ಉಡುಪಿ: ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಲಿ.: 2025-26 ನೇ ಸಾಲಿನಲ್ಲಿ 26.72 ಕೋಟಿ ಲಾಭ: ಯಶ್ ಪಾಲ್ ಸುವರ್ಣ

ಕರಾವಳಿ ಭಾಗದ ಪ್ರತಿಷ್ಠಿತ ಪಟ್ಟಣ ಸಹಕಾರಿ ಸಂಸ್ಥೆಗಳಲ್ಲಿ ಒಂದಾದ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ 2025-26ನೇ ಸಾಲಿನಲ್ಲಿ ರೂ. 1212 ಕೋಟಿ ವ್ಯವಹಾರ ನಡೆಸಿ ರೂ. 26.72 ಕೋಟಿ ಲಾಭ ದಾಖಲಿಸಿರುವುದಾಗಿ ಬ್ಯಾಂಕಿನ ಅಧ್ಯಕ್ಷರಾದ ಉಡುಪಿ ಶಾಸಕ ಶ್ರೀ ಯಶ್ಪಾಲ್ ಎ ಸುವರ್ಣ ತಿಳಿಸಿದ್ದಾರೆ. ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಸಹಕಾರಿ ಇಲಾಖೆ ಹಾಗೂ ಭಾರತೀಯ ರಿಸರ್ವ್ ಬ್ಯಾಂಕಿನ ಪರಿವೀಕ್ಷಣೆಗೆ ಒಳಪಟ್ಟು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ಶಾಖೆಗಳ ಮೂಲಕ ವ್ಯವಹಾರ ನಡೆಸುತ್ತಿದ್ದು 50,000 ಗ್ರಾಹಕರನ್ನು […]
ಹೆಮ್ಮಾಡಿಯ ಸಂತೋಷನಗರದಲ್ಲಿ ಜು. 4-5ರಂದು ಶ್ರೀ ಕಾಸನಾಡಿ ಬೊಬ್ಬರ್ಯ ದೈವಸ್ಥಾನದ 8ನೇ ವರ್ಷದ ವರ್ಧಂತ್ಯೋತ್ಸವ

ಹೆಮ್ಮಾಡಿ: ಸಾರ್ವಜನಿಕ ಶ್ರೀ ಕಾಸನಾಡಿ ಬೊಬ್ಬರ್ಯ ಮತ್ತು ಶ್ರೀ ಪರಿವಾರ ದೈವಸ್ಥಾನ, ಸಂತೋಷನಗರದಲ್ಲಿ ಜುಲೈ 4 ಹಾಗೂ 5ರಂದು ಶ್ರೀ ಕಾಸನಾಡಿ ಬೊಬ್ಬರ್ಯ ಮತ್ತು ಶ್ರೀ ಪರಿವಾರ ದೈವಗಳ 8ನೇ ವರ್ಷದ ವರ್ಧಂತ್ಯೋತ್ಸವ ಭಕ್ತಿಭಾವದಿಂದ ನಡೆಯಲಿದೆ. ಜುಲೈ 4ರಂದು ಸಂಜೆ 6 ಗಂಟೆಯಿಂದ ಹೋಮ-ಹವನ, ಹಣ್ಣುಕಾಯಿ, ಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಲಿವೆ. ಜುಲೈ 5ರಂದು ಬೆಳಿಗ್ಗೆ 10 ಗಂಟೆಯಿಂದ ಹಣ್ಣುಕಾಯಿ, ಮಹಾಮಂಗಳಾರತಿ ಸೇವೆ ನೆರವೇರಲಿದ್ದು, ಬಳಿಕ ಮಧ್ಯಾಹ್ನ ಅನ್ನಸಂತರ್ಪಣೆ ಆಯೋಜಿಸಲಾಗಿದೆ. ಅನ್ನದಾನದ ಸೇವೆಯನ್ನು […]
ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಕಾರ್ಯಕ್ರಮ

ಉಡುಪಿ: ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ ಖಾದರ್ ಫರೀದ್ ಅವರು ಜುಲೈ 4 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಅಂದು ಸಂಜೆ 4.30 ಕ್ಕೆ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ, ನಂತರ ಮಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.
ದರ್ಶನ್ ಗೆ ಇನ್ನೊಂದು ವರ್ಷ ಜೈಲೇ ಗತಿ: ಸುಪ್ರೀಂ ಕೋರ್ಟ್‌ನಲ್ಲಿ ಭಾರೀ ಮುಖಭಂಗ; ಜಾಮೀನು ಅರ್ಜಿ ತಿದ್ದುಪಡಿ ಮನವಿ ತಿರಸ್ಕಾರ

ನವದೆಹಲಿ: ದರ್ಶನ್ ಗೆ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನಲ್ಲಿ ಮತ್ತೊಮ್ಮೆ ಹಿನ್ನಡೆಯಾಗಿದೆ. ಒಂದು ವರ್ಷದೊಳಗೆ ಜಾಮೀನು ಅರ್ಜಿ ಸಲ್ಲಿಸಲು ಅವಕಾಶ ನೀಡುವಂತೆ ಹಿಂದಿನ ಆದೇಶದಲ್ಲಿ ತಿದ್ದುಪಡಿ ಕೋರಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ತಿರಸ್ಕರಿಸಿದ್ದಾರೆ. ದರ್ಶನ್ ಪರವಾಗಿ ತುರ್ತು ಪರಿಸ್ಥಿತಿಗಳಲ್ಲಿ ಜಾಮೀನು ಕೋರುವ ಅವಕಾಶ ನೀಡುವಂತೆ ಮನವಿ ಮಾಡಲಾಗಿತ್ತು. ಆದರೆ, ಈ ಅರ್ಜಿ ವಿಚಾರಣೆಗೆ ಅರ್ಹವಲ್ಲ ಎಂದು ತಿಳಿಸಿ, ಅದನ್ನು ಪಟ್ಟಿಗೆ ಸೇರಿಸಲು ಸಾಧ್ಯವಿಲ್ಲವೆಂದು ರಿಜಿಸ್ಟ್ರಾರ್ ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ಮೇ 15ರಂದು […]
ಪತ್ನಿಯ ಕಾಲು ನೋವಿನ ಪರಿಹಾರಕ್ಕೆ ಮನೆಯಲ್ಲಿಯೇ ಎಸ್ಕಲೇಟರ್ ನಿರ್ಮಿಸಿದ ರೈತ: ಈ ಮಾದರಿ ಪ್ರೀತಿಗೆ ನೆಟ್ಟಿಗರು ಸಖತ್ ಖುಷ್!

ಆಂದ್ರಪ್ರದೇಶ: ಪ್ರೀತಿಯನ್ನು ವ್ಯಕ್ತಪಡಿಸಲು ಭವ್ಯ ಸ್ಮಾರಕಗಳನ್ನು ನಿರ್ಮಿಸಬೇಕೆಂದಿಲ್ಲ. ಪ್ರೀತಿಸುವವರ ದೈನಂದಿನ ಕಷ್ಟವನ್ನು ಕಡಿಮೆ ಮಾಡುವ ಕಾಳಜಿಯೇ ನಿಜವಾದ ಪ್ರೀತಿಯ ಸಂಕೇತ ಎಂಬುದನ್ನು ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ 65 ವರ್ಷದ ರೈತ ಹಾಗೂ ಮೆಕಾನಿಕ್ ಸಟ್ಟಿ ಶಿವನಾರಾಯಣ ರೆಡ್ಡಿ ಸಾಬೀತುಪಡಿಸಿದ್ದಾರೆ. ರಾಜಮಹೇಂದ್ರವರಂನಿಂದ ಸುಮಾರು 35 ಕಿ.ಮೀ. ದೂರದಲ್ಲಿರುವ ಅರ್ಥಮೂರು ಗ್ರಾಮದ ನಿವಾಸಿಯಾದ ಶಿವನಾರಾಯಣ ರೆಡ್ಡಿ ಅವರ ಪತ್ನಿ ಸತ್ಯವೇಣಿ ಹಲವು ವರ್ಷಗಳಿಂದ ತೀವ್ರ ಮೊಣಕಾಲು ನೋವಿನಿಂದ ಬಳಲುತ್ತಿದ್ದರು. ಮನೆಯ ಮೊದಲ ಮಹಡಿಗೆ ತೆರಳಲು ಪ್ರತಿದಿನ 21 ಮೆಟ್ಟಿಲುಗಳನ್ನು […]