ರೈಲಿನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸಿದ್ರೆ ಇನ್ನು ಬೀಳುತ್ತೆ ಭಾರೀ ದಂಡ, ಜು.1ರಿಂದ ರೈಲ್ವೆ ಹೊಸ ನಿಯಮ,ಇನ್ನೂ ಯಾವುದಕ್ಕೆಲ್ಲಾ ಬೀಳುತ್ತೆ ಫೈನ್!

ನವದೆಹಲಿ: ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಭಾರತೀಯ ರೈಲ್ವೆ ಇಲಾಖೆ ಮುಂದಾಗಿದೆ. ಜುಲೈ 1ರಿಂದ ಹೊಸ ದಂಡ ನಿಯಮಗಳು ಜಾರಿಗೆ ಬರಲಿದ್ದು, ಟಿಕೆಟ್‌ರಹಿತ ಪ್ರಯಾಣ ಸೇರಿದಂತೆ ವಿವಿಧ ಉಲ್ಲಂಘನೆಗಳಿಗೆ ಹೆಚ್ಚುವರಿ ದಂಡ ವಿಧಿಸಲಾಗುತ್ತದೆ. ಪ್ರಸ್ತುತ ಟಿಕೆಟ್ ಇಲ್ಲದೆ ಪ್ರಯಾಣಿಸಿದರೆ ಟಿಕೆಟ್ ದರದ ಜೊತೆಗೆ 250 ರೂ. ದಂಡ ವಿಧಿಸಲಾಗುತ್ತಿದೆ. ಹೊಸ ನಿಯಮದ ಪ್ರಕಾರ, ಟಿಕೆಟ್ ದರದೊಂದಿಗೆ 500 ರೂ. ದಂಡ ಪಾವತಿಸಬೇಕಾಗುತ್ತದೆ. ಸುಮಾರು 13 ವರ್ಷಗಳ ಬಳಿಕ ರೈಲ್ವೆ ಇಲಾಖೆ […]
ಆನ್‌ಲೈನ್ ಟ್ರೇಡಿಂಗ್ ಹೆಸರಲ್ಲಿ 20 ಲಕ್ಷ ದೋಚಿದ ಪ್ರಕರಣ: ಸಿಐಡಿ ಇನ್ಸ್‌ಪೆಕ್ಟರ್ ಸೇರಿ ಮೂವರ ಬಂಧನ

ಬೆಂಗಳೂರು: ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಹಣ ವಾಪಸ್ ಸಿಗುತ್ತದೆ ಎಂದು ನಂಬಿಸಿ ಕೇರಳ ಮೂಲದ ಯುವಕರಿಂದ 20 ಲಕ್ಷಕ್ಕೂ ಅಧಿಕ ಹಣ ದೋಚಿದ ಪ್ರಕರಣದಲ್ಲಿ ಸಿಐಡಿ ಇನ್ಸ್‌ಪೆಕ್ಟರ್ ಸೇರಿ ಮೂವರನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸಿಐಡಿ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ, ಕುಪೇಂದ್ರ ರೆಡ್ಡಿ ಹಾಗೂ ವಸಂತ್ ಕುಮಾರ್ ಎಂದು ಗುರುತಿಸಲಾಗಿದೆ. ಇವರ ವಿರುದ್ಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಡಕಾಯಿತಿ, ಬೆದರಿಕೆ, ಹಲ್ಲೆ ಹಾಗೂ ಒಳಸಂಚು ಆರೋಪದಡಿ ಪ್ರಕರಣ ದಾಖಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, […]
ಕಿನ್ನಿಮೂಲ್ಕಿಯಲ್ಲಿ ಅನಾಥವಾದ ಅಂಚೆ ಪೆಟ್ಟಿಗೆ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ

ಉಡುಪಿ: ನಗರದ ಕಿನ್ನಿಮೂಲ್ಕಿ ಅಗ್ನಿಶಾಮಕ ದಳ ರಸ್ತೆಯ ಪಕ್ಕದಲ್ಲಿ ಹಲವು ವರ್ಷಗಳಿಂದ ಅಂಚೆ ಪೆಟ್ಟಿಗೆಯೊಂದು ಅನಾಥವಾಗಿ ಬಿದ್ದಿದ್ದು, ಸಂಬಂಧಪಟ್ಟ ಇಲಾಖೆಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರ ಅಂಚೆ ಸೇವೆಯ ಅನುಕೂಲಕ್ಕಾಗಿ ಅಳವಡಿಸಲಾಗಿದ್ದ ಅಂಚೆ ಪೆಟ್ಟಿಗೆ ಮುರಿದು ರಸ್ತೆ ಬದಿಯಲ್ಲಿ ಬಿದ್ದಿದ್ದು, ಇದುವರೆಗೆ ಅದನ್ನು ತೆರವುಗೊಳಿಸುವ ಅಥವಾ ದುರಸ್ತಿಗೊಳಿಸುವ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಂಚೆ ಇಲಾಖೆಯಾಗಲಿ, ಉಡುಪಿ ನಗರಸಭೆಯಾಗಲಿ ರಸ್ತೆ ಬದಿಯಲ್ಲಿ ಬಿದ್ದಿರುವ ಅಂಚೆ ಪೆಟ್ಟಿಗೆಯ ಕಡೆ ಗಮನ ಹರಿಸಿಲ್ಲ. ಹಲವು […]
ಕೂಡಲೇ ಬೇಕಾಗಿದ್ದಾರೆ:ಕಂಟೆಂಟ್ ಮಾರ್ಕೆಟಿಂಗ್ ಮ್ಯಾನೇಜರ್.

ಉಡುಪಿಯ ಪ್ರಸಿದ್ಧ ಡಿಜಿಟಲ್ ಮಾರ್ಕೆಟಿಂಗ್ ಕಂಪನಿ ಗೆ ಕಂಟೆಂಟ್ ಮಾರ್ಕೆಟಿಂಗ್ ಮ್ಯಾನೇಜರ್ ಬೇಕಾಗಿದ್ದಾರೆ.ಆಸಕ್ತಿವುಳ್ಳವರು ಕೂಡಲೇ ಸಂಪರ್ಕಿಸಿ :8105732895 Requirements:Excellent communication skillsProblem-solving mindsetStrategic ThinkingLeadership skillsLOCATION: UDUPISend your CV & portofolio: [email protected]: 8105732895
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಮೊದಲ ಜೆಂಡರ್ ಅಫರ್ಮಿಂಗ್ ಶಸ್ತ್ರಚಿಕಿತ್ಸೆ ಯಶಸ್ವಿ.

ಮಣಿಪಾಲ; ಕಸ್ತೂರ್ಬಾ ಆಸ್ಪತ್ರೆ ಮಣಿಪಾಲವು ಜೂನ್ 10, 2026 ರಂದು ಟ್ರಾನ್ಸ್ಜೆಂಡರ್ ಮಹಿಳೆಗೆ ತನ್ನ ಮೊದಲ ಜೆಂಡರ್ ಅಫರ್ಮಿಂಗ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿತು. ಶಸ್ತ್ರಚಿಕಿತ್ಸೆ ಚೆನ್ನಾಗಿ ನಡೆಯಿತು, ಮತ್ತು ರೋಗಿಯು ಈಗ ಆಸ್ಪತ್ರೆ ತಂಡದ ಆರೈಕೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಪ್ರತಿಯೊಬ್ಬ ರೋಗಿಯು, ಅವರ ಹಿನ್ನೆಲೆ ಏನೇ ಇರಲಿ ಆದರೆ ಅವರು ಉತ್ತಮ ಆರೈಕೆಯನ್ನು ಪಡೆಯುತ್ತಾರೆ ಎಂದು ಖಚಿತಪಡಿಸಿಕೊಳ್ಳುವ ಪ್ರಯತ್ನಗಳಲ್ಲಿ ಇದು ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಆಸ್ಪತ್ರೆ ಅಭಿಪ್ರಾಯಪಟ್ಟಿದೆ. ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ವಿಭಾಗವು ಕೆಲವು ಸಮಯದಿಂದ ಮುಖದ […]