ಸ್ವಂತ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಿ ದಾಖಲೆ ಬರೆದ KKR : ಕ್ಯಾಲಿಫೋರ್ನಿಯಾದಲ್ಲಿ ನಿರ್ಮಾಣವಾಯ್ತು ಭರ್ಜರಿ ಸ್ಟೇಡಿಯಂ!

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ನೈಟ್ ರೈಡರ್ಸ್ ಗ್ರೂಪ್ (KRG) ಅಮೆರಿಕದ ಕ್ಯಾಲಿಫೋರ್ನಿಯಾದ ಪೊಮೋನಾದಲ್ಲಿ ತನ್ನದೇ ಆದ ನೈಟ್ ರೈಡರ್ಸ್ ಕ್ರಿಕೆಟ್ ಗ್ರೌಂಡ್ ಅನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ. ಈ ಮೈದಾನವು ಲಾಸ್ ಏಂಜಲೀಸ್ ನೈಟ್ ರೈಡರ್ಸ್ (LAKR) ತಂಡದ ತವರಿನ ಕ್ರೀಡಾಂಗಣವಾಗಿದ್ದು, ಅಮೆರಿಕದಲ್ಲಿ ಕ್ರಿಕೆಟ್ ಬೆಳವಣಿಗೆಗೆ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ. 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲು ಈ ಮೈದಾನ ಪ್ರಮುಖ ಕೇಂದ್ರಗಳಲ್ಲಿ ಒಂದಾಗುವ ಸಾಧ್ಯತೆಯಿದೆ. ಇದರಿಂದ ಅಮೆರಿಕದಲ್ಲಿ ಕ್ರಿಕೆಟ್‌ಗೆ ಇನ್ನಷ್ಟು ಉತ್ತೇಜನ […]
ಉಡುಪಿ: ಪ್ರೆಸ್ಟೀಜ್’ನಲ್ಲಿ ನಿಮಗಾಗಿ ಕಾದಿದೆ ಸೂಪರ್ ಎಕ್ಸ್‌ಚೇಂಜ್ ಮೇಳ; ಹಳೆಯ ಅಡುಗೆ ಪರಿಕರಗಳನ್ನು ಬದಲಾಯಿಸಿ ಹೊಸತನ್ನು ಮನೆಗೆ ತನ್ನಿ, ಜುಲೈ.15 ತನಕ ಮಾತ್ರ ಈ ಆಫರ್!

ಉಡುಪಿ: ಅಡುಗೆಮನೆಯನ್ನು ಹೊಸ ರೂಪದಲ್ಲಿ ಸಜ್ಜುಗೊಳಿಸಲು ಬಯಸುವ ಗ್ರಾಹಕರಿಗಾಗಿ ಪ್ರೆಸ್ಟೀಜ್ ವಿಶೇಷ ಎಕ್ಸ್‌ಚೇಂಜ್ ಮೇಳವನ್ನು ಜುಲೈ 15 ರವರೆಗೆ ಆಯೋಜಿಸಿದೆ. ನಿಮ್ಮ ಮನೆಯಲ್ಲಿ ಬಳಕೆಯಲ್ಲಿರುವ ಹಳೆಯ ಕುಕ್ಕರ್, ಕುಕ್ವೇರ್, ಗ್ಯಾಸ್ ಸ್ಟೋವ್, ಮಿಕ್ಸರ್ ಗ್ರೈಂಡರ್ ಸೇರಿದಂತೆ ಯಾವುದೇ ಅಡುಗೆ ಪರಿಕರಗಳನ್ನು ನೀಡಿ, ಹೊಸ ಪ್ರೆಸ್ಟೀಜ್ ಉತ್ಪನ್ನಗಳನ್ನು ಆಕರ್ಷಕ ರಿಯಾಯಿತಿಯಲ್ಲಿ ಖರೀದಿಸುವ ಅವಕಾಶವನ್ನು ಕಲ್ಪಿಸಲಾಗಿದೆ. ಉಡುಪಿ ಬನ್ನಂಜೆಯಲ್ಲಿರುವ ಪ್ರೆಸ್ಟೀಜ್ ಎಕ್ಸ್‌ಕ್ಲೂಸಿವ್ ಮಳಿಗೆಯಲ್ಲಿ ನಡೆಯುತ್ತಿರುವ ಈ ಮೇಳದಲ್ಲಿ ಹಲವು ಜನಪ್ರಿಯ ಉತ್ಪನ್ನಗಳ ಮೇಲೆ ವಿಶೇಷ ರಿಯಾಯಿತಿಗಳನ್ನು ಘೋಷಿಸಲಾಗಿದೆ. ಗ್ಯಾಸ್ ಸ್ಟೋವ್‌ಗಳ […]
ಗೋಲ್ಡನ್ ಸ್ಟಾರ್ ಅಭಿಮಾನಿಗಳಿಗೆ ಡಬಲ್ ಧಮಾಕಾ! ಸದ್ಯದಲ್ಲೇ ಗಣೇಶ್ 2 ಸಿನಿಮಾಗಳು ಬಿಡುಗಡೆ

ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿಗಳಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಬಳಿಕ ಗಣೇಶ್ ಅವರ ಹೊಸ ಸಿನಿಮಾ ಬಿಡುಗಡೆಯಾಗಿರಲಿಲ್ಲ. ಆದರೆ ಈಗ ಒಂದೇ ತಿಂಗಳ ಅಂತರದಲ್ಲಿ ಎರಡು ಚಿತ್ರಗಳು ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಗಣೇಶ್ ಅಭಿನಯದ ‘ಪಿನಾಕ’ ಹಾಗೂ ‘ಬೃಂದಾವಿಹಾರಿ’ ಚಿತ್ರಗಳ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಾಗಿದ್ದು, ವಿಶೇಷವೆಂದರೆ ಎರಡೂ ಸಿನಿಮಾಗಳು ಅಕ್ಟೋಬರ್ ತಿಂಗಳಲ್ಲೇ ತೆರೆಗೆ ಬರಲಿವೆ. ಅಕ್ಟೋಬರ್ 2ಕ್ಕೆ ‘ಪಿನಾಕ’ ಬಿಡುಗಡೆ ಗಣೇಶ್ ಅಭಿನಯದ ‘ಪಿನಾಕ’ ಸಿನಿಮಾ ಅಕ್ಟೋಬರ್ […]
ಡೇಂಜರ್ ಝೋನ್ ನಲ್ಲಿದೆ ದ.ಕ.ಜಿಲ್ಲೆಯ 88 ಸ್ಥಳಗಳು, ಮಳೆ ಜಾಸ್ತಿಯಾದ್ರೆ ಇಲ್ಲೂ ಸಂಭವಿಸಬಹುದು ದೊಡ್ಡ ಭೂಕುಸಿತ!

ದಕ್ಷಿಣ ಕನ್ನಡ: ನಿರಂತರ ಮಳೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂಕುಸಿತದ ಆತಂಕ ಹೆಚ್ಚಾಗಿದ್ದು, ಜಿಲ್ಲಾಡಳಿತ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಜನರಿಗೆ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ. ಜಿಲ್ಲೆಯ 88 ಸ್ಥಳಗಳನ್ನು ಭೂಕುಸಿತದ ಅತಿ ಅಪಾಯಕಾರಿ ಪ್ರದೇಶಗಳೆಂದು ಗುರುತಿಸಲಾಗಿದೆ. ಜಿಲ್ಲಾಡಳಿತದ ಮಾಹಿತಿ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತ ಘಟನೆಗಳಲ್ಲಿ 17 ಮಂದಿ ಮೃತಪಟ್ಟಿದ್ದು, ಈ ವರ್ಷವೂ ಈಗಾಗಲೇ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್, ನೆರಿಯ, ಶಿಶಿಲ […]
ಮಣಿಪಾಲ: ಶ್ರೀ ಶಾರದಾ ಟ್ರೈನಿಂಗ್ ಇನ್ಸ್ಟಿಟ್ಯೂಟ್’ನಲ್ಲಿ 26-27ನೇ ಸಾಲಿನ ಮೊಂಟೆಸ್ಸರಿ ಶಿಕ್ಷಕಿಯರ ತರಗತಿ ಉದ್ಘಾಟನೆ

ಮಣಿಪಾಲ: ಕಳೆದ 15 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಮಣಿಪಾಲದ ಶ್ರೀ ಶಾರದಾ ಟ್ರೈನಿಂಗ್ ಇನ್ಸ್ಟಿಟ್ಯೂಟ್’ನಲ್ಲಿ 2026-27ನೇ ಸಾಲಿನ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿಯನ್ನು ವಿಧ್ಯುಕ್ತವಾಗಿ ಆರಂಭವಾಯಿತು. ತರಬೇತಿಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಡಾ. ಎನ್.ವಿ. ಕಾಮತ್ ಅವರು ಮಾತ್ರವಲ್ಲದೇ ಅತಿಥಿಗಳಾಗಿ ಶ್ರೀಮತಿ ಚಂದ್ರಕಲಾ, ಶ್ರೀಮತಿ ಚೇತನಾ ಅವರೂ ಭಾಗವಹಿಸಿ ದೀಪ ಪ್ರಜ್ವಲನದ ಮೂಲಕ ಉದ್ಘಾಟನೆಯನ್ನು ನೆರವೇರಿಸಿದರು. ಸಂಸ್ಥೆಯ ಪ್ರಾಂಶುಪಾಲೆ ಶ್ರೀಮತಿ ಸುನೀತಾ ಅವರು ಸಂಸ್ಥೆಯು ನಡೆದು ಬಂದ ದಾರಿ ಹಾಗೂ ಕೋರ್ಸಿನ ಬಗ್ಗೆ ವಿವರಿಸಿದರು. ಈ ಸಂಸ್ಥೆಯ ಮೂಲಕ […]