ಮಂಗಳೂರು: ಕೇರಳದ ಉದ್ಯಮಿಯ ಕಾರು ಅಡ್ಡಗಟ್ಟಿ ಪತ್ನಿ-ಮಗನ ಅಪಹರಣ; 180 ಗ್ರಾಂ ಚಿನ್ನ ದರೋಡೆ

(ಇಲ್ಲಿ ಬಳಸಿದ ಚಿತ್ರ ಘಟನೆಯನ್ನು ಸೂಚಿಸುವ ಚಿತ್ರವಷ್ಟೇ.ನಿಜವಾದ ಘಟನೆಯ ಚಿತ್ರವಲ್ಲ) ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಚಲಿಸುತ್ತಿದ್ದ ಕೇರಳದ ಉದ್ಯಮಿಯೊಬ್ಬರ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳ ತಂಡ, ಕಾರಿನಲ್ಲಿದ್ದ ಅವರ ಪತ್ನಿ ಮತ್ತು ಮಗನನ್ನು ಅಪಹರಿಸಿ, 180 ಗ್ರಾಂ ಚಿನ್ನಾಭರಣ ಹಾಗೂ ಕಾರನ್ನು ದೋಚಿ ಪರಾರಿಯಾದ ಘಟನೆ ಭಾನುವಾರ ಮುಂಜಾನೆ ಬೈಕಂಪಾಡಿಯಲ್ಲಿ ನಡೆದಿದೆ. ದರೋಡೆಗೊಳಗಾದವರನ್ನು ಕೇರಳದ ಪಯ್ಯನ್ನೂರಿನ ನಿವಾಸಿ ಹಾಗೂ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಆಭರಣ ಮಳಿಗೆ ನಡೆಸುತ್ತಿರುವ ವಿಕಾಸ್ ಎಂದು ಗುರುತಿಸಲಾಗಿದೆ. ಅವರು ಪತ್ನಿ ಮತ್ತು ಮಗನೊಂದಿಗೆ ಸ್ವಿಫ್ಟ್ […]
ಮಲ್ಪೆ ಬಂದರಿನಲ್ಲಿ ನಿರ್ವಹಣೆ ಇಲ್ಲದೆ ಪಾಳುಬಿದ್ದ ಶೌಚಾಲಯ

ಉಡುಪಿ: ಏಷ್ಯಾದ ಅತಿ ದೊಡ್ಡ ಸರ್ವಋತು ಮೀನುಗಾರಿಕಾ ಬಂದರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಲ್ಪೆ ಬಂದರಿನಲ್ಲಿ ಮೀನುಗಾರರ ಅನುಕೂಲಕ್ಕಾಗಿ ಸುಮಾರು 12 ವರ್ಷಗಳ ಹಿಂದೆ ನಿರ್ಮಿಸಲಾದ ಶೌಚಾಲಯಗಳು ಇಂದಿಗೂ ಬಳಕೆಗೆ ಲಭ್ಯವಾಗದೇ ನಿರುಪಯುಕ್ತವಾಗಿ ಬಿದ್ದಿವೆ. ಮಹಿಳಾ ಮೀನುಗಾರ್ತಿಯರಿಗಾಗಿ ನಿರ್ಮಿಸಿದ್ದ ವಿಶ್ರಾಂತಿ ಕೊಠಡಿಯೂ ಪಾಳುಬಿದ್ದಿದ್ದು, ಮೂಲಸೌಕರ್ಯಗಳ ಕೊರತೆ ಬಗ್ಗೆ ಮೀನುಗಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೀನುಗಾರಿಕೆ ಇಲಾಖೆಯು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಎರಡು ಶೌಚಾಲಯಗಳನ್ನು ನಿರ್ಮಿಸಿದ್ದರೂ, ಅವುಗಳನ್ನು ನಿರ್ವಹಿಸಲು ಸಿಬ್ಬಂದಿಯನ್ನು ನೇಮಿಸದ ಕಾರಣ ಸಾರ್ವಜನಿಕ ಬಳಕೆಗೆ ತೆರೆಯಲಾಗಿಲ್ಲ ಎಂದು […]
ಬಡಗಬೆಟ್ಟು ಸೊಸೈಟಿಯಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು: 20 ಲಕ್ಷ ರೂ. ಮೌಲ್ಯದ ಪರಿಕರ ವಿತರಣೆ

