ಸಾರ್ವಜನಿಕರ ಗಮನಕ್ಕೆ

ಇದೇ 28-06-2026 ರಂದು ಶ್ರೀ ಧೂಮಾವತಿ ಯುವಕ ಮಂಡಲ(ರಿ), ವಿಷ್ಣುಮೂರ್ತಿ ನಗರ ನಿಟ್ಟೂರು, ಶ್ರೀಹರಿ ನೇತ್ರಾಲಯ, ಕಾರ್ತಿಕ್ ಎಸ್ಟೇಟ್ ಅಂಬಲಪಾಡಿ ಬೈಪಾಸ್, ಉಡುಪಿ ಹಾಗೂ ಸುಪ್ರೀಮ್ ಡಯಾಗ್ನೊಸ್ಟಿಕ್ ಇವರ ಸಹಯೋಗದಲ್ಲಿ

ಉಚಿತ ನೇತ್ರ ತಪಾಸಣೆ ಹಾಗೂ ಉಚಿತ ರಕ್ತ ತಪಾಸಣೆ ಶಿಬಿರ

ಸ್ಥಳ: ಅಂಗನವಾಡಿಕೇಂದ್ರ, ವಿಷ್ಣುಮೂರ್ತಿ ನಗರ, ನಿಟ್ಟೂರು

ಸಮಯ: ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ

ವಿಶೇಷ ಸೂಚನೆ:

  • 40 ವರ್ಷ ಮೇಲ್ಪಟ್ಟವರು ಹಾಗೂ ವಿಶೇಷವಾಗಿ 60 ವರ್ಷ ಮೇಲ್ಪಟ್ಟವರು ಈ ಶಿಬಿರದ ಹೆಚ್ಚಿನ ಪ್ರಯೋಜನ ಪಡೆಯಬಹುದು.
  • ರಿಯಾಯಿತಿ ದರದಲ್ಲಿ ಕನ್ನಡಕಗಳ ವಿತರಣೆ.
  • ನೋವುರಹಿತ ಹಾಗೂ ಇಂಜೆಕ್ಷನ್ ರಹಿತ ಪೊರೆ (ಕಣ್ಣಿನ ಪೊರೆ) ಚಿಕಿತ್ಸೆಯ ಸೌಲಭ್ಯ ಲಭ್ಯ.
  • ಕಣ್ಣಿನ ಆರೋಗ್ಯದ ಕುರಿತು ತಜ್ಞ ವೈದ್ಯರಿಂದ ಸಲಹೆ.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಉಚಿತ ಆರೋಗ್ಯ ಶಿಬಿರದ ಪ್ರಯೋಜನವನ್ನು ಪಡೆಯಬೇಕಾಗಿ ವಿನಂತಿಸಿಕೊಳ್ಳುತ್ತೇವೆ.