ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (Autonomous)ಉಡುಪಿಯಲ್ಲಿ 2026-27ನೇ ಸಾಲಿನ MBA /MCA ವಿದ್ಯಾರ್ಥಿವೇತನ ಪರೀಕ್ಷೆಗೆ ಅರ್ಜಿ ಆಹ್ವಾನ

ಕರ್ನಾಟಕದ ಪ್ರತಿಷ್ಠಿತ ಮ್ಯಾನೇಜ್ಮೆಂಟ್ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (Autonomous)* ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಆರ್ಥಿಕವಾಗಿ ಸುಲಭಗೊಳಿಸುವ ಉದ್ದೇಶದಿಂದ ಪೂರ್ಣಪ್ರಜ್ಞ ಸ್ಕಾಲರ್‌ಶಿಪ್ ಟೆಸ್ಟ್ – 2026-27″ ಅನ್ನು ಇದೇ ತಿಂಗಳ 28ರಂದು ಆನ್‌ಲೈನ್ ಹಾಗೂ ಆಫ್‌ಲೈನ್ ಮಾದರಿಯಲ್ಲಿ ಆಯೋಜಿಸುತ್ತಿದೆ.

ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ಹಾಗೂ MBA ಮತ್ತು MCA ವ್ಯಾಸಂಗ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ವಿದ್ಯಾರ್ಥಿವೇತನ ಪರೀಕ್ಷೆಯಲ್ಲಿ ಭಾಗವಹಿಸುವ ಮೂಲಕ ವಿಶೇಷ ಶುಲ್ಕ ರಿಯಾಯಿತಿ ಹಾಗೂ ವಿದ್ಯಾರ್ಥಿವೇತನ ಸೌಲಭ್ಯಗಳನ್ನು ಪಡೆಯಬಹುದಾಗಿದೆ.

ಸಂಸ್ಥೆಯು NAAC A+ ಮಾನ್ಯತೆ, AICTE ಅನುಮೋದನೆ ಹಾಗೂ ವಿವಿಧ ರಾಷ್ಟ್ರೀಯ ಶೈಕ್ಷಣಿಕ ಮಾನ್ಯತೆಗಳನ್ನು ಪಡೆದಿದ್ದು, ಗುಣಮಟ್ಟದ ಶಿಕ್ಷಣ, ಅನುಭವಿ ಬೋಧಕ ವರ್ಗ ಹಾಗೂ ಅತ್ಯುತ್ತಮ ಪ್ಲೇಸ್‌ಮೆಂಟ್ ಅವಕಾಶಗಳನ್ನು ಒದಗಿಸುತ್ತಿದೆ.

ಸಂಸ್ಥೆಯಲ್ಲಿ MBA (Dual Specialization), MCA (Dual Specialization), ಸಂಶೋಧನಾ (Ph.D.) ಕಾರ್ಯಕ್ರಮಗಳು ಹಾಗೂ ವಿವಿಧ ಮೌಲ್ಯವರ್ಧಿತ ಕೋರ್ಸ್‌ಗಳು ಲಭ್ಯವಿದ್ದು, ವಿದ್ಯಾರ್ಥಿಗಳಿಗೆ ಆಧುನಿಕ ಸೌಲಭ್ಯಗಳಿರುವ ಪ್ರತ್ಯೇಕ ವಸತಿ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

ಆಸಕ್ತ ವಿದ್ಯಾರ್ಥಿಗಳು ಕೆಳಗಿನ ಗೂಗಲ್ ಫಾರ್ಮ್ ಮೂಲಕ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು.

ನೋಂದಣಿ ಲಿಂಕ್:https://forms.gle/nniSM4Sauu1EVZ3p6

ಹೆಚ್ಚಿನ ಮಾಹಿತಿಗಾಗಿ:

📞91 9845233694

🌐 www.pim.ac.inನಿಮ್ಮ ಉನ್ನತ ಶಿಕ್ಷಣದ ಕನಸಿಗೆ ಆರ್ಥಿಕ ಬೆಂಬಲಪೂರ್ಣಪ್ರಜ್ಞ