ಮುಂದಿನ ಒಂದು ವಾರ ಕರಾವಳಿ ಭಾಗದಲ್ಲಿ ಆರೆಂಜ್ ಅಲರ್ಟ್ ಘೋಷಣೆ

ಉಡುಪಿ: ಭಾರತೀಯ ಹವಾಮಾನ ಇಲಾಖೆ / ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು ಇವರ ಮುನ್ಸೂಚನೆಯಂತೆ ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ 1 ವಾರ ಅಂದರೆ ಜೂನ್ 30 ರಿಂದ ಜುಲೈ 6 ರ ವರೆಗೆ ಆರೆಂಜ್ ಅಲರ್ಟ್ ಮುನ್ಸೂಚನೆ ನೀಡಿದ್ದು, ಜಿಲ್ಲೆಯಲ್ಲಿ ಹೆಚ್ಚಿನ ಗಾಳಿಯಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ ಯೆಂದು ಸೂಚಿಸಿರುತ್ತಾರೆ. ಈ ಹಿನ್ನಲೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರಿಗೆ ಈ ಕೆಳಕಂಡಂತೆ ಸೂಚನೆಗಳನ್ನು ನೀಡಿದೆ. ಸಾರ್ವಜನಿಕರು, ಮಕ್ಕಳು […]
ಸರಕು ಸಾಗಾಣಿಕೆ ವಾಹನಗಳಿಗೆ ಸ್ಪೀಡ್ ಗವರ್ನರ್ ಅಳವಡಿಕೆ ಕಡ್ಡಾಯ: ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

ಉಡುಪಿ: ಸಾರ್ವಜನಿಕ ವಾಹನಗಳು ಸುರಕ್ಷಿತ ಹಾಗೂ ಸುಗಮವಾಗಿ ರಸ್ತೆಗಳಲ್ಲಿ ಸಂಚರಿಸಲು ಅಗತ್ಯವಿರುವ ವೈಜ್ಞಾನಿಕ ರೀತಿಯಲ್ಲಿ ರಸ್ತೆಗಳ ನಿರ್ವಹಣೆ ಮಾಡುವುದರ ಜೊತೆಗೆ ಸರಕು ಸಾಗಣೆ ವಾಹನಗಳಿಗೆ 60 ಕಿ.ಮೀ ಪ್ರತೀ ಗಂಟೆಗೆ ವೇಗದ ಮಿತಿ ಸ್ಪೀಡ್ ಗವರ್ನರ್‌ಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಜಿಲ್ಲೆಯ ಒಳಗೆ ಸಂಚರಿಸುವ […]
ದೇರಳಕಟ್ಟೆಯಲ್ಲಿ MCC ಬ್ಯಾಂಕ್‌ನ 22ನೇ ಶಾಖೆ ಉದ್ಘಾಟನೆ

ಮಂಗಳೂರು: 1912ರಲ್ಲಿ ಸ್ಥಾಪನೆಯಾಗಿ 114 ವರ್ಷಗಳ ಯಶಸ್ವಿ ಸೇವೆಯನ್ನು ಪೂರೈಸಿರುವ ಎಂಸಿಸಿ ಬ್ಯಾಂಕ್ ಲಿಮಿಟೆಡ್ ತನ್ನ 22ನೇ ಶಾಖೆ ಹಾಗೂ ನೂತನ ಎಟಿಎಂ ಅನ್ನು ಭಾನುವಾರ, ಜೂನ್ 28ರಂದು ದೇರಳಕಟ್ಟೆಯ ಫಾ. ಮುಲ್ಲರ್ ಕಾಂಪ್ಲೆಕ್ಸ್‌ನ ನೆಲ ಮಹಡಿಯಲ್ಲಿ ಉದ್ಘಾಟಿಸಿತು. ನೂತನ ಶಾಖೆಯನ್ನು ಎಂಸಿಸಿ ಬ್ಯಾಂಕ್‌ನ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ಉದ್ಘಾಟಿಸಿದರು. ದೇರಳಕಟ್ಟೆಯ ಫಾ. ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಆಡಳಿತಾಧಿಕಾರಿ ವಂ. ಫಾ. ನಿಲೇಶ್ ಕ್ರಾಸ್ತಾ ಅವರು ಎಟಿಎಂ ಅನ್ನು ಉದ್ಘಾಟಿಸಿ ಚಾಲನೆ […]
ಕಾಡಬೆಟ್ಟು ಶ್ರೀ ಅಬ್ಬಗದಾರಗ ವೀರಭದ್ರ ಸಪರಿವಾರ ಶನೈಶ್ಚರ ದೇವಸ್ಥಾನ; ಬ್ರಹ್ಮಕಲಶೋತ್ಸವ ದಿನಾಂಕ ನಿಗದಿ

ಉಡುಪಿ: ಪುರಾತನ ಕಾಡಬೆಟ್ಟು ಶ್ರೀ ಅಬ್ಬಗದಾರಗ ವೀರಭದ್ರ ಸಪರಿವಾರ ಶನೈಶ್ಚರ ದೇವಳದ ಬ್ರಹ್ಮಕುಂಭಾಭಿಷೇಕ ಮಹೋತ್ಸವ 2027ರ ಫೆ.7ರಂದು ಭಾನುವಾರ ನಡೆಯಲಿದೆ ಎಂದು ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಉದ್ಘೋಷಿಸಿದರು. ದೇವಳದ ಸಮಗ್ರ ಜೀರ್ಣೋದ್ಧಾರ ಸಂಕಲ್ಪಿಸಿರುವ ಹಿನ್ನೆಲೆಯಲ್ಲಿ ಶನಿ ತ್ರಯೋದಶಿ ಶುಭ ದಿನವಾದ ಶನಿವಾರ ಕ್ಷೇತ್ರದ ತಂತ್ರಿಗಳಾದ ಕೊರಂಗ್ರಪಾಡಿ ಕುಮಾರಗುರು ತಂತ್ರಿ ನೇತೃತ್ವದಲ್ಲಿ ಸಾಮೂಹಿಕ ಶನಿಶಾಂತಿ, ಕ್ಷೇತ್ರದ ಎಲ್ಲಾ ದೇವರಿಗೆ ವಿಶೇಷ ಪೂಜೆ, ಸಮಷ್ಟಿ ಪ್ರಾರ್ಥನೆ ನಡೆಸಿದ ತರುವಾಯ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಬ್ರಹ್ಮಕಲಶಾಭಿಷೇಕದ ದಿನಾಂಕವನ್ನು […]
ರಸ್ತೆ ವಿಭಾಜಕಗಳ ಮೇಲೆ ಕಾಣುವ ಕಪ್ಪು-ಹಳದಿ ಪಟ್ಟಿಗಳ ಬಗ್ಗೆ ನಿಮಗೆ ತಿಳಿದಿರಲೇಬೇಕು: ಇದರ ಹಿಂದಿದೆ ವೈಜ್ಞಾನಿಕ ಕಾರಣ

ನಗರ ರಸ್ತೆಗಳು, ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಎಕ್ಸ್‌ಪ್ರೆಸ್‌ವೇಗಳಲ್ಲಿ ಸಂಚರಿಸುವಾಗ ರಸ್ತೆ ವಿಭಾಜಕಗಳ (ಡಿವೈಡರ್) ಮೇಲೆ ಪರ್ಯಾಯವಾಗಿ ಬಣ್ಣಿಸಲಾದ ಕಪ್ಪು ಮತ್ತು ಹಳದಿ ಪಟ್ಟಿಗಳನ್ನು ನೀವು ಗಮನಿಸಿರಬಹುದು. ಬಹುತೇಕರು ಇವುಗಳನ್ನು ಕೇವಲ ಅಲಂಕಾರಕ್ಕಾಗಿ ಬಳಸಲಾಗಿದೆ ಎಂದು ಭಾವಿಸುತ್ತಾರೆ. ಆದರೆ ಈ ಬಣ್ಣಗಳ ಬಳಕೆಯ ಹಿಂದೆ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಮಹತ್ವದ ವೈಜ್ಞಾನಿಕ ಕಾರಣವಿದೆ. ಕಪ್ಪು ಮತ್ತು ಹಳದಿ ಬಣ್ಣಗಳ ಸಂಯೋಜನೆಯು ಹೆಚ್ಚಿನ ದೃಶ್ಯ ವ್ಯತಿರಿಕ್ತತೆ (High Contrast) ಉಂಟುಮಾಡುತ್ತದೆ. ಇದರಿಂದ ರಸ್ತೆ ವಿಭಾಜಕಗಳು ದೂರದಿಂದಲೇ ಸ್ಪಷ್ಟವಾಗಿ ಗೋಚರಿಸುತ್ತವೆ. ಹಗಲು […]