ಇತ್ತೀಚಿನ ದಿನಗಳಲ್ಲಿ ಮಧುಮೇಹ (ಡಯಾಬಿಟಿಸ್) ವಯಸ್ಸಿನ ಭೇದವಿಲ್ಲದೆ ಹೆಚ್ಚಾಗುತ್ತಿರುವ ಆರೋಗ್ಯ ಸಮಸ್ಯೆಯಾಗಿದೆ. ಮುಖ್ಯವಾಗಿ ಮಧುಮೇಹವನ್ನು ನಿಯಂತ್ರಣದಲ್ಲಿಡಲು ಈ ಒಂದು ಗಿಡ ನಿಮಗೆ ತುಂಬಾ ಸಹಕಾರಿ. ಈ ಗಿಡದ ಹೆಸರೇ “ಇನ್ಸುಲಿನ್ ಗಿಡ” ಅಥವಾ “ಸಕ್ಕರೆ ಗಿಡ” (Costus igneus) ಬನ್ನಿ ಇದರ ಕುರಿತು ತಿಳಿದುಕೊಳ್ಳೋಣ.
ಇನ್ಸುಲಿನ್ ಗಿಡ:
ಇನ್ಸುಲಿನ್ ಗಿಡ (Costus igneus) ಒಂದು ಔಷಧೀಯ ಸಸ್ಯವಾಗಿದೆ. ಇದರ ಎಲೆಗಳು ಅಗಲವಾದ ತಿಳಿ ಹಸಿರು ಬಣ್ಣದಲ್ಲಿದ್ದು, ಸಣ್ಣ ಕೆಂಪು ಅಥವಾ ಕಿತ್ತಳೆ ಬಣ್ಣದ ಹೂವುಗಳನ್ನು ಬಿಡುತ್ತದೆ. ಆಯುರ್ವೇದ ಮತ್ತು ಜನಪದ ಚಿಕಿತ್ಸೆಯಲ್ಲಿ ಈ ಗಿಡವನ್ನು ಹಲವು ವರ್ಷಗಳಿಂದ ಬಳಸಲಾಗುತ್ತಿದೆ.
ಕೆಲವು ಪ್ರಾಥಮಿಕ ಅಧ್ಯಯನಗಳು ಮತ್ತು ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳ ಪ್ರಕಾರ, ಈ ಗಿಡದ ಎಲೆಗಳಲ್ಲಿರುವ ಉತ್ಕರ್ಷಣ ನಿರೋಧಕಗಳು (ಆಂಟಿ-ಆಕ್ಸಿಡೆಂಟ್‌ಗಳು), ಫ್ಲೇವನಾಯ್ಡ್‌ಗಳು ಮತ್ತು ಇತರ ಸಸ್ಯಜನ್ಯ ಸಂಯುಕ್ತಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತೆ ಎನ್ನುವುದು ಸಾಬೀತಾಗಿದೆ.
ಈ ಗಿಡಿ ಸಣ್ಣ ಗಿಡವಾಗಿ ಬೆಳೆಯುತ್ತದೆ. ಎಲೆಗಳು ಅಗಲವಾಗಿ ತಿಳಿ ಹಸಿರು ಬಣ್ಣದಲ್ಲಿರುತ್ತವೆ. ಸಣ್ಣ ಕೆಂಪು ಹೂವುಗಳು ಅರಳುತ್ತವೆ. ಇದನ್ನು ಇನ್ಸುಲಿನ್ ಪ್ಲಾಂಟ್ ಎಂದು ಕರೆಯುವುದಕ್ಕೆ ಕಾರಣ, ಇದರ ಎಲೆಗಳು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತವೆ. ಹಾಗಾಗಿ ಶುಗರ್ ಕಾಯಿಲೆ ಸಮಸ್ಯೆಯಿಂದ ಬಳಲುತ್ತಿರುವವರು ದಿನಕ್ಕೆ 2 ಎಲೆಗಳನ್ನು ಅಗಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ ಎಂದು ವೈದ್ಯರು ಸಲಹೆ ನೀಡುತ್ತಾರೆ.

ಈ ಗಿಡದಲ್ಲಿ ಇರುವ ಪೋಷಕಾಂಶಗಳು
- ಆಂಟಿ-ಆಕ್ಸಿಡೆಂಟ್‌ಗಳು
- ಫೈಬರ್
- ಫ್ಲೇವನಾಯ್ಡ್‌ಗಳು
- ಕಬ್ಬಿಣ
- ಕ್ಯಾಲ್ಸಿಯಂ
- ಪೊಟ್ಯಾಷಿಯಂ
- ರಂಜಕ
- ಪ್ರೋಟೀನ್
- ವಿಟಮಿನ್ C, E ಮತ್ತು K ಈ ಎಲ್ಲಾ ಗುಣಗಳು ನಿಮ್ಮ ಮಧುವೇಹವನ್ನು ನಿಯಂತ್ರಿಸುತ್ತದೆ.
ಇನ್ಸುಲಿನ್ ಗಿಡದ ಎಲೆಗಳಲ್ಲಿ ಅಗತ್ಯವಿರುವ ಎಲ್ಲಾ ಉತ್ಕರ್ಷಣ ನಿರೋಧಕಗಳು (ಆಂಟಿ-ಆಕ್ಸಿಡೆಂಟ್‌ಗಳು), ಫೈಬರ್ ಮತ್ತು ಫೈಟೋಕೆಮಿಕಲ್‌ಗಳು ಇವೆ. ಇದಲ್ಲದೆ ಕಬ್ಬಿಣ, ಕ್ಯಾಲ್ಸಿಯಂ, ಪ್ರೋಟೀನ್, ಪೊಟ್ಯಾಷಿಯಂ ಮತ್ತು ರಂಜಕ ಸಿಗುತ್ತವೆ. ವಿಟಮಿನ್ ಸಿ, ಇ ಮತ್ತು ಕೆ ಯೂ ಸಿಗುತ್ತವೆ. ಅಲರ್ಜಿ, ಕೆಮ್ಮು ಮತ್ತು ಮಲಬದ್ಧತೆಯಂತಹ ಸಮಸ್ಯೆಗಳಲ್ಲೂ ಈ ಎಲೆಗಳು ಬಹಳ ಪ್ರಯೋಜನಕಾರಿ. ಈ ಎಲೆಗಳಲ್ಲಿ ಟ್ರೈಟರ್ಪೆನಾಯ್ಡ್, ಸಪೋನಿನ್, ಫ್ಲೇವೊನಾಲ್ ಮತ್ತು ಗೌರ್ಮರಿನ್ ಮುಂತಾದ ಉಪಯುಕ್ತ ಅಂಶಗಳಿವೆ.
ಇನ್ಸುಲಿನ್ ಬಳಸುತ್ತಿರುವವರು ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 2 ಎಲೆಗಳನ್ನು ಮತ್ತು ರಾತ್ರಿ ಮಲಗುವ ಮುನ್ನ 2 ಎಲೆಗಳನ್ನು ತಿನ್ನಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ. ಮಧುಮೇಹ ಮಾತ್ರವಲ್ಲ, ಈ ಎಲೆಗಳನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವೂ ನಿಯಂತ್ರಣದಲ್ಲಿರುತ್ತದೆ. ಮೂತ್ರಪಿಂಡ ಮತ್ತು ಯಕೃತ್ತು ಆರೋಗ್ಯಕರವಾಗಿರುತ್ತವೆ.

