ಉಡುಪಿ: ದೇಶದಲ್ಲಿ ಸಹಕಾರಿ ಕ್ಷೇತ್ರ ಕ್ರಾಂತಿಕಾರಿ ಕೆಲಸ ಮಾಡುತ್ತಿದೆ. ವಾಣಿಜ್ಯ ಬ್ಯಾಂಕ್‌ಗಳಿಗೆ ಸಮಾನಾಂತರವಾಗಿರುವ ಸಹಕಾರಿ ಕ್ಷೇತ್ರವು ಕರ್ನಾಟಕದ ಅಭಿವೃದ್ಧಿ ಹಾಗೂ ಬೆಳವಣಿಗೆಗೆ ಬಹಳಷ್ಟು ಸಹಕಾರ ನೀಡುತ್ತಿದೆ. ಶಿಕ್ಷಣ ಕ್ಷೇತ್ರಕ್ಕೆ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನೀಡುತ್ತಿರುವ ಕೊಡುಗೆ ಶ್ಲಾಘನೀಯ ಎಂದು ಭಾರತ ಸ್ಕೌಟ್ಸ್ ಆಂಡ್ ಗೈಡ್ಸ್ ರಾಜ್ಯ ಪ್ರಧಾನ ಆಯುಕ್ತ, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಹೇಳಿದ್ದಾರೆ. ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ವತಿಯಿಂದ ಉಡುಪಿ ಪುರಭವನದಲ್ಲಿ ಆಯೋಜಿಸಲಾದ ಉಡುಪಿ ಜಿಲ್ಲೆಯ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ […]
ಉಡುಪಿ: ಎರಡು ದೈವಸ್ಥಾನಗಳ ಕಾಣಿಕೆ ಡಬ್ಬಿ ಕಳವು: ಆರೋಪಿ ಬಂಧನ

ಉಡುಪಿ: ನಗರದ ಎರಡು ದೈವಸ್ಥಾನಗಳ ಕಾಣಿಕೆ ಡಬ್ಬಿಗಳನ್ನು ಕಳವು ಮಾಡಿದ್ದ ಪ್ರಕರಣವನ್ನು ಭೇದಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ಬಾಗಲಕೋಟೆ ಮೂಲದ ಮುದುಕಪ್ಪ (27) ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಈ ಹಿಂದೆಯೂ ವಿವಿಧ ದೇವಸ್ಥಾನಗಳ ಕಾಣಿಕೆ ಹುಂಡಿಗಳನ್ನು ಕಳವು ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಕೃತ್ಯಗಳಿಗೆ ಸಂಬಂಧಿಸಿದ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಅದರ ಆಧಾರದಲ್ಲಿ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
ಯಶಸ್ವೀ ಬದುಕಿಗೆ ಕ್ರೀಡೆ ಅವಶ್ಯ:ವಿಠಲ್ ರಿಶಾನ್ ನಾಯಕ್

ಬ್ರಹ್ಮಾವರ ಸಂತೆಕಟ್ಟೆಯಲ್ಲಿ ವಿರಾಟ್ ಫ್ರೆಂಡ್ಸ್ ವತಿಯಿಂದ ಆಯೋಜಿಸಲಾದ ಮಾನ್ಸೂನ್ ಟ್ರೋಫಿ -26 ಕ್ರಿಕೆಟ್ ಪಂದ್ಯಾಟವು ಶುಭಾರಂಭಗೊಂಡಿತು. ದುಬೈ ಟೆಕ್ನೋಟೈಟಾನ್ಸ್ ಕ್ರಿಕೆಟ್ ತಂಡದ ನಾಯಕ,ದುಬೈ ಟೆಕ್ನೋಮರೀನ್ ಸಂಸ್ಥೆಯ ಅಕೌಂಟ್ಸ್ ಹಾಗೂ ಮಾರ್ಕೆಟಿಂಗ್ ವಿಭಾಗದ ಅಧಿಕಾರಿ ಹಾಗೂ ಸ್ಪೋರ್ಟ್ ಕನ್ನಡ ದೃಶ್ಯವಾಹಿನಿಯ ಮಧ್ಯಪ್ರಾಚ್ಯದೇಶಗಳ ಪ್ರತಿನಿಧಿಯಾಗಿರುವ ಉಡುಪಿ ಸೂರಾಲು ಮೂಲದ ವಿಠಲ ನಾಯಕರು ಮಾನ್ಸೂನ್ ಟ್ರೋಫಿಯನ್ನು ಕ್ರಿಕೆಟ್ ಪಂದ್ಯಾಟವನ್ನು ದೀಪಬೆಳಗಿಸಿ ಉದ್ಘಾಟಿಸಿದರು. ತಮ್ಮ ಉದ್ಘಾಟನಾ ಭಾಷಣದಲ್ಲಿ ವಿಠಲ ನಾಯಕರು “ವ್ಯಕ್ತಿಯೊಬ್ಬನ ಯಶಸ್ವೀ ಬದುಕಿಗೆ ಕ್ರೀಡೆಯ ಸರ್ವತೋಮುಖ ಕೊಡುಗೆಯನ್ನು ತಿಳಿಹೇಳಿದರು. ಅಂತೆಯೇ ಮಾನ್ಸೂನ್ […]