ಹಾರ್ಮುಜ್ ಜಲಸಂಧಿಯಲ್ಲಿ ಗುಂಡಿನ ದಾಳಿಯಿಂದ ತಪ್ಪಿಸಿಕೊಂಡು ಸುರಕ್ಷಿತವಾಗಿ ಭಾರತಕ್ಕೆ ಬಂದ ತೈಲ ಟ್ಯಾಂಕರ್

ನವದೆಹಲಿ: ಸುಮಾರು 20 ಲಕ್ಷ ಬ್ಯಾರೆಲ್ ಇರಾಕಿ ಕಚ್ಚಾ ತೈಲವನ್ನು ಹೊತ್ತು ಸಾಗುತ್ತಿದ್ದ ತೈಲ ಟ್ಯಾಂಕರ್, ಹಾರ್ಮುಜ್ ಜಲಸಂಧಿಯಲ್ಲಿ ನಡೆದ ಗುಂಡಿನ ದಾಳಿಯಿಂದ ಪಾರಾಗಿ ಭಾರತವನ್ನು ಸುರಕ್ಷಿತವಾಗಿ ತಲುಪಿದೆ. ವರದಿಗಳ ಪ್ರಕಾರ, ಸಂಘರ್ಷ ಪೀಡಿತ ಹಾರ್ಮುಜ್ ಜಲಸಂಧಿಯ ಮೂಲಕ ಸಂಚರಿಸುತ್ತಿದ್ದ ವೇಳೆ ಟ್ಯಾಂಕರ್ ಮೇಲೆ ಗುಂಡಿನ ದಾಳಿ ನಡೆದಿದ್ದು, ಹಡಗಿಗೆ ಸ್ವಲ್ಪ ಪ್ರಮಾಣದ ಹಾನಿಯಾಗಿದೆ. ಆದಾಗ್ಯೂ, ಸಿಬ್ಬಂದಿಯ ಸುರಕ್ಷತೆ ಮತ್ತು ತುರ್ತು ಕ್ರಮಗಳಿಂದ ಟ್ಯಾಂಕರ್ ಯಾವುದೇ ದೊಡ್ಡ ಅಪಾಯವಿಲ್ಲದೆ ಪ್ರಯಾಣವನ್ನು ಮುಂದುವರಿಸಿದೆ. ಎಂಟಿ ಸನ್ಮಾರ್ ಹೆರಾಲ್ಡ್ (MT […]

ವಾಟ್ಸಾಪ್ ಹೊಸ ವೈಶಿಷ್ಟ್ಯದ ಕುರಿತು ಆತಂಕ ವ್ಯಕ್ತಪಡಿಸಿದ ಕೇಂದ್ರ ಸರಕಾರ: ವಾಟ್ಸಾಪ್ ಗೆ ಸರಕಾರ ಕೇಳಿದ ಪ್ರಶ್ನೆಗಳೇನು?

ನವದೆಹಲಿ: ಮೊಬೈಲ್ ಸಂಖ್ಯೆಯನ್ನು ಹಂಚಿಕೊಳ್ಳದೆ ಯೂಸರ್‌ನೇಮ್ ಮೂಲಕ ಸಂಪರ್ಕ ಸಾಧಿಸಲು ಅವಕಾಶ ಕಲ್ಪಿಸುವ ವಾಟ್ಸಪ್‌ನ ಹೊಸ ವೈಶಿಷ್ಟ್ಯದ ಕುರಿತು ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸಿದೆ. ಈ ವೈಶಿಷ್ಟ್ಯಕ್ಕೆ ಸಂಬಂಧಿಸಿದಂತೆ ವಿವರವಾದ ಮಾಹಿತಿಯನ್ನು ಸಲ್ಲಿಸುವಂತೆ ಮೆಟಾಗೆ ಕೇಂದ್ರ ಸರ್ಕಾರ ನೋಟಿಸ್ ಜಾರಿಗೊಳಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ವಾಟ್ಸಪ್‌ನ ಹೊಸ ಯೂಸರ್‌ನೇಮ್ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ, ಬಳಕೆದಾರರ ಸುರಕ್ಷತೆ ಮತ್ತು ಗೌಪ್ಯತೆಗಾಗಿ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದರ ಕುರಿತು ಮೂರು ದಿನಗಳೊಳಗೆ ಸಮಗ್ರ ವರದಿ ಸಲ್ಲಿಸುವಂತೆ […]

ವೈದ್ಯಕೀಯ ಸಹಿತ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ

ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ನೇತೃತ್ವದಲ್ಲಿ ಬುಧವಾರ ವೈದ್ಯಕೀಯ ಸಹಿತ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು.ರಾಷ್ಟ್ರೀಯ ವೈದ್ಯರ ದಿನ ಅಂಗವಾಗಿ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಚ್.ಅಶೋಕ್, ರಾಷ್ಟ್ರೀಯ ಲೆಕ್ಕಪರಿಶೋಧಕರ ದಿನ ಅಂಗವಾಗಿ ಹಿರಿಯ ಲೆಕ್ಕಪರಿಶೋಧಕ ಯು.ಬಿ.ಅಜಿತ್ ಕುಮಾರ್, ಪತ್ರಿಕಾ ದಿನಾಚರಣೆ ಅಂಗವಾಗಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಕುರ್ಯ ಹಾಗೂ ರಾಷ್ಟ್ರೀಯ ಅಂಚೆ ಕಾರ್ಮಿಕರ ದಿನದ ಅಂಗವಾಗಿ ಅಂಚೆಪೇದೆ ನಾಗರಾಜ್ ಶೆಟ್ಟಿಗಾರ್ ಅವರನ್ನು […]