ಮಂಗಳೂರು: ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಕಲಿತ ಏಳು ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ಐಐಟಿ ಹಾಗೂ 19 ವಿದ್ಯಾರ್ಥಿಗಳು ಎನ್‍ಐಟಿಗಳಿಗೆ ಪ್ರಥಮ ಸುತ್ತಿನಲ್ಲೇ
ಪ್ರವೇಶಕ್ಕೆ ಆಯ್ಕೆಯಾಗಿದ್ದಾರೆ.
ಪ್ರತಿಷ್ಠಿತ ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆಯಾಗಿರುವ ಐಐಟಿ ಬಾಂಬೆಗೆ ಸುಹಾಸ್ ಬಸನಗೌಡ ಬಾಲನಗೌಡ್ರ, ಐಐಟಿ ಕಾನ್ಪುರಕ್ಕೆ ಹರ್ಷಿತ್ ಗೌಡ ಎಂ.ವೈ, ಐಐಟಿ ಸರಸ್ಪುರಕ್ಕೆ ರಾಜೀವ್ ಲೋಚನ್ ರೆಡ್ಡಿ ಟಿ., ಐಐಟಿ ಧಾರವಾಡಕ್ಕೆ ಉದ್ದಂಡಿ ಲಕ್ಷ್ಮಿ ಮೇಘನಾ, ಐಐಐಟಿ ಗ್ವಾಲಿಯರ್ ನಿತೀಶ್ ಗೋಪಾಲ್, ಐಐಐಟಿ ಪುಣೆಗೆ ಪ್ರೀತಮ್ ಎಚ್.ಆರ್. ಐಐಐಟಿ ಶಿಬುಪುರ್‍ಕೆ ಸಿದ್ದರಾಮ ಹೊಸಲ್ಲಿ ಅವರು ಮೊದಲ ಸುತ್ತಿನಲ್ಲಿ ಪ್ರವೇಶ ಪಡೆದಿದ್ದಾರೆ.
ಸುರತ್ಕಲ್‍ನ ಎನ್‍ಐಟಿಕೆಗೆ ಕೃತಿಕಾ ಮಲ್ಲಿಕಾರ್ಜುನ ಪಾಟೀಲ್, ಯಶಸ್ ಎನ್.ಎಂ., ದೀಪಕ್ ಗೌಡ ಎಂ., ಸುಧನ್ವ, ಧೃತಿ ಎಸ್., ಸಮರ್ಥ ಗೌಡ ಆರ್., ರಜತ್ ಜಿ.ಎಸ್. ನಾಯ್ಕ್, ಸಾಯಿ ಶೋಬಿತ್ ಎಸ್., ಅಂಕಿತ್ ಅಶೋಕ್ ದೊಡವಾಡ, ಅಭಿಷೇಕ್ ಆರ್. ಹನಮಂತಗೌಡರ, ವೃದ್ಧಿ ವಿ.ಜೈನ್ ಮೊದಲ ಸುತ್ತಿನಲ್ಲಿ ಸೀಟು ಪಡೆದುಕೊಂಡಿದ್ದಾರೆ.
ಅದೇ ರೀತಿ ಎನ್‍ಐಟಿ ತಿರುಚ್ಚಿಗೆ ಟಿ. ಶ್ರೀಸಾಯಿ ಕಾರ್ತಿಕ್, ಎನ್‍ಐಟಿ ಪುದುಚೇರಿಗೆ ರಿಷಿಕಾ ಕೆ.ಎಸ್., ಎನ್‍ಐಟಿ ಬೋಪಾಲ್ ಪ್ರಜ್ವಲ್ ಪ್ಯಾಟಿ, ಎನ್‍ಐಟಿ ಕೊಚ್ಚಿನ್ ರಿಯಾ ಶಶಿಕಾಂತ್ ಚನ್ನವರ್, ಎನ್‍ಐಟಿ ದುರ್ಗಾಪುರ ಮಿಲನ್ ಮಾದೇಶ್ ಎಸ್., ಎನ್‍ಐಟಿ ಗೋವಾ ನರೇನ್ ವಿ., ಎನ್‍ಐಟಿ ಅಸ್ಸಾಂ ಟಿ.ಎಂ. ಕನಿಷ್ಕ್, ಎನ್‍ಐಟಿ ಅಗರ್ತಲಾ ಶ್ರೀಶಾಂತ್ ಗಾಣಿಗೇರ್ ಸೀಟು ಪಡೆದುಕೊಂಡಿದ್ದಾರೆ. ಒಂದೇ ಶಿಕ್ಷಣ ಸಂಸ್ಥೆಯಿಂದ ಇಷ್ಟೊಂದು ಪ್ರಮಾಣದಲ್ಲಿ ವಿದ್ಯಾರ್ಥಿಗಳು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯುವುದು ಹೆಮ್ಮೆಯ ವಿಷಯವಾಗಿದೆ. ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಹಾಗೂ ಸಂಸ್ಥೆಯ ಶಿಕ್ಷಕರಿಂದ ಉತ್ತಮ ಮಾರ್ಗದರ್ಶನ ಹಾಗೂ ಕಲಿಯುವಿಕೆಗೆ ಪೂರಕ
ವಾತಾವರಣದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ತಿಳಿಸಿದ್ದಾರೆ.

















