ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (Autonomous)ಉಡುಪಿಯಲ್ಲಿ 2026-27ನೇ ಸಾಲಿನ MBA /MCA ವಿದ್ಯಾರ್ಥಿವೇತನ ಪರೀಕ್ಷೆಗೆ ಅರ್ಜಿ ಆಹ್ವಾನ

ಕರ್ನಾಟಕದ ಪ್ರತಿಷ್ಠಿತ ಮ್ಯಾನೇಜ್ಮೆಂಟ್ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (Autonomous)* ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಆರ್ಥಿಕವಾಗಿ ಸುಲಭಗೊಳಿಸುವ ಉದ್ದೇಶದಿಂದ “ಪೂರ್ಣಪ್ರಜ್ಞ ಸ್ಕಾಲರ್‌ಶಿಪ್ ಟೆಸ್ಟ್ – 2026-27″ ಅನ್ನು ಇದೇ ತಿಂಗಳ 28ರಂದು ಆನ್‌ಲೈನ್ ಹಾಗೂ ಆಫ್‌ಲೈನ್ ಮಾದರಿಯಲ್ಲಿ ಆಯೋಜಿಸುತ್ತಿದೆ. ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ಹಾಗೂ MBA ಮತ್ತು MCA ವ್ಯಾಸಂಗ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ವಿದ್ಯಾರ್ಥಿವೇತನ ಪರೀಕ್ಷೆಯಲ್ಲಿ ಭಾಗವಹಿಸುವ ಮೂಲಕ ವಿಶೇಷ ಶುಲ್ಕ ರಿಯಾಯಿತಿ ಹಾಗೂ ವಿದ್ಯಾರ್ಥಿವೇತನ ಸೌಲಭ್ಯಗಳನ್ನು […]

‘ಮಂಗಳೂರಲ್ಲೇ ಇದ್ದಿದ್ದರೆ ಶಿಕ್ಷಕನಾಗಿರುತ್ತಿದ್ದೆ’ ಕರಾವಳಿಯ ನಂಟು ಬಿಚ್ಚಿಟ್ಟ ಶಾರುಖ್ ಖಾನ್

ಮಂಗಳೂರು : “ನಾನು ಮಂಗಳೂರಿನಲ್ಲೇ ಬೆಳೆದಿದ್ದರೆ, ಇಲ್ಲಿನ ಅಲೋಶಿಯಸ್, ಶಾರದಾ ಅಥವಾ ಅಮೃತಾನಂದಮಯಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿ, ಇದೇ ನಗರದಲ್ಲಿ ಶಿಕ್ಷಕನಾಗುತ್ತಿದ್ದೆ” ಎಂದು ಬಾಲಿವುಡ್ ನಟ ಶಾರುಖ್ ಖಾನ್ Shah Rukh Khan ಹೇಳಿದ್ದಾರೆ. ನಗರದ ಅಡ್ಯಾರ್ ಗಾರ್ಡನ್‌ನಲ್ಲಿ ರೋಹನ್ ಕಾರ್ಪೊರೇಷನ್ ಆಯೋಜಿಸಿದ್ದ ‘ಆ್ಯನ್ ಇನ್ನಿಂಗ್ ವಿತ್ ಶಾರುಖ್ ಖಾನ್‘ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನಮಸ್ಕಾರ ಕುಡ್ಡ, ಎಂಚ ಉಲ್ಲರ್” ಎಂದು ತುಳು ಭಾಷೆಯಲ್ಲೇ ಭಾಷಣ ಆರಂಭಿಸಿ ಕರಾವಳಿಯ ಜನರ ಮೆಚ್ಚುಗೆ ಗಳಿಸಿದರು. ಬಾಲ್ಯದ ನೆನಪುಗಳನ್ನು […]

ತ್ರಿಶಾ ಕ್ಲಾಸಸ್: ಸಿಎ ಫೈನಲ್ ಪರೀಕ್ಷೆಯಲ್ಲಿ ಉತ್ತೀರ್ಣರು.

ತ್ರಿಶಾ ಕ್ಲಾಸಸ್: ಸಿಎ ಫೈನಲ್ ಪರೀಕ್ಷೆಯಲ್ಲಿ ಶ್ರೀಕರ್ ಎಂ.ಶೆಟ್ಟಿ ಉತ್ತೀರ್ಣ ಹೊಸದಿಲ್ಲಿಯ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ಮೇ 2026ರಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಶ್ರೀಕರ್ ಎಂ.ಶೆಟ್ಟಿಅವರು ಉತ್ತೀರ್ಣರಾಗಿದ್ದಾರೆ. ಇವರು ಉಡುಪಿಯ ಮನೋಜ್ ಎನ್ ಶೆಟ್ಟಿ ಹಾಗೂ ಶುಭ ಎಂ.ಶೆಟ್ಟಿ ದಂಪತಿಗಳ ಪುತ್ರನಾಗಿದ್ದು,ತಮ್ಮ ಆರ್ಟಿಕಲ್ ಶಿಪ್ ನ್ನು ಉಡುಪಿಯ ದೇವ್ ಆನಂದ್ & ಕೋ.ನಲ್ಲಿ ಪೂರೈಸಿಕೊಂಡಿದ್ದಾರೆ. ಸಿಎ ಫೌಂಡೇಶನ್,ಇಂಟರ್ಮೀಡಿಯಟ್ ತರಬೇತಿಯನ್ನು ತ್ರಿಶಾ ಕ್ಲಾಸಸ್ ನಲ್ಲಿ ಹಾಗೂ ಪದವಿ ವಿದ್ಯಾಭ್ಯಾಸವನ್ನು ಕಟಪಾಡಿಯ ತ್ರಿಶಾ ವಿದ್ಯಾಸಂಧ್ಯಾ ಕಾಲೇಜಿನಲ್ಲಿ ಪಡೆದುಕೊಂಡಿದ್ದಾರೆ. ತ್ರಿಶಾ […]

ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿರುವವರಿಗೆ ಒಳ್ಳೆ ಸುದ್ದಿ:72,186 ಹುದ್ದೆಗಳ ಭರ್ತಿಗೆ ರಾಜ್ಯ ಸರಕಾರ ಅನುಮೋದನೆ

ಬೆಂಗಳೂರು: ರಾಜ್ಯ ಸರ್ಕಾರವು ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ವೇಗಗೊಳಿಸಲು ಮಹತ್ವದ ಕ್ರಮ ಕೈಗೊಂಡಿದ್ದು, ಒಟ್ಟು 72,186 ಹುದ್ದೆಗಳ ಭರ್ತಿಗೆ ಅನುಮೋದನೆ ನೀಡಿದೆ. 2023-24ನೇ ಸಾಲಿನಿಂದ ಇದುವರೆಗೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 40,009 ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆಯು ಸಹಮತಿ ನೀಡಿದೆ. ಜೊತೆಗೆ, ಕಲ್ಯಾಣ-ಕರ್ನಾಟಕ ಸ್ಥಳೀಯ ವೃಂದದಲ್ಲಿ ಖಾಲಿ ಇರುವ 32,177 ಹುದ್ದೆಗಳ ಪೈಕಿ ಶೇ.80ರಷ್ಟು ಹುದ್ದೆಗಳ ಭರ್ತಿಗೂ ಅನುಮೋದನೆ ನೀಡಲಾಗಿದೆ. ನೇಮಕಾತಿ ಪ್ರಕ್ರಿಯೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಆಯ್ಕೆ ಪ್ರಾಧಿಕಾರಗಳಿಂದ […]