ಕೈಗಾರಿಕಾ ವಲಯದ ಕುಂದು ಕೊರತೆ: ಅಹವಾಲು ಸ್ವೀಕಾರ

ಉಡುಪಿ: ಜಿಲ್ಲಾಮಟ್ಟದ ಕೈಗಾರಿಕಾ ಸ್ಪಂದನ ಸಭೆ ಹಾಗೂ ಜಿಲ್ಲಾ ರಫ್ತು ಉತ್ತೇಜನಾ ಸಮಿತಿ ಸಭೆಯು ಜೂನ್ 16 ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಜಿಲ್ಲೆಯ ಕೈಗಾರಿಕೋದ್ಯಮಿಗಳು ತಮ್ಮ ಅಹವಾಲುಗಳನ್ನು ಜಿಲ್ಲಾ ಕೈಗಾರಿಕಾ ಕೇಂದ್ರ, ಶಿವಳ್ಳಿ ಕೈಗಾರಿಕಾ ಪ್ರದೇಶ, ಮಣಿಪಾಲ, ಉಡುಪಿ ಕಚೇರಿಗೆ ಖುದ್ದಾಗಿ ಅಥವಾ [email protected] ಮೂಲಕ ಜೂನ್ 10 ರ ಒಳಗಾಗಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂ.ಸಂ: 0820-2575650 ಅನ್ನು ಸಂಪರ್ಕಿಸುವoತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.

ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆ: ಅರ್ಜಿ ಆಹ್ವಾನ

ಉಡುಪಿ: ಮೀನುಗಾರಿಕೆ ಇಲಾಖೆಯ ವತಿಯಿಂದ ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ಫಲಾನುಭವಿ ಆಧಾರಿತ ಯೋಜನೆಗಳನ್ನು ಅನುಷ್ಠಾನಗೊಳಿಸಲು ಘಟಕವಾರು ಮತ್ತು ವರ್ಗವಾರು ಗುರಿಗಳನ್ನು ನಿಗದಿಪಡಿಸಿದ್ದು, ಯೋಜನೆಯನ್ನು ಪಾರದರ್ಶಕವಾಗಿ ಅನುಷ್ಠಾನಗೊಳಿಸಲು ಜಿಲ್ಲೆಯ ಅರ್ಹ ಮೀನುಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಲು ಜೂನ್ 20 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಉಡುಪಿ, ಕುಂದಾಪುರ ಹಾಗೂ ಕಾರ್ಕಳ ತಾಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ ಅಥವಾ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರ ಕಚೇರಿಯನ್ನು ಕಛೇರಿ ವೇಳೆಯಲ್ಲಿ […]

ಮಣಿಪಾಲದ ಶ್ರೀ ಶಾರದಾ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ನಲ್ಲಿ ಶಿಕ್ಷಕರ ತರಬೇತಿ ಕೋರ್ಸ್‌ಗೆ ಪ್ರವೇಶಾತಿ ಶುರು: ಶಿಕ್ಷಣ ಕ್ಷೇತ್ರದಲ್ಲಿ ವೃತ್ತಿ ಜೀವನ ಕಟ್ಟಿಕೊಳ್ಳಲು ಈ ತರಬೇತಿ ಪಡೀರಿ.

ಮಣಿಪಾಲ: ಶಿಕ್ಷಕರಾಗಿ ವೃತ್ತಿಜೀವನ ರೂಪಿಸಿಕೊಳ್ಳಲು ಆಸಕ್ತಿ ಹೊಂದಿರುವ ಮಹಿಳೆಯರಿಗೆ ಶ್ರೀ ಶಾರದಾ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ವತಿಯಿಂದ N.T.T. (Nursery Teacher Training) ಹಾಗೂ ಮಾಂಟೆಸ್ಸೋರಿ (Monteesori Teacher Training) ಶಿಕ್ಷಕರ ತರಬೇತಿ ಕೋರ್ಸ್‌ ಶುರುವಾಗಿದ್ದು ಇದೀಗ ಪ್ರವೇಶಾತಿ ಆರಂಭಗೊಂಡಿದೆ. ಪಿಯುಸಿ ಉತ್ತೀರ್ಣರಾದವರು ಹಾಗೂ ಯಾವುದೇ ಪದವೀಧರರು ಈ ಕೋರ್ಸ್‌ಗೆ ಅರ್ಜಿ ಸಲ್ಲಿಸಲು ಅರ್ಹರು. ಅನುಭವೀ ಬೋಧಕರಿಂದ ತರಬೇತಿ, ಪ್ರಾಯೋಗಿಕ ಕಲಿಕಾ ವಿಧಾನ, ಪ್ರಮಾಣಪತ್ರ ಕೋರ್ಸ್ ಹಾಗೂ ಉದ್ಯೋಗ ಸಹಾಯ ವ್ಯವಸ್ಥೆಯನ್ನು ಸಂಸ್ಥೆ ಒದಗಿಸುತ್ತದೆ. 2025-26 ಸಾಲಿನಲ್ಲಿ ಶೇಕಡ […]

ಉಡುಪಿ: ಜಲಜೀವನ್ ಮಿಷನ್ ಕಾಮಗಾರಿ ಅವ್ಯವಸ್ಥೆ: ಕೃಷಿಕರಿಗೆ ಸಂಕಷ್ಟ – ಕೃತಕ ನೆರೆ ಸೃಷ್ಟಿ

ಉಡುಪಿ: ಹೊಸಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬದ್ರಾಪುರದ ಕಪ್ಪೆ ಹೊಂಡ ಪ್ರದೇಶದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ನಡೆದಿರುವ ಕಾಮಗಾರಿಯ ಅವ್ಯವಸ್ಥೆಯಿಂದ ಸ್ಥಳೀಯ ಕೃಷಿಕರೊಬ್ಬರು ಸಂಕಷ್ಟಕ್ಕೆ ಸಿಲುಕಿರುವ ಘಟನೆ ಬೆಳಕಿಗೆ ಬಂದಿದೆ. ಕಾಮಗಾರಿ ವೇಳೆ ರಸ್ತೆ ಬದಿಯ ಚರಂಡಿಯನ್ನು ಮುಚ್ಚಿರುವ ಪರಿಣಾಮ ಮೊದಲ ಮಳೆಯಲ್ಲೇ ನೀರು ಕೃಷಿ ಭೂಮಿಗೆ ನುಗ್ಗಿ ಕೃತಕ ನೆರೆ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯ ಕೃಷಿಕ ಮಾಧವ ಭಂಡಾರಿ ಅವರ ತೋಟಕ್ಕೆ ಮಳೆನೀರು ಹರಿದು ಬಂದು ಭೂಮಿ ಜಲಾವೃತಗೊಂಡಿದ್ದು, ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದೆ. ರಸ್ತೆ […]

ಮಟ್ಟುಗುಳ್ಳದ ಪ್ರತಿಕೃತಿ ಮರುನಿರ್ಮಾಣ: ಗ್ರಾಮಸ್ಥರ ಕಾರ್ಯಕ್ಕೆ ಭಾರೀ ಮೆಚ್ಚುಗೆ

ಉಡುಪಿ: ಮಟ್ಟು ಗ್ರಾಮದ ಹೆಮ್ಮೆ, ರೈತರ ಭಾವನೆ ಹಾಗೂ ವಿಶ್ವಪ್ರಸಿದ್ಧ ಮಟ್ಟುಗುಳ್ಳದ ಪ್ರತೀಕವಾಗಿದ್ದ ಪ್ರತಿಕೃತಿಯನ್ನು ಇತ್ತೀಚೆಗೆ ಕಿಡಿಗೇಡಿಗಳು ಧ್ವಂಸಗೊಳಿಸಿದ್ದ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮದ ಯುವಕರು ಹಾಗೂ ಸ್ಥಳೀಯರು ಒಗ್ಗೂಡಿ ಧ್ವಂಸಗೊಂಡ ಪ್ರತಿಕೃತಿಯನ್ನು ಮರುನಿರ್ಮಿಸಿ ಮಾದರಿಯಾಗಿದ್ದಾರೆ. ಮಾಜಿ ಕೋಟೆ ಗ್ರಾಮ ಪಂಚಾಯತ್ ಸದಸ್ಯ ರಮೇಶ್ ಪೂಜಾರಿ ಮಟ್ಟು ಅವರ ನೇತೃತ್ವದಲ್ಲಿ ಅವಿನಾಶ್ ಮಟ್ಟು, ನಾಗೇಶ್ ಪೂಜಾರಿ, ಸುಜಿತ್, ರೋಷನ್, ಅಮಿತ್, ಮಹೇಶ್, ರವಿ ವಿಶ್ವಕರ್ಮ, ಮನೀಶ್, ಜಗದೀಶ್ ಸೇರಿದಂತೆ ಹಲವರು ಸ್ವಯಂಪ್ರೇರಿತವಾಗಿ ಕಾರ್ಯನಿರ್ವಹಿಸಿ […]