದೇಶದ ಮೂಲಕ ನೀಟ್ ಪೇಪರ್ ಲೀಕ್ ಘಟನೆ ವಿರುದ್ಧ ಸರಕಾರ ಕೈಗೊಂಡ ಕ್ರಮಗಳು, ಇನ್ನು ಮುಂದೆ ಕೈಗೊಳ್ಳಲಿರುವ ಕಠಿಣ ಕ್ರಮಗಳ ಬಗ್ಗೆ 2 ನಿಮಿಷ 56 ಸೆಕೆಂಡ್‌ಗಳ ವಿಡಿಯೋದಲ್ಲಿ ತಿಳಿಸಿದ್ದಾರೆ. ಹೊಸದಿಲ್ಲಿ: ದೇಶದಾದ್ಯಂತ ನೀಟ್ ಪೇಪರ್ ಲೀಕ್ ವಿರುದ್ಧದ ಪ್ರತಿಭಟನೆಗಳು ಹಬ್ಬಿವೆ. ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ದೆಹಲಿಯ ಜಂತರ್ ಮಂತರ್‌ನಲ್ಲಿಯೂ 3 ದಿನಗಳಿಂದ ಭಾರೀ ಪ್ರತಿಭಟನೆ ನಡೆಯುತ್ತಿದೆ. ಈ ಹೊತ್ತಲ್ಲಿ ಗುರುವಾರ ನೀಟ್ ಅಕ್ರಮಗಳ ತನಿಖೆಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್ […]
ಮೂಡ್ಲಕಟ್ಟೆ: ಮಾದಕ ದ್ರವ್ಯಗಳಿಂದ ದೂರವಿದ್ದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ: ನ್ಯಾಯಾಧೀಶ ಅಬ್ದುಲ್ ರಹೀಮ್ ಹುಸೇನ್ ಶೇಖ್ ಸಲಹೆ

ಕುಂದಾಪುರ: ಮಾದಕ ದ್ರವ್ಯಗಳ ಸೇವನೆಯು ಯುವಜನತೆಯ ಭವಿಷ್ಯ, ಆರೋಗ್ಯ ಹಾಗೂ ಕುಟುಂಬ ವ್ಯವಸ್ಥೆಯ ಮೇಲೆಯೇ ತೀವ್ರ ಹಾನಿ ಉಂಟುಮಾಡುತ್ತದೆ. ದುರಭ್ಯಾಸಗಳಿಗೆ ಬಲಿಯಾಗದೆ, ‘ನೋ’ ಹೇಳುವ ಧೈರ್ಯ ಬೆಳೆಸಿಕೊಂಡು ಯುವಜನತೆ ಮಾದಕ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕುಂದಾಪುರದ ಗೌರವಾನ್ವಿತ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರಾದ ಅಬ್ದುಲ್ ರಹೀಮ್ ಹುಸೇನ್ ಶೇಖ್ ಕರೆ ನೀಡಿದರು. ಅವರು ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಪೊಲೀಸ್, ತಾಲೂಕು […]
ಜು.31 ರಿಂದ ಆ.2 ವರೆಗೆ “ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಸ್ವದೇಶಿ ಖಾದ್ಯ ಮೇಳ

ಉಡುಪಿ: “ಸ್ವದೇಶಿ ಉತ್ಪನ್ನಗಳನ್ನು ಬೆಂಬಲಿಸಿ – ಸ್ಥಳೀಯ ಉದ್ಯಮಿಗಳನ್ನು ಪ್ರೋತ್ಸಾಹಿಸಿ” ಎಂಬ ಧ್ಯೇಯದೊಂದಿಗೆ ಜು.31 ರಿಂದ ಆ.2 ವರೆಗೆ “ಸ್ವದೇಶಿ ಖಾದ್ಯ ಮೇಳ ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿನಡೆಯಲಿದೆ. ಸಮಾಜ ಸೇವಕ, ಕಾಂಗ್ರೆಸ್ ಮುಖಂಡ, ಅನೇಕ ದೈವ-ದೇವಸ್ಥಾನಗಳ ಜೀರ್ಣೋದ್ಧಾರದ ರೂವಾರಿಗಳೂ, ಕನ್ನರ್ಪಾಡಿ ಜಯದುರ್ಗ ಪರಮೇಶ್ವರಿ ದೇವಸ್ಥಾನದ ನಿಕಟಪೂರ್ವ ಅಧ್ಯಕ್ಷರಾದ ಕೆ.ಕೃಷ್ಣಮೂರ್ತಿ ಆಚಾರ್ಯ ಅವರ ಸಾರಥ್ಯದಲ್ಲಿ ಅದ್ದೂರಿ ಕಾರ್ಯಕ್ರಮ ನಡೆಯಲಿದೆ. ಮೇಳದಲ್ಲಿ ಏನೇನಿರುತ್ತೆ… ಪ್ರತೀ ದಿನ ಬೆಳಿಗ್ಗೆ 10ರಿಂದ ರಾತ್ರಿ 10 ಗಂಟೆಯವರೆಗೆ ನಡೆಯಲಿರುವ ಈ ಖಾದ್ಯ […]