12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಇದರ ವತಿಯಿಂದ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಯನ್ನು ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಜಯಕರ ಶೆಟ್ಟಿ ಇಂದ್ರಾಳಿ ಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪತಂಜಲಿ ಯೋಗ ಪೀಠ (ಹರಿದ್ವಾರ), ಉಡುಪಿ ಜಿಲ್ಲೆ ಇದರ ಸದಾನಂದ ಶೆಟ್ಟಿಯವರು ಯೋಗ ತರಬೇತಿಯನ್ನು ನೀಡಿದರು. ಪತಂಜಲಿ ಯೋಗ ಪೀಠದ ಮಲ್ಲಿಕಾ ಶೆಟ್ಟಿ, ಸಂಘದ ಸಿಬ್ಬಂದಿ ಭಾರತಿ ಪಿ. ಹೆಗ್ಡೆ ಯೋಗ ಪ್ರಾತ್ಯಕ್ಷಿಕೆ ನೀಡಿದರು.ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರಾದ ರಾಜೇಶ್ ವಿ […]
ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ ಕೃತಕ ಬುದ್ಧಿಮತ್ತೆಬಳಸಿ ಮೂತ್ರನಾಳದ ಸೊಂಕು ಪತ್ತೆ ಹಚ್ಚುವ ವ್ಯವಸ್ಥೆಯ ಅಭಿವೃದ್ಧಿ

ಉಡುಪಿ: ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಕೃತಕ ಬುದ್ಧಿಮತ್ತೆ ಮತ್ತು ದತ್ತಾಂಶ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರಾದ ಪಲ್ಲವಿ ರಾಥೋಡ್, ಪೂಜಾ, ದೀಕ್ಷಾ ಹಾಗೂ ಅನುಶ್ವಿತ ಇವರು ವಿಭಾಗದ ಪ್ರಾಧ್ಯಾಪಕರಾದ ಡಾ. ಗಣೇಶ್ ಪ್ರಸಾದ್ ಇವರ ಮಾರ್ಗದರ್ಶನದಲ್ಲಿ ಕೃತಕ ಬುದ್ಧಿಮತ್ತೆ ಬಳಸಿ ಮೂತ್ರನಾಳದ ಸೋಂಕು ಪತ್ತೆ ಹಚ್ಚುವ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿದ್ದಾರೆ. ಈ ತಂಡವು 80,000 ಕ್ಕೂ ಹೆಚ್ಚು ರೋಗಿಗಳ ಮೂತ್ರದ ಪರೀಕ್ಷೆ ದಾಖಲೆಗಳನ್ನು ಒಳಗೊಂಡ ವಿಶಾಲ ದತ್ತಾಂಶವನ್ನು ಬಳಸಿಕೊಂಡು ಸುಧಾರಿತ ಯಂತ್ರಕಲಿಕೆ ವಿಧಾನದ ಮೂಲಕ […]
ಉಡುಪಿ: ಮಗು ಅಕ್ರಮ ಮಾರಾಟ ಪ್ರಕರಣ- ವೈದ್ಯ ಸೇರಿ ನಾಲ್ವರ ಬಂಧನ

ಉಡುಪಿ: ಒಂದು ತಿಂಗಳ ಹೆಣ್ಣು ಮಗುವನ್ನು ಅಕ್ರಮವಾಗಿ ಮಾರಾಟ ಮಾಡಿದ ಆರೋಪಕ್ಕೆ ಸಂಬಂಧಿಸಿ ಉಡುಪಿ ಮಹಿಳಾ ಪೊಲೀಸ್ ಠಾಣೆ ಪೊಲೀಸರು ವೈದ್ಯರು ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.ಉಡುಪಿ ಕಾಮತ್ ನರ್ಸಿಂಗ್ ಹೋಮ್‌ನ ವೈದ್ಯ ಡಾ. ಕೆ. ಸುರೇಂದ್ರ ಕಾಮತ್ (76), ಸಂತೆಕಟ್ಟೆ ನೇಜಾರಿನ ಎಸ್. ಪ್ರಕಾಶ್ (50), ಕಾರ್ಕಳದ ಸೂಡ ನಿವಾಸಿ ಸಂಪತ್ (22) ಹಾಗೂ ನಂದಳಿಕೆಯ ಸುಪ್ರೀತಿ (22) ಬಂಧಿತರು.ಜೂನ್ 19ರಂದು ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ವಲಯ ಮೇಲ್ವಿಚಾರಕರು ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ […]
ಉಡುಪಿ: ಬಾಲಕಿ ನಾಪತ್ತೆ

ಉಡುಪಿ ಜೂನ್ 22: ಉಡುಪಿ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಪ್ರೀತಿ (16) ಎಂಬ ಬಾಲಕಿಯು ಮೇ 22 ರಿಂದ ನಾಪತ್ತೆಯಾಗಿರುತ್ತಾರೆ.5 ಅಡಿ 2 ಇಂಚು ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು, ಕನ್ನಡ, ಇಂಗ್ಲೀಷ್ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ಕಂಟ್ರೋಲ್ ರೂಂ ದೂ.ಸಂಖ್ಯೆ: 0820-2526444, ಪಿ.ಐ ಮೊ.ನಂ: 9480805458, ಪಿ.ಎಸ್.ಐ ಮೊ.ನಂ: 8277988949, 8277988950 ಹಾಗೂ ಉಡುಪಿ ಮಹಿಳಾ ಪೊಲೀಸ್ ಠಾಣೆ ದೂ.ಸಂಖ್ಯೆ: 0820-2525599 […]
ಸಾರ್ವಜನಿಕರ ಗಮನಕ್ಕೆ

ಇದೇ 28-06-2026 ರಂದು ಶ್ರೀ ಧೂಮಾವತಿ ಯುವಕ ಮಂಡಲ(ರಿ), ವಿಷ್ಣುಮೂರ್ತಿ ನಗರ ನಿಟ್ಟೂರು, ಶ್ರೀಹರಿ ನೇತ್ರಾಲಯ, ಕಾರ್ತಿಕ್ ಎಸ್ಟೇಟ್ ಅಂಬಲಪಾಡಿ ಬೈಪಾಸ್, ಉಡುಪಿ ಹಾಗೂ ಸುಪ್ರೀಮ್ ಡಯಾಗ್ನೊಸ್ಟಿಕ್ ಇವರ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಉಚಿತ ರಕ್ತ ತಪಾಸಣೆ ಶಿಬಿರ ಸ್ಥಳ: ಅಂಗನವಾಡಿಕೇಂದ್ರ, ವಿಷ್ಣುಮೂರ್ತಿ ನಗರ, ನಿಟ್ಟೂರು ಸಮಯ: ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ವಿಶೇಷ ಸೂಚನೆ: ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಉಚಿತ ಆರೋಗ್ಯ ಶಿಬಿರದ ಪ್ರಯೋಜನವನ್ನು ಪಡೆಯಬೇಕಾಗಿ ವಿನಂತಿಸಿಕೊಳ್ಳುತ್ತೇವೆ.