ಬಂಟಕಲ್ ಬಳಿ ಥಾರ್ ಕಾರು ಚರಂಡಿಗೆ ಉರುಳಿ: ನಾಲ್ವರಿಗೆ ಗಾಯ

ಉಡುಪಿ: ಮಹೀಂದ್ರಾ ಥಾರ್ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಉರುಳಿ ಬಿದ್ದ ಪರಿಣಾಮ ಚಾಲಕ ಸೇರಿದಂತೆ ನಾಲ್ವರು ಗಾಯಗೊಂಡ ಘಟನೆ ಶಿರ್ವ–ಕಟಪಾಡಿ ರಾಜ್ಯ ಹೆದ್ದಾರಿಯ ಬಂಟಕಲ್ ಸಮೀಪದ ಬಿ.ಸಿ. ರಸ್ತೆ ಬಳಿ ನಡೆದಿದೆ. ಗಾಯಾಳುಗಳನ್ನು ಚಾಲಕ ಶಿರ್ವ ನಿವಾಸಿ ಬಾಲಕೃಷ್ಣ (21), ಇಬ್ಬರು ಯುವತಿಯರು ಹಾಗೂ ಮತ್ತೋರ್ವ ಸಹ ಪ್ರಯಾಣಿಕ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ನಾಲ್ವರೂ ಗಾಯಗೊಂಡಿದ್ದು, ಅವರಲ್ಲಿ ಮೂವರಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದುಬಂದಿದೆ. ಸ್ಥಳೀಯರು ತಕ್ಷಣ ಗಾಯಾಳುಗಳನ್ನು ರಕ್ಷಿಸಿ ಉಡುಪಿಯ ಖಾಸಗಿ […]
ಶೃಂಗೇರಿ, ಕುದುರೆಮುಖ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಸರಣಿ ಅಪಘಾತ

ಕಾರ್ಕಳ: ಕಾರ್ಕಳದಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಮಾರ್ಗವಾಗಿ ಸಾಗುವ ರಸ್ತೆ, ರಾಷ್ಟ್ರೀಯ ಹೆದ್ದಾರಿ 169 (NH 169). ಇದು ಮಂಗಳೂರಿನಿಂದ ಕಾರ್ಕಳ, ಬಜಗೋಳಿ, ಮಾಳ ಘಾಟ್, ಎಸ್.ಕೆ. ಬಾರ್ಡರ್ ಹಾಗೂ ಕೆರೆಕಟ್ಟೆ ಮಾರ್ಗವಾಗಿ ಶೃಂಗೇರಿ ಮತ್ತು ಶಿವಮೊಗ್ಗವನ್ನು ಸಂಪರ್ಕಿಸುತ್ತದೆ. ಅಲ್ಲದೇ ಕುದುರೆಮುಖ, ಕಳಸ, ಹೊರನಾಡಿಗೂ ಸಂಪರ್ಕ ಕೊಂಡಿಯಾಗಿದೆ. ಮಾಳ ಚೆಕ್ ಪೋಸ್ಟ್ ದಾಟಿದ ನಂತರ ಒಂದು ವಾಹನದ ಆಯಿಲ್ ಲೀಕೇಜ್ ಹೆಚ್ಚಿನ ಪ್ರಮಾಣದಲ್ಲಿ ಆಗಿರುವ ಕಾರಣ ಇಂದು ಬೆಳಗ್ಗೆ ನಿಯಂತ್ರಣ ತಪ್ಪಿ ಸರಣಿ ಅಪಘಾತವಾಗಿದೆ.
ವಂದೇ ಮಾತರಂ ಗೀತೆಗೆ ಅವಮಾನ ಮಾಡಿದ್ರೆ 3 ವರ್ಷ ಜೈಲು, ಮಂಡನೆಗೆ ಸಿದ್ದವಾಗಿರುವ ಮಸೂದೆಯಲ್ಲಿ ನಿಜಕ್ಕೂ ಏನಿದೆ?

ನವದೆಹಲಿ: ಇಂದಿನಿಂದ (ಜುಲೈ 20) ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭವಾಗಲಿದ್ದು, ಆಗಸ್ಟ್ 13ರವರೆಗೆ ನಡೆಯಲಿದೆ. ಮೊದಲ ದಿನದಿಂದಲೇ ವಿರೋಧ ಪಕ್ಷಗಳು ಹಲವು ವಿಷಯಗಳಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಜ್ಜಾಗಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರ ‘ವಂದೇ ಮಾತರಂ’ಗೆ ಕಾನೂನು ರಕ್ಷಣೆ ನೀಡುವ ಉದ್ದೇಶದ ಮಹತ್ವದ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲು ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ, 1971ಕ್ಕೆ ತಿದ್ದುಪಡಿ ತರಲು ಉದ್ದೇಶಿಸಿದ್ದು, ಪ್ರಸ್ತುತ ರಾಷ್ಟ್ರಗೀತೆ **’ಜನ ಗಣ ಮನ’**ಗೆ ಇರುವ […]
ಸಮಯ ಪ್ರಜ್ಞೆಯಿಂದ ಮೂವರನ್ನು ರಕ್ಷಿಸಿದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್: ಎಲ್ಲೆಡೆ ಪ್ರಶಂಸೆ

ಬಂಟ್ವಾಳ: ಸೂರಿಕುಮೇರ್ ಪೆಟ್ರೋಲ್ ಬಂಕ್ ಬಳಿ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಉರುಳಿದಾಗ, ವಿಟ್ಲ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರಾಮಕೃಷ್ಣ ಮತ್ತು ಅವರ ಸಿಬ್ಬಂದಿ ಒಂದು ಮಗು ಸೇರಿದಂತೆ ಮೂವರನ್ನು ರಕ್ಷಿಸಿದ್ದಾರೆ. ಅಪಘಾತದ ನಂತರ ಕಾರಿನಲ್ಲಿ ಮಗು, ಮಹಿಳೆ ಮತ್ತು ಚಾಲಕ ವಾಹನದೊಳಗೆ ಸಿಲುಕಿಕೊಂಡಿದ್ದರು. ಎಸ್‌ಐ ರಾಮಕೃಷ್ಣ ಅವರು ಸಮಯಪ್ರಜ್ಞೆ ಮತ್ತು ಧೈರ್ಯ ಪ್ರದರ್ಶಿಸಿ ಅಳುತ್ತಿದ್ದ ಪುಟ್ಟ ಮಗುವನ್ನು ತಮ್ಮ ಕೈಯಲ್ಲಿ ಎತ್ತಿಕೊಂಡು ಸುರಕ್ಷಿತ ಸ್ಥಳಕ್ಕೆ ಕರೆತಂದ ದೃಶ್ಯ ಸಮೀಪದ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, […]
ಪರ್ಕಳದಲ್ಲಿ ಮತ್ತೆ ಗೋವುಗಳಿಗೆ ಚರ್ಮ ಗಂಟು ರೋಗದ ಭೀತಿ; ಮುನ್ನೆಚ್ಚರಿಕೆ ಕ್ರಮಕ್ಕೆ ಒತ್ತಾಯ

ಉಡುಪಿ: ಪರ್ಕಳದಲ್ಲಿ ಮತ್ತೆ ಬೀಡಾಡಿ ಗೋವುಗಳಲ್ಲಿ ಚರ್ಮ ಗಂಟು ರೋಗ (Lumpy Skin Disease) ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಪರ್ಕಳದ ನಿವಾಸಿ ಕೆ.ಆರ್. ಅಶೋಕ್ ಅವರು ತಮ್ಮ ನಿವಾಸದ ಬಳಿ ಪ್ರತಿದಿನ ಬೀಡಾಡಿ ಗೋವುಗಳಿಗೆ ಉಚಿತವಾಗಿ ಆಹಾರ ನೀಡುತ್ತಿದ್ದಾರೆ. ನಿತ್ಯ ಬರುವ ಗೋವುಗಳ ಪೈಕಿ ಒಂದಕ್ಕೆ ಚರ್ಮ ಗಂಟು ರೋಗದ ಲಕ್ಷಣಗಳು ಕಂಡುಬಂದಿದ್ದು, ದೇಹದ ಮೇಲಿನ ಗಾಯಗಳು ಉಲ್ಬಣಗೊಂಡಿರುವುದು ಗಮನಕ್ಕೆ ಬಂದಿದೆ. ಗೋವಿನ ಸ್ಥಿತಿ ಕಂಡು ಕೆ.ಆರ್. ಅಶೋಕ್ ಅವರು ಸ್ವತಃ ಆರೈಕೆ […]