ಬ್ರಹ್ಮಾವರದಲ್ಲಿ ಅಪ್ರಾಪ್ತ ಬಾಲಕನ ಅಪಹರಣ ಪ್ರಕರಣ: ಇಬ್ಬರ ಬಂಧನ

ಉಡುಪಿ :ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕನ ಅಪಹರಣ, ಹಲ್ಲೆ ಹಾಗೂ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬ್ರಹ್ಮಾವರದ ಮಟಪಾಡಿ ಗ್ರಾಮದ ನಿವಾಸಿಯೊಬ್ಬರ ಅಪ್ರಾಪ್ತ ಪುತ್ರ ಬ್ರಹ್ಮಾವರ ಸರ್ಕಾರಿ ಬೋರ್ಡ್ ಹೈಸ್ಕೂಲ್‌ನಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಜೂನ್ 1ರಂದು ಬೆಳಿಗ್ಗೆ ಬ್ರಹ್ಮಾವರ ಬಸ್ ನಿಲ್ದಾಣದಿಂದ ಆರೋಪಿಗಳು ಬಾಲಕನನ್ನು ಅಪಹರಿಸಿ ಕೇರಳದ ತಲಪಾಡಿ ಸಮೀಪದ ಕುಂಜತ್ತೂರು ಪದವಿನಲ್ಲಿರುವ ವುಡ್ ಕಂಪೆನಿಗೆ ಬಲವಂತವಾಗಿ ಕರೆದೊಯ್ದು ಕೆಲಸಕ್ಕೆ ಸೇರಿಸಿದ್ದರೆಂದು ಆರೋಪಿಸಲಾಗಿದೆ. […]
ಇನ್ಶೂರೆನ್ಸ್ ಮತ್ತು ಫೈನಾಸಿಯಲ್ ಇಂಡಸ್ಟ್ರಿಯಲ್ ನಲ್ಲಿ ಅನುಭವಸ್ಥರಿಗೆ ಉದ್ಯೋಗಾವಕಾಶ

INSURANCE ADVISORS FINANCIAL PROFESSIONALS ಹುದ್ದೆಗೆ ನೇಮಕಾತಿ ನಡೆಯಲಿದೆ. ಇನ್ಶೂರೆನ್ಸ್ ಮತ್ತು ಫೈನಾಸಿಯಲ್ ಇಂಡಸ್ಟ್ರಿಯಲ್ ನಲ್ಲಿ ಅನುಭವಸ್ಥರಿಗೆ ಮೊದಲ ಆದ್ಯತೆ.ಆಸಕ್ತಿಯುಳ್ಳ ಅಭ್ಯರ್ಥಿಗಳು ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗಳಿಗೆ ಕೂಡಲೇ ಸಂಪರ್ಕಿಸಿ:ಮೊಬೈಲ್ : 8861238509 / 9113644500 APPLY HERE: https://forms.gle/DL5ZJvXqxPqWh8yg7
ವಿದ್ವತ್ ಪಿಯು ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ವತಿಯಿಂದ ಸಿಎ ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ

ನಿರಂತರ ಪ್ರಯತ್ನದಿಂದ ಭವಿಷ್ಯದಲ್ಲಿ ಯಶಸ್ಸು: ಸಿಎ ನಿರೀಕ್ಷಾ ನಾವರ ಬೆಳ್ತಂಗಡಿ: ಪರಿಶ್ರಮ ಹಾಗೂ ಪರಿವರ್ತನೆಯಿಂದ ನೀವು ಅಂದುಕೊಂಡ ಗುರಿ ನಿಮ್ಮೆಡೆಗೇ ಸಾಗಿ ಬರಬಹುದು. ಸಿಎ ಓದುವ ಹಂತದಲ್ಲಿ ನಿಖರ ಹಾಗೂ ನಿರಂತರ ಅಭ್ಯಾಸ ಬಹಳ ಮುಖ್ಯವಾಗಿದೆ. ಪಠ್ಯ ಅಧ್ಯಯನ, ಸೂಕ್ತ ಮಾರ್ಗದರ್ಶನ, ಅವೆಲ್ಲಕ್ಕಿಂತ ಮಿಗಿಲಾಗಿ ಸಂಶೋಧನಾತ್ಮಕ ಅಭ್ಯಾಸ ಅತ್ಯಗತ್ಯವಾಗಿದೆ ಎಂದು ಯುವ ಲೆಕ್ಕ ಪರಿಶೋಧಕಿ (ಸಿಎ) ನಿರೀಕ್ಷಾ ನಾವರ ಅಭಿಪ್ರಾಯ ಪಟ್ಟರು. ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ವತಿಯಿಂದ ಸಿಎ ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ […]
ಇನ್ನು ಹೊರ ರಾಜ್ಯಕ್ಕೆ ಹೋಗುವ ಅಗತ್ಯವಿಲ್ಲ! ಕೊಡಗಿನಲ್ಲಿ ₹45 ಕೋಟಿ ವೆಚ್ಚದ ರಾಷ್ಟ್ರಮಟ್ಟದ ಕ್ರೀಡಾ ತರಬೇತಿ ಕೇಂದ್ರ

ವಿರಾಜಪೇಟೆ: ಕ್ರೀಡೆಯ ತವರೂರು ಎಂದೇ ಹೆಸರಾಗಿರುವ ಕೊಡಗು ಜಿಲ್ಲೆಗೆ ಮತ್ತೊಂದು ಹೆಮ್ಮೆಯ ಗರಿ ಸೇರ್ಪಡೆಯಾಗುತ್ತಿದೆ. ವೀರಾಜಪೇಟೆ ತಾಲೂಕಿನ ವಿ. ಬಾಡಗ ಗ್ರಾಮದಲ್ಲಿ ಸುಮಾರು ₹45 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅತ್ಯಾಧುನಿಕ ಕ್ರೀಡಾ ವಸತಿ ಸಮುಚ್ಚಯ ಜಿಲ್ಲೆಯ ಕ್ರೀಡಾ ಕ್ಷೇತ್ರಕ್ಕೆ ಹೊಸ ಚೈತನ್ಯ ನೀಡುವ ನಿರೀಕ್ಷೆ ಮೂಡಿಸಿದೆ. ಸುಮಾರು 11.50 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಯೋಜನೆಗೆ ಆರಂಭಿಕ ಹಂತದಲ್ಲೇ ₹45 ಕೋಟಿ ಅನುದಾನ ಮೀಸಲಾಗಿದ್ದು, ಕಾಮಗಾರಿ ಭರದಿಂದ ಸಾಗುತ್ತಿದೆ. ಕ್ರೀಡಾಪಟುಗಳಿಗೆ ತರಬೇತಿ ಹಾಗೂ ವಸತಿ ಸೌಲಭ್ಯಗಳನ್ನು ಒಂದೇ […]
ಕ್ಯಾನ್ಸರ್ ಪತ್ತೆಗೆ ಹೊಸ ಕ್ರಾಂತಿ! ವಾಸನೆ ಹಿಡಿದು ರೋಗ ಗುರುತಿಸುತ್ತವೆ ಈ ಶ್ವಾನಗಳು

ಕ್ಯಾನ್ಸರ್ ಪತ್ತೆ ಮಾಡುವ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಆರಂಭವಾಗಿದೆ. ಮನೆಯ ಕಾವಲುಗಾರರೆಂದು ಪರಿಚಿತವಾಗಿರುವ ಶ್ವಾನಗಳು ಈಗ ಜೀವ ರಕ್ಷಿಸುವ ವೈದ್ಯರ ಪಾತ್ರವನ್ನು ನಿಭಾಯಿಸುತ್ತಿವೆ. ತಮ್ಮ ಅಸಾಧಾರಣ ವಾಸನೆ ಗ್ರಹಿಸುವ ಸಾಮರ್ಥ್ಯದ ಮೂಲಕ ಮನುಷ್ಯರಲ್ಲಿ ಕ್ಯಾನ್ಸರ್ ಇದೆಯೇ ಎಂಬುದನ್ನು ಪತ್ತೆ ಮಾಡುವಲ್ಲಿ ಅವು ಗಮನಾರ್ಹ ಯಶಸ್ಸು ಸಾಧಿಸಿವೆ. ಬೆಂಗಳೂರು ಮೂಲದ ಡಾಗ್ನೊಸಿಸ್ (Dognosis) ಸ್ಟಾರ್ಟ್‌ಅಪ್, ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ನೆರವಿನಿಂದ 16 ಶ್ವಾನಗಳಿಗೆ ವಿಶೇಷ ತರಬೇತಿ ನೀಡಿದೆ. ಈ ಶ್ವಾನಗಳು ಮನುಷ್ಯರ ಉಸಿರಾಟದಲ್ಲಿರುವ ವೋಲಟೈಲ್ ಆರ್ಗ್ಯಾನಿಕ್ […]