ಮಣಿಪಾಲದಲ್ಲಿ ಜುಲೈ: 11 ರಂದು ‘Master Canva with AI’ ವಿಶೇಷ ಕಾರ್ಯಾಗಾರ: ಭಾಗವಹಿಸಿ Ai ನಲ್ಲಿ ಮಾಸ್ಟರ್ ಗಳಾಗಿ

ಮಣಿಪಾಲ: ಡಿಜಿಟಲ್ ವಿನ್ಯಾಸ, ಕೃತಕ ಬುದ್ಧಿಮತ್ತೆ (AI), ಬ್ರ್ಯಾಂಡಿಂಗ್ ಹಾಗೂ ಕಂಟೆಂಟ್ ಸ್ಟ್ರಾಟಜಿ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು, ವಿನ್ಯಾಸಕರು, ಫ್ರೀಲಾನ್ಸರ್‌ಗಳು ಮತ್ತು ಉದ್ಯಮಿಗಳಿಗಾಗಿ ಮಣಿಪಾಲ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (MSDC) ವತಿಯಿಂದ “Master Canva with AI, Branding & Content Strategy” ಎಂಬ ಒಂದು ದಿನದ ಉನ್ನತ ಮಟ್ಟದ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಜುಲೈ 11, 2026ರ ಶನಿವಾರ ಬೆಳಿಗ್ಗೆ 10ರಿಂದ ಸಂಜೆ 4.30ರವರೆಗೆ ಮಣಿಪಾಲದ ಡಾ. ಟಿ.ಎಂ.ಎ. ಪೈ ಪಾಲಿಟೆಕ್ನಿಕ್‌ನ 3ನೇ ಮಹಡಿಯಲ್ಲಿರುವ School […]
ಉಡುಪಿ: ಟೈಮಿಂಗ್ಸ್ ವಿಚಾರದಲ್ಲಿ ಸಿಟಿ ಬಸ್ ಚಾಲಕರ ನಡುವೆ ವಾಗ್ವಾದ- ಸಿನಿಮೀಯ ರೀತಿಯಲ್ಲಿ ಎರಡೆರಡು ಬಾರಿ ಬಸ್ ಗೆ ಡಿಕ್ಕಿ ಹೊಡೆದು ಹುಚ್ಚಾಟ ಮೆರೆದ ಸಿಟಿ ಬಸ್ ಚಾಲಕ!

ಉಡುಪಿ: ಟೈಮಿಂಗ್ ವಿಚಾರದಲ್ಲಿ ಎರಡು ಸಿಟಿ ಬಸ್ ಚಾಲಕರ ನಡುವೆಯೇ ವಾಗ್ವಾದ ನಡೆದು ಬಳಿಕ ಸಿನಿಮೀಯ ರೀತಿಯಲ್ಲಿ ಬಸ್ಸುಗಳನ್ನು ಡಿಕ್ಕಿ ಹೊಡೆಸಿಕೊಂಡು ಹುಚ್ಚಾಟ ಮೆರೆದ ಘಟನೆ ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ಶನಿವಾರ ರಾತ್ರಿ ಸಂಭವಿಸಿದೆ. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಟಿಎಂಟಿ ಬಸ್ ನಿಂತಿದ್ದ ವೇಳೆ, ಪಿಎಂಟಿ ಬಸ್ ಅಡ್ಡವಾಗಿ ಬಂದು ನಿಂತಿದೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಟಿಎಂಟಿ ಬಸ್ ಚಾಲಕ, ತನ್ನ ಬಸ್‌ನಿಂದ ಪಿಎಂಟಿ ಬಸ್‌ಗೆ ಉದ್ದೇಶಪೂರ್ವಕವಾಗಿ ಎರಡು ಬಾರಿ ಡಿಕ್ಕಿ ಹೊಡೆದಿದ್ದಾನೆ ಎಂದು […]
ನಿಮ್ಮ ಮನೆಯಲ್ಲಿರಲಿ ಈ ಒಂದು ಪವರ್ ಫುಲ್ ಗಿಡ: ಮಧುಮೇಹಕ್ಕೆ ಮಾತ್ರವಲ್ಲ, ಹಲವು ಆರೋಗ್ಯ ಸಮಸ್ಯೆಗಳಿಗೂ ಈ ಗಿಡ ರಾಮಬಾಣ!

ಇತ್ತೀಚಿನ ದಿನಗಳಲ್ಲಿ ಮಧುಮೇಹ (ಡಯಾಬಿಟಿಸ್) ವಯಸ್ಸಿನ ಭೇದವಿಲ್ಲದೆ ಹೆಚ್ಚಾಗುತ್ತಿರುವ ಆರೋಗ್ಯ ಸಮಸ್ಯೆಯಾಗಿದೆ. ಮುಖ್ಯವಾಗಿ ಮಧುಮೇಹವನ್ನು ನಿಯಂತ್ರಣದಲ್ಲಿಡಲು ಈ ಒಂದು ಗಿಡ ನಿಮಗೆ ತುಂಬಾ ಸಹಕಾರಿ. ಈ ಗಿಡದ ಹೆಸರೇ “ಇನ್ಸುಲಿನ್ ಗಿಡ” ಅಥವಾ “ಸಕ್ಕರೆ ಗಿಡ” (Costus igneus) ಬನ್ನಿ ಇದರ ಕುರಿತು ತಿಳಿದುಕೊಳ್ಳೋಣ. ಇನ್ಸುಲಿನ್ ಗಿಡ: ಇನ್ಸುಲಿನ್ ಗಿಡ (Costus igneus) ಒಂದು ಔಷಧೀಯ ಸಸ್ಯವಾಗಿದೆ. ಇದರ ಎಲೆಗಳು ಅಗಲವಾದ ತಿಳಿ ಹಸಿರು ಬಣ್ಣದಲ್ಲಿದ್ದು, ಸಣ್ಣ ಕೆಂಪು ಅಥವಾ ಕಿತ್ತಳೆ ಬಣ್ಣದ ಹೂವುಗಳನ್ನು ಬಿಡುತ್ತದೆ. ಆಯುರ್ವೇದ […]
ಬಾಕ್ಸ್ ಆಫೀಸ್ ನಲ್ಲಿ ‘ಆಲ್ಫಾ’ ಸಖತ್ ಕಮಾಲ್, ₹17.42 ಕೋಟಿ ಗಳಿಸಿ ದಾಖಲೆ ಬರೆದ ಆಲಿಯಾ ಭಟ್ ಅಭಿನಯದ ಈ ಆಕ್ಷನ್ ಚಿತ್ರ

ಬಾಲಿವುಡ್ ನಟಿಯರಾದ ಆಲಿಯಾ ಭಟ್ ಮತ್ತು ಶಾರ್ವರಿ ಅಭಿನಯದ ಬಹುನಿರೀಕ್ಷಿತ ‘ಆಲ್ಫಾ’ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಆರಂಭ ಕಂಡಿದೆ. ಶುಕ್ರವಾರ ತೆರೆಕಂಡ ಈ ಆಕ್ಷನ್ ಥ್ರಿಲ್ಲರ್ ಚಿತ್ರವು ಜಾಗತಿಕ ಮಟ್ಟದಲ್ಲಿ ₹17.42 ಕೋಟಿ ಗಳಿಕೆ ದಾಖಲಿಸಿದೆ. ಚಿತ್ರದ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲ್ಮ್ಸ್ (YRF) ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮೊದಲ ದಿನದ ಕಲೆಕ್ಷನ್ ವಿವರಗಳನ್ನು ಹಂಚಿಕೊಂಡಿದ್ದು, “ಆಲ್ಫಾ ವಿಶ್ವದಾದ್ಯಂತ ಪ್ರೇಕ್ಷಕರ ಹೃದಯ ಗೆಲ್ಲುತ್ತಿದೆ. ಮೊದಲ ದಿನವೇ ₹17.42 ಕೋಟಿ […]
ಜಮ್ಮು ಮತ್ತು ಕಾಶ್ಮೀರ: ಹಣ್ಣಿನ ತೋಟದಲ್ಲಿ ಅಡಗಿರುವ ಲಷ್ಕರ್-ಎ-ತೊಯ್ಬಾ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಭೀಕರ ಗುಂಡಿನ ಚಕಮಕಿ

ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಮೀಮಂದಾರ್–ಸೈದ್ಪೋರಾ ಪ್ರದೇಶದ ದಟ್ಟ ಹಣ್ಣಿನ ತೋಟದಲ್ಲಿ ಅಡಗಿರುವ ಇಬ್ಬರು ಲಷ್ಕರ್-ಎ-ತೊಯ್ಬಾ (LeT) ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಭೀಕರ ಗುಂಡಿನ ಚಕಮಕಿ ಮುಂದುವರಿದಿದೆ. ಭಾರತೀಯ ಸೇನೆ, ಜಮ್ಮು-ಕಾಶ್ಮೀರ ಪೊಲೀಸ್ ಹಾಗೂ ಸಿಆರ್‌ಪಿಎಫ್ ಜಂಟಿಯಾಗಿ ಬೃಹತ್ ಕಾರ್ಯಾಚರಣೆ ನಡೆಸುತ್ತಿದ್ದು, ಉಗ್ರರು ತಪ್ಪಿಸಿಕೊಳ್ಳದಂತೆ ಇಡೀ ಪ್ರದೇಶವನ್ನು ಸುತ್ತುವರಿದಿವೆ. ದಟ್ಟ ತೋಟವನ್ನು ಸಂಪೂರ್ಣವಾಗಿ ಮುತ್ತಿಗೆ ಹಾಕಿರುವ ಪಡೆಗಳು ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ. ಭದ್ರತಾ ಪಡೆಗಳ ಬಲೆಗೆ ಸಿಲುಕಿರುವ ಉಗ್ರರನ್ನು ದಕ್ಷಿಣ ಕಾಶ್ಮೀರದ ಕುಲ್ಗಾಮ್ ಮೂಲದ […]