ಎಂಜಿಎಂ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಡಾ.ಗಾಯತ್ರಿ ಗಿರಿಧರ ಪೈ ನಿಯುಕ್ತಿ

ಉಡುಪಿ: ಅಕಾಡೆಮಿ ಆಫ್ ಜನರಲ್ ಎಜುಕೇಷನ್‌ ಮಣಿಪಾಲ್ ಇದರ ಆಡಳಿತಕ್ಕೆ ಒಳಪಟ್ಟ ಉಡುಪಿ ಎಂಜಿಎಂ.ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಡಾ.ಗಾಯತ್ರಿ ಗಿರಿಧರ ಪೈ ನಿಯುಕ್ತಿಗೊಂಡಿದ್ದಾರೆ.ಮೂಲತಃ ಕಾರ್ಕಳದವರಾದ ಇವರು ತಮ್ಮ ಪದವಿ ಶಿಕ್ಷಣವನ್ನು ಕಾಕ೯ಳ ಭುವನೇಂದ್ರ ಕಾಲೇಜಿನಲ್ಲಿ ಪಡೆದು ಎಂ ಎಸ್ ಸಿ (ಸಸ್ಯ ಶಾಸ್ತ್ರ) ಸ್ನಾತಕೋತ್ತರ ಪದವಿಯನ್ನು ಮಂಗಳೂರು ವಿ.ವಿ.ಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇಗ೯ಡೆಯಾಗುವುದರೊಂದಿಗೆ ಗೇೂಲ್ಡ್ ಮೆಡಲ್ ಪುರಸ್ಕೃತರು. ಸಸ್ಯ ಶಾಸ್ತ್ರ ವಿಷಯದ ಮೇಲೆ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿಗಳಿಸಿರುತ್ತಾರೆ.ಶೈಕ್ಷಣಿಕ ಕ್ಷೇತ್ರದಲ್ಲಿ 33 ವರುಷಗಳ ಅನುಭವ ಪಡೆದಿರುವ ಇವರು […]

ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮಗಳನ್ನು ಪ್ರೋತ್ಸಾಹಿಸಿ – ಸಿಇಓ ಪ್ರತೀಕ್ ಬಾಯಲ್

ಉಡುಪಿ: ಜಿಲ್ಲೆಯ ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮಗಳ ವಿಶ್ವಾಸವನ್ನು ಹೆಚ್ಚಿಸುವ ಕೆಲಸ ಇಲಾಖೆಗಳು ಮಾಡಬೇಕು. ಇವುಗಳ ಜೊತೆಗೆ ಬ್ಯಾಂಕುಗಳು ಆರ್ಥಿಕ ನೆರವನ್ನು ನೀಡುವುದರೊಂದಿಗೆ ಉದ್ಯಮವು ಹೆಚ್ಚು ಅಭಿವೃದ್ಧಿ ಹೊಂದಿ, ಹೆಚ್ಚಿನ ಉದ್ಯೋಗಗಳು ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. […]

ಕಾರ್ಕಳ ತಹಶೀಲ್ದಾರರಿಗೆ ಮನವಿ ನೀಡಿದ ದಲಿತ ಸಂಘಟನೆಗಳ ನಾಯಕರು.

ಕಾರ್ಕಳ: ಕಾಬೆಟ್ಟು ಅಂಬೇಡ್ಕರ್ ಭವನ ನಿರ್ವಹಣಾ ಸಮಿತಿಯ ಸದಸ್ಯರ ಅನಧಿಕೃತ ಆಯ್ಕೆಯ ಕುರಿತು ಇಂದು ವಿವಿಧ ದಲಿತ ಸಂಘಟನೆಗಳ ನಾಯಕರುಗಳಿಂದ ತಹಶೀಲ್ದಾರರಿಗೆ ಮನವಿ ನೀಡಲಾಯಿತು. ಮನವಿಯಲ್ಲಿ ನಿರ್ವಹಣಾ ಸಮಿತಿಯ ಸದಸ್ಯರನ್ನು ಅನರ್ಹಗೊಳಿಸಿ ಪುನರ್ ಆಯ್ಕೆ ಮಾಡುವಂತೆ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸೇವಾ ಸಂಘ(ರಿ.)ದ ಗೋವರ್ಧನ್ ರಾಣೆ, ಕರ್ನಾಟಕ ಭೀಮ್ ಸೇನೆ (ರಿ.) ಇದರ ಉಡುಪಿ ಜಿಲ್ಲಾಧ್ಯಕ್ಷರಾದ ಸುಧಾಕರ್ ದಾನಶಾಲೆ, ಡಾ.ಬಿ.ಆರ್.ಅಂಬೇಡ್ಕರ್ ಯುವ ವೇದಿಕೆ(ರಿ.)ಯ ತಾಲೂಕು ಅಧ್ಯಕ್ಷರಾದ ಹರೀಶ್ ಬಜಗೋಳಿ, ಸುಹಾಸ್ ಮುಡಾರು, ರಮೇಶ್ ಜರಿಗುಡ್ಡೆ, […]

ಎಕ್ಸ್ಪರ್ಟ್ ವಿದ್ಯಾರ್ಥಿಗಳ ಸಾಧನೋತ್ಸವ: ಪ್ರಥಮ ಸುತ್ತಿನಲ್ಲೇ ಐಐಟಿ–ಐಐಐಟಿ ಹಾಗೂ ಎನ್‍ಐಟಿಗಳಿಗೆ 26 ವಿದ್ಯಾರ್ಥಿಗಳು ಆಯ್ಕೆ

ಮಂಗಳೂರು: ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಕಲಿತ ಏಳು ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ಐಐಟಿ ಹಾಗೂ 19 ವಿದ್ಯಾರ್ಥಿಗಳು ಎನ್‍ಐಟಿಗಳಿಗೆ ಪ್ರಥಮ ಸುತ್ತಿನಲ್ಲೇಪ್ರವೇಶಕ್ಕೆ ಆಯ್ಕೆಯಾಗಿದ್ದಾರೆ.ಪ್ರತಿಷ್ಠಿತ ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆಯಾಗಿರುವ ಐಐಟಿ ಬಾಂಬೆಗೆ ಸುಹಾಸ್ ಬಸನಗೌಡ ಬಾಲನಗೌಡ್ರ, ಐಐಟಿ ಕಾನ್ಪುರಕ್ಕೆ ಹರ್ಷಿತ್ ಗೌಡ ಎಂ.ವೈ, ಐಐಟಿ ಸರಸ್ಪುರಕ್ಕೆ ರಾಜೀವ್ ಲೋಚನ್ ರೆಡ್ಡಿ ಟಿ., ಐಐಟಿ ಧಾರವಾಡಕ್ಕೆ ಉದ್ದಂಡಿ ಲಕ್ಷ್ಮಿ ಮೇಘನಾ, ಐಐಐಟಿ ಗ್ವಾಲಿಯರ್ ನಿತೀಶ್ ಗೋಪಾಲ್, ಐಐಐಟಿ ಪುಣೆಗೆ ಪ್ರೀತಮ್ ಎಚ್.ಆರ್. ಐಐಐಟಿ ಶಿಬುಪುರ್‍ಕೆ ಸಿದ್ದರಾಮ ಹೊಸಲ್ಲಿ […]

ಕಾರ್ಕಳ ಯಕ್ಷರಂಗಾಯಣದ ಹೆಸರು ಬದಲಿಸಿದ ಸರಕಾರ “ಕರಾವಳಿ ರಂಗಾಯಣ” ಎಂದು ಮರುನಾಮಕರಣ, ಕರಾವಳಿಯ ರಂಗಭೂಮಿಗೆ ಸೂಕ್ತವಾದ ಹೆಸರು ನೀಡಿದ ಸರಕಾರದ ನಿರ್ಧಾರಕ್ಕೆ ಎಲ್ಲೆಡೆ ಪ್ರಶಂಸೆ

ಬೆಂಗಳೂರು/ಕಾರ್ಕಳ: ಕಾರ್ಕಳ ಯಕ್ಷರಂಗಾಯಣದ ಹೆಸರನ್ನು ಕರಾವಳಿ ರಂಗಾಯಣ ಎಂದು ಬದಲಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.ಕರಾವಳಿಯ ಅಸ್ಮಿತೆಯನ್ನು ಕಲೆ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಹೆಸರು ಸೂಕ್ತವೆನ್ನಿಸಿದೆ. ಇಡೀ ಕರಾವಳಿಗೆ ನ್ಯಾಯ ಕೊಡುವ ಹೆಸರು ಇದಾಗಿದ್ದು ಕರಾವಳಿಗರಿಂದ ಹೊಸ ಹೆಸರಿಗೆ ಪ್ರಶಂಸೆ ವ್ಯಕ್ತವಾಗಿದೆ. ಕರಾವಳಿಯಲ್ಲಿ ರಂಗಭೂಮಿಗೆ ದೊಡ್ಡ ಪರಂಪರೆ ಇದೆ. ತುಳು,ಕನ್ನಡ,ಕೊಂಕಣಿ,ಮೊದಲಾದ ಭಾಷೆಗಳ ರಂಗಭೂಮಿಯನ್ನು ಉತ್ತೇಜಿಸಲು ಕಾರ್ಕಳದ ಕರಾವಳಿ ರಂಗಾಯಣ ವೇದಿಕೆಯಾಗಲಿದೆ ಎನ್ನುವ ಮಾತುಗಳು ರಂಗಭೂಮಿ ವಲಯದಲ್ಲಿ ಕೇಳಿಬರುತ್ತಿದೆ.